ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕಿರುಷಷ್ಠಿ, ಬಲಿ ಉತ್ಸವ, ನೃತ್ಯ ಬಲಿ ಸೇವೆ

ಪುತ್ತೂರು: ತಾಲೂಕಿನ ಕಾರಣಿಕ ದೇವಸ್ಥಾನವಾದ ಆರ್ಯಾಪು ಗ್ರಾಮದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬುಧವಾರ ಮಧ್ಯಾಹ್ನ ಕಿರುಷಷ್ಠಿ, ರಾತ್ರಿ ದೇವರ ಬಲಿ ಉತ್ಸವ ನಡೆದು, ನೃತ್ಯ ಬಲಿ ಸೇವೆ ಜರಗಿತು.


ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಪೂರ್ವಶಿಷ್ಟ ಸಂಪ್ರದಾಯದ ಪ್ರಕಾರ ಕಿರುಷಷ್ಠಿ ಉತ್ಸವ ನಡೆಯಿತು. ಬುಧವಾರ ಬೆಳಿಗ್ಗೆ ಗಣಪತಿ ಹೋಮ, ಶ್ರೀ ಸುಬ್ರಹ್ಮಣ್ಯ ದೇವರಿಗೆ ಪವಮಾನಭಿಷೇಕ, ನಾಗದೇವರಿಗೆ ಆಶ್ಲೇಷ ಹೋಮ, ಆಶ್ಲೇಷ ಬಲಿ, ಮಧ್ಯಾಹ್ನ ತುಲಾಭಾರ, ಮಹಾಪೂಜೆ, ಅನ್ನಸಂತರ್ಪಣೆ ಜರಗಿತು.


ಸಂಜೆ 6.30ಕ್ಕೆ ದುರ್ಗಾಪೂಜೆ ನಡೆದು, ಬಳಿಕ ಶ್ರೀ ಸುಬ್ರಹ್ಮಣ್ಯ ದೇವರ ಬಲಿ ಹೊರಟು ಪೆರಿಯ ಬಲಿ ಉತ್ಸವ ನಡೆಯಿತು. ಕಟ್ಟೆ ಪೂಜೆ ನಡೆದು, ಕೇರಳ ಸಂಪ್ರದಾಯದ ನೃತ್ಯ ಬಲಿ ಸೇವೆ, ಮೇಲ್ಮಜಲಿನಲ್ಲಿ ಸಾರ್ವಜನಿಕ ಕಟ್ಟೆ ಪೂಜೆ ನಡೆದು, ಸಂಪ್ಯ ಶ್ರೀ ಗಣೇಶ ಸುಬ್ರಹ್ಮಣ್ಯ ಕಟ್ಟೆಗೆ ಶ್ರೀ ದೇವರ ಸವಾರಿ ನಡೆಯಿತು.



































 
 


ಇಂದು ದರ್ಶನ ಬಲಿ, ನೇಮ


ಡಿ. 29ರಂದು ಬೆಳಿಗ್ಗೆ ದೇವರ ಬಲಿ ಹೊರಟು ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಗಂಧ – ಪ್ರಸಾದ, ನವಕ ಕಲಶ, ಮಹಾಪೂಜೆ, ಮಂತ್ರಾಕ್ಷತೆ ನಡೆಯಲಿದೆ. ಮಧ್ಯಾಹ್ನದ ಬಳಿಕ ವ್ಯಾಘ್ರ ಚಾಮುಂಡಿ ನೇಮೋತ್ಸವ, ಗುಳಿಗ ದೈವಕ್ಕೆ ತಂಬಿಲ ನಡೆಯಲಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top