ಪುತ್ತೂರು: 2022ನೇ ಸಾಲಿನ ಕೇಂದ್ರ ಸರ್ಕಾರದ ‘ಅಟಲ್ ಸಾಧನಾ ಪುರಸ್ಕಾರ’ಕ್ಕೆ ಪುತ್ತೂರಿನ ನರಿಮೊಗರು ಎಸ್.ಜಿ. ಕಾರ್ಪೊರೇಟ್ಸ್ ಸಮೂಹದ ಮೆಗಾ ಪ್ರೊಸೆಸಿಂಗ್ ನ ಬಿಂದು ಸಮೂಹ ಸಂಸ್ಥೆ ಆಯ್ಕೆಯಾಗಿದೆ.
ಬಿಂದು ಸಮೂಹ ಸಂಸ್ಥೆ ಆಡಳಿತ ನಿರ್ದೇಶಕರಾದ ಸತ್ಯಶಂಕರ್ ಭಟ್ ಹಾಗೂ ರಂಜಿತಾ ಶಂಕರ್ ಅವರು ನವದೆಹಲಿ ವಿಜ್ಞಾನ ಭವನದಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿದರು.
ಕೇಂದ್ರ ಉಕ್ಕು ಮತ್ತು ಗ್ರಾಮೀಣಾಭಿವೃದ್ಧಿ ರಾಜ್ಯ ಸಚಿವ ಫಗ್ಗನ್ ಕುಲಸ್ತೆ, ಬಿಜೆಪಿ ವಕ್ತಾರ ಶಾನವಾಜ್ ಹುಸೇನ್ ಪ್ರಶಸ್ತಿ ಪ್ರದಾನ ಮಾಡಿದರು.
ಆಹಾರ ಉತ್ಪನ್ನ ತಯಾರಿಕ ಘಟಕ ವಿಭಾಗದಲ್ಲಿ ಗ್ರಾಮೀಣ ಭಾಗದಲ್ಲಿ ಉದ್ಯೋಗಾವಕಾಶ ಮತ್ತು ಗ್ರಾಮೀಣ ಭಾಗದ ಆರ್ಥಿಕ ಸಂಚಲನಕ್ಕಾಗಿ ಕೇಂದ್ರ ಸರಕಾರದ ಗ್ರಾಮೀಣ ಅಭಿವೃದ್ಧಿ ಸಚಿವಾಲಯ, ಆಹಾರ ನಿರ್ವಹಣಾ ಕೈಗಾರಿಕಾ ಸಚಿವಾಲಯ ಈ ಪುರಸ್ಕಾರವನ್ನು ನೀಡಿದೆ.