ಪುತ್ತೂರು: ಆರ್ಯಾಪು ಗ್ರಾಮ ಪಂಚಾಯಿತಿ ಉಪ ಚುನಾವಣೆಗೆ ಪುತ್ತಿಲ ಪರಿವಾರದಿಂದ ಸುಬ್ರಹ್ಮಣ್ಯ ಬಲ್ಯಾಯ ದೊಡ್ಡಡ್ಕ ಮಂಗಳವಾರ ನಾಮಪತ್ರ ಸಲ್ಲಿಸಿದರು.
ಈ ಹಿಂದಿನ ಅಭ್ಯರ್ಥಿ ನಿಧನದಿಂದ ತೆರವಾಗಿರುವ ಸ್ಥಾನಕ್ಕೆ ಆರ್ಯಾಪು ಗ್ರಾಮ ಪಂಚಾಯಿತಿಯಲ್ಲಿ ನಾಮಪತ್ರ ಸಲ್ಲಿಸಲಾಯಿತು.
ಈ ಸಂದರ್ಭ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಪುತ್ತಿಲ ಪರಿವಾರದ ಅಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತಾ, ಪ್ರಧಾನ ಕಾರ್ಯದರ್ಶಿ ಉಮೇಶ್ ಗೌಡ ವೀರಮಂಗಲ, ಪ್ರಮುಖರಾದ ವಾಣಿಶ್ರೀ, ಶ್ರೀಕರಿ, ನವೀನ್ ರೈ ಮೇಗಿನಪಂಜ, ಜಗದೀಶ್ ಪೂಜಾರಿ, ನಾರಾಯಣ ಕುಲಾಲ್, ತಿಮ್ಮಪ್ಪ ನಾಯ್ಕ್ ಕುಂಜುರುಪಂಜ, ಗೋಪಾಲ ಭಟ್, ತಾರಾನಾಥ, ಸಂತೋಷ್ ಭಂಡಾರಿ, ಪವಿತ್ರ, ಸೀತಾರಾಮ ಶೆಟ್ಟಿ, ಕೃಷ್ಣ ಪ್ರಸಾದ್ ಶೆಟ್ಟಿ ಮೊದಲಾದರು ಉಪಸ್ಥಿತರಿದ್ದರು