ನೆಲ್ಯಾಡಿ: ನೆಲ್ಯಾಡಿ ಶ್ರೀ ರಾಮ ವಿದ್ಯಾಲಯ ಹಾಗೂ ನೆಲ್ಯಾಡಿ ಶ್ರೀರಾಮ ಗ್ರಾಮ ವಿಕಾಸ ಸಮಿತಿ ವತಿಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರ ನೆಲ್ಯಾಡಿ ಹಾಗೂ ಶಿರಾಡಿ ಅರಕ್ಷಕ ಹೊರ ಠಾಣೆ ಸಹಯೋಗದಲ್ಲಿ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶಯದಂತೆ ವಿವೇಕ ಸಂಜೀವಿನಿ ಕಾರ್ಯಕ್ರಮ ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಶಿರಾಡಿ ಹೊರ ಠಾಣೆಯಲ್ಲಿ ನಡೆಯಿತು.
ಆರೋಗ್ಯ ಕೇಂದ್ರದ ಡಾ.ಶಿಶಿರ, ಆರಕ್ಷಕ ಠಾಣಾಧಿಕಾರಿ ಕುಶಾಲಪ್ಪ ಮತ್ತು ಅರಣ್ಯ ಇಲಾಖೆಯ ಅಧಿಕಾರಿ ದೇವಿಪ್ರಸಾದ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಸುಮಾರು 40 ವರುಷಗಳಿಂದ ನಾಟಿ ವೈದ್ಯರಾಗಿರುವ ಹೇಮಾವತಿ ಶೆಟ್ಟಿ ಬಲ್ಯ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಆರಕ್ಷಕ ಠಾಣೆ ಯ ಆವರಣದಲ್ಲಿ ಔಷಧಿಯ ಸಸಿಗಳನ್ನು ನೆಡಲಾಯಿತು
ಶ್ರೀರಾಮ ವಿದ್ಯಾಲಯದ ಕಾರ್ಯದರ್ಶಿಗಳಾದ ಮೂಲಚಂದ್ರ ಕಾಂಚನ, ನೆಲ್ಯಾಡಿ ಗ್ರಾಮ ಪಂಚಾಯತ್ ಸದಸ್ಯ ರವಿಪ್ರಸಾದ್ ಶೆಟ್ಟಿ ಬಲ್ಯ ಶ್ರೀರಾಮ ಗ್ರಾಮ ವಿಕಾಸದ ಅಧ್ಯಕ್ಷ ಗಂಗಾಧರ ಶೆಟ್ಟಿ ಕೊಲ್ಯೊಟ್ಟು, ಗ್ರಾಮ ವಿಕಾಸ ಸಮಿತಿ ಕಾರ್ಯದರ್ಶಿ ಲೋಕೇಶ್ ಕೊಲ್ಯೊಟ್ಟು, ಶ್ರೀರಾಮ ವಿದ್ಯಾಲಯದ ಮುಖ್ಯ ಶಿಕ್ಷಕ ಗಣೇಶ್ ವಾಗ್ಲೆ, ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಿಕ್ಷಕ ಅನಿಲ್ ಅಕ್ಕಪ್ಪಾಡಿ ಕಾರ್ಯಕ್ರಮ ಸಂಘಟಿಸಿದರು.