ಪುತ್ತೂರು: ಉಪಚುನಾವಣೆ ಎದುರಿಸುತ್ತಿರುವ ನಿಡ್ಪಳ್ಳಿಯ ಒಂದು ಕ್ಷೇತ್ರದಲ್ಲಿ ಪುತ್ತಿಲ ಪರಿವಾರ ಸಭೆ ಹಾಗೂ ಮನೆ ಮನೆ ಭೇಟಿ ನಡೆಯಿತು. ಇಲ್ಲಿಯೂ ಬ್ಯಾಟ್ ಚಿಹ್ನೆಯೇ ಸಿಕ್ಕಿರುವುದರಿಂದ ಪುತ್ತಿಲ ಪರಿವಾರ ಪ್ರಚಾರ ಸಂದರ್ಭ ಬ್ಯಾಟ್ ಹಿಡಿದೇ ಫೀಲ್ಡ್ ಗೆ ಹೋಗುತ್ತಿದ್ದಾರೆ.
ನೂರಾರು ಕಾರ್ಯಕರ್ತರ ಸಮ್ಮುಖದಲ್ಲಿ ಅಧ್ಯಕ್ಷ ಪ್ರಸನ್ನ ಮಾರ್ತಾರ ಅಧ್ಯಕ್ಷತೆಯಲ್ಲಿ ಪುತ್ತಿಲ ಪರಿವಾರದ ಸಭೆ ನಿಡ್ಪಳ್ಳಿಯಲ್ಲಿ ಜರಗಿತು.
ಹಿಂದೂ ಮುಖಂಡ ಅರುಣ್ ಪುತ್ತಿಲ, ನಿಡ್ಪಳ್ಳಿಯ ಪುತ್ತಿಲ ಪರಿವಾರದ ಅಭ್ಯರ್ಥಿ ಜಗನ್ನಾಥ ರೈ ಕೊಳಂಬೆತ್ತಿಮಾರು, ನಿಡ್ಪಳ್ಳಿ ಶಾಂತಾದುರ್ಗಾ ದೇವಸ್ಥಾನದ ವ್ಯವಸ್ಥಾಪನ ನಾರಾಯಣ ರೈ , ಪುತ್ತಿಲ ಪರಿವಾರದ ನಿಡ್ಪಳ್ಳಿಯ ಅಧ್ಯಕ್ಷರಾದ ಸುರೇಶ್ , ಕುಮಾರ ನರಸಿಂಹ ಭಟ್ , ಪ್ರಮುಖರಾದ ರವಿ ಕುಮಾರ್ ರೈ ಮಠ , ಕೃಷ್ಣಪ್ರಸಾದ್ ಶೆಟ್ಟಿ , ಅನಿಲ್ ಕನ್ನರ್ನೂಜಿ ಸಹಿತ ಹಲವು ಕಾರ್ಯಕರ್ತರು ಭಾಗವಹಿಸಿದ್ದರು.