ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿಂದು ತನ್ನ ದಾಖಲೆಯ 14ನೇ ಬಜೆಟ್ ಮಂಡಿಸುತ್ತಿದ್ದಾರೆ. ಹೀಗಾಗಿ ಈ ಹಿಂದೆ ರಾಮಕೃಷ್ಣ ಹೆಗಡೆ 13 ಸಲ ಮಂಡಿಸಿದ್ದ ಬಜೆಟ್ ದಾಖಲೆ ಪತನಗೊಂಡಿತು. ಬಜೆಟ್ ಮಂಡನೆಗೂ ಮೊದಲು ಸರ್ವರಿಗೆ ಸಮಪಾಲು ಸರ್ವರಿಗೆ ಸಮಬಾಳು ಬಜೆಟ್, ನೀವೇ ನನ್ನ ಪಾಲಿನ ಜನತಾ ಜನಾರ್ದರು. ನುಡಿದಂತೆ ನಡೆದಿದ್ದೇವೆ, ವಿಶ್ವಾಸ ಹುಸಿಗೊಳಿಸುವುದಿಲ್ಲ ಎಂದು ಸಿದ್ದರಾಮಯ್ಯ ಟ್ವಿಟ್ ಮಾಡಿದ್ದರು.
2023 – 24 ನೇ ಸಾಲಿನ ರಾಜ್ಯ ಬಜೆಟ್ ಲೈವ್ ಅಪ್‌ಡೇಟ್ಸ್.
• 3.27 ಲಕ್ಷ ಕೋಟಿ ಗಾತ್ರದ ಬಜೆಟ್
• ಬಿಯರ್ ಮೇಲಿನ ಅಬಕಾರಿ ಸುಂಕ ಶೇಕಡಾ 10 ರಷ್ಟು ಹೆಚ್ಚಳ
ಮದ್ಯದ ಮೇಲೆ ಶೇ.20 ತೆರಿಗೆ -36,000 ಕೋಟಿ ಆದಾಯ ಗುರಿ
• ಪರಿಸರ ರಕ್ಷಣೆಗೆ ಆದ್ಯತೆ
• ಜನರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತೇವೆ
• ಐದು ಗ್ಯಾರಂಟಿ ಯೋಜನೆಗಳಿಗೆ ಸುಮಾರು 52,000 3
ಗ್ಯಾರಂಟಿ ಯೋಜನೆಗಳಿಗೆ ಅಗತ್ಯವಿರುವ ಸಂಪನ್ಮೂಲವನ್ನು ನಮ್ಮ ಸರಕಾರವು ಜನರಿಗೆ ಹೆಚ್ಚಿನ ಹೊರೆಯಾಗದಂತೆ ಹೊಂದಿಸಲಿದೆ.
• ಈ ನಿಟ್ಟಿನಲ್ಲಿ ತೆರಿಗೆ ಸಂಗ್ರಹ ವ್ಯವಸ್ಥೆಯಲ್ಲಿ
ಈ ನಿಟ್ಟಿನಲ್ಲಿ ತೆರಿಗೆ ಸಂಗ್ರಹ ವ್ಯವಸ್ಥೆಯಲ್ಲಿ ಸುಧಾರಣೆ ಹಾಗೂ ತೆರಿಗೆ ಸೋರಿಕೆಯನ್ನು ತಡೆಗಟ್ಟುವುದರ ಜೊತೆಗೆ ಸರ್ಕಾರದ ಅನಗತ್ಯ ದುಂದುವೆಚ್ಚಗಳಿಗೆ ಕಡಿವಾಣ ಹಾಕಲು ಕ್ರಮ ವಹಿಸಲಾಗುವುದು.
• ಈ ಯೋಜನೆಗಳು ಅರ್ಹರಿಗೆ ನೇರವಾಗಿ ತಲುಪುವುದರಿಂದ ಹಾಗೂ ಬವಣೆಗಳ ಭಾರದಿಂದ ಏದುಸಿರು ಬಿಡುತ್ತಿರುವ ಬಡವರ ಬದುಕಿನಲ್ಲಿ ಪ್ರಾಣವಾಯುವಿನಂತೆ ಕೆಲಸ ಮಾಡುವುದೆಂಬ ಆಶಯದೊಂದಿಗೆ ಇವುಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ನಮ್ಮ ಸರ್ಕಾರ ಬದ್ಧವಾಗಿದೆ.
• 75 ಕೋಟಿ ವೆಚ್ಚದಲ್ಲಿ ರೇಷ್ಮೆ ಮಾರುಕಟ್ಟೆ • ಅಬಕಾರಿ ತೆರಿಗೆ ಶೇ.20 ಹೆಚ್ಚಳ
ಕಾಫಿ, ವೀಳ್ಯದೆಲೆ ಬ್ರಾಂಡಿಂಗ್
ನಮ್ಮಮೆಟ್ರೊಗೆ 30,000 ಕೋಟಿ
ರೈತರಿಗೆ 3ರಿಂದ 5 ಲ.ರೂ. ಅಲ್ಪಾವಧಿ ಸಾಲ
ಕೃಷಿ ಉದ್ಯಮ ಉತ್ತೇಜನಕ್ಕೆ 10 ಕೋ. ರೂ.
• ಲೋಕೋಪಯೋಗಿ ಇಲಾಖೆಗೆ 10,143 ಕೋಟಿ
• ಸಮಾಜ ಕಲ್ಯಾಣ ಇಲಾಖೆಗೆ 11,173 ಕೋಟಿ • ಆಹಾರ ಇಲಾಖೆಗೆ 10,460 ಕೋಟಿ
ಮೈಸೂರು, ಕಲಬುರಗಿಯಲ್ಲಿ ಟ್ರಾಮಾ ಸೆಂಟರ್
• ಕಿರು ಆಹಾರ ಸಂಸ್ಕರಣಾ ಉದ್ದಿಮೆಗೆ 5 ಕೋಟಿ ಆರೋಗ್ಯ ಇಲಾಖೆಗೆ 14,950 ಕೋಟಿ
• 100 ರೈತ ಉತ್ಪಾದಕ ಕಂಪನಿಗಳಿಗೆ ಶೇ.4 ಬಡ್ಡಿಯಲ್ಲಿ ಸಾಲ
ಕೃಷಿ ನವೋದ್ಯಮಕ್ಕೆ 100 ಕೋಟಿ
• ಇಂದಿರಾ ಕ್ಯಾಂಟೀನ್‌ಗೆ 100 ಕೋಟಿ ಕೃಷಿ ಭಾಗ್ಯ ಯೋಜನೆಗೆ ಮನೇಗದಲ್ಲಿ 100 ಕೋಟಿ
• ಬೆಂಗಳೂರಿಗೆ ಬಂಪರ್ ಕೊಡುಗೆ : 45,000 ಕೋಟಿ ಅನುದಾನ. ವೈಟ್ ಟ್ಯಾಪಿಂಗ್, ರಸ್ತೆ ಅಭಿವೃದ್ಧಿ, ಮೆಟ್ರೊ, ಉಪನಗರ ರೈಲು ಯೋಜನೆ, ರಾಜಕಾಲುವೆ ಅತಿಕ್ರಮಣ ತೆರವು.
• ಜಾನುವಾರಗಳ ಆಕಸ್ಮಿಕ ಸಾವಿಗೆ ಪರಿಹಾರ ಹಸು, ಎಮ್ಮೆಮೃತಪಟ್ಟರೆ 10 ಸಾವಿರ ಪರಿಹಾರ, ಕುರಿ ಮೇಕೆ ಸಾವಿಗೆ 5 ಸಾವಿರ ಪರಿಹಾರ
ಅನುಗ್ರಹ ಯೋಜನೆ ಮರು ಜಾರಿ
• ಖಾಸಗಿ ಸಹಭಾಗಿತ್ವದಲ್ಲಿ ಜಾನುವಾರು ಉತ್ಪನ್ನಗಳ ಸಂಸ್ಕರಣೆ
• ಅಂಗನವಾಡಿ ಆಶಾ ಕಾರ್ಯಕರ್ತೆಯರು, ಬಿಸಿಯೂಟ ಕಾರ್ಯಕರ್ತೆಯರು, ಮಾಜಿ ದೇವದಾಸಿಯರಿಗೆ, ಲಿಂಗತ್ವ ಅಲ್ಪಸಂಖ್ಯಾತರಿಗೆ
ಗೃಹಲಕ್ಷ್ಮಿಯಡಿ 2000 ರೂ. • ಮೀನುಗಾರರ ರಿಯಾಯಿತಿ ಡೀಸೆಲ್ ಮಿತಿ ಹೆಚ್ಚಳ
ಕನಕಪುರಕ್ಕೆ ಹೊಸ ವೈದ್ಯಕೀಯ ಕಾಲೇಜು ಕೊಪ್ಪಳ, ಕೊಡಗು ಆಸ್ಪತ್ರೆ ಉನ್ನತೀಕರಣ
ಮೈಸೂರು, ಕಲಬುರಗಿ, ಬೆಳಗಾವಿಯಲ್ಲಿ ಸುಪರ್ ಸ್ಪೆಷಾಲಿಟಿ ಅಸ್ಪತ್ರೆ
ಗೃಹಲಕ್ಷ್ಮೀ ಯೋಜನೆಗೆ 30,000 ಕೋಟಿ
- ದೇಶದಲ್ಲೇ ಮೊದಲ ಅಂಗಾಂಗ ಜೋಡಣೆ ಆಸ್ಪತ್ರೆ ಸ್ಥಾಪನೆ
• ನಂದಿನಿಯ ಬ್ರಾಂಡ್ ಬೆಳೆಸಲು ಬದ್ಧ
• ಸರ್ಕಾರಿ ಶಾಲೆ-ಕಾಲೇಜುಗಳಿಗೆ ಉತ್ತಮ ಸೌಲಭ್ಯ -8311 ಕೊಠಡಿಗಳ ನಿರ್ಮಾಣ
• ಚರ್ಮಗಂಟು ರೋಗದಿಂದ ಮರಣ ಹೊಂದಿದ ಜಾನುವಾರು ಮಾಲಕರಿಗೆ ಪರಿಹಾರ
• ಮೀನುಗಾರರ ಮಹಿಳೆಯರಿಗೆ ಬಡ್ಡಿ ರಹಿತ ಸಾಲ ಮಿತಿ 3 ಲಕ್ಷಕ್ಕೇರಿಕೆ
• ಸೀಮೆ ಎಣ್ಣೆ ಇಂಜಿನ್ ದೋಣಿಗಳ ಬದಲಾವಣೆಗೆ ಸಹಾಯಧನ
• ಶಾಲಾ ಕಾಲೇಜುಗಳಲ್ಲಿ 5777 ಹೊಸ ಶೌಚಾಲಯ ನಿರ್ಮಾಣಕ್ಕೆ 200 ಕೋಟಿ
ಗುಡ್ಡಗಾಡು ಪ್ರದೇಶಗಳ ರೈತರಿಗೆ ಕೃಷಿ ಉತ್ಪನ್ನ ಸಾಗಿಸುವ ಚತುಷ್ಟಕ್ರ ವಾಹನ ಖರೀದಿಗೆ ಸಾಲದ ನೆರವು
• 1ರಿಂದ 10ನೇ ತರಗತಿ ತನಕ ಮೊಟ್ಟೆ ವಿತರಣೆ, ವಾರದಲ್ಲಿ ಎರಡು ದಿನ ವಿತರಣೆ
ಕೇಂದ್ರದ ಎಪಿಎಂಸಿ ಕಾಯಿದೆ ಹಿಂಪಡೆಯಲು ನಿರ್ಧಾರ
ಜಲಸಂನ್ಮೂಲಕ್ಕೆ 1 ಲಕ್ಷ ಕೋಟಿ ಮಕ್ಕಳ ಕಲ್ಯಾಣಕ್ಕೆ 51,229 ಕೋಟಿ
• ಮಹಿಳಾ ಸಬಲೀಕರಣಕ್ಕೆ 70,427 ಕೋಟಿ
• ಇಂದಿರಾ ಕ್ಯಾಂಟೀನ್‌ಗೆ ಹೊಸ ಮೆನು
• 899 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿ
ಎತ್ತಿನಹೊಳೆ ಯೋಜನೆಗೆ 23,522 ಕೋ.ರೂ. ವೆಚ್ಚ ಪೂರ್ಣಗೊಳಿಸಲು ಬದ್ಧ
• ಮೇಕೆದಾಟು ಯೋಜನಾ ವರದಿ ಸಲ್ಲಿಕೆಯಾಗಿದೆ. ಶೀಘ್ರ ಅಗತ್ಯ ಕ್ರಮ
• 1,62,000 ಲಕ್ಷ ಕೋಟಿ ತೆರಿಗೆ ಸಂಗ್ರಹ ಗುರಿ,3
ಇಲಾಖೆಗಳ ಮೇಲೆ ಭಾರ ಜಿಲ್ಲಾ, ತಾಲೂಕು ಆಸ್ಪತ್ರೆಗಳಲ್ಲಿ 219 ಡಯಾಲಿಸಿಸ್
ಸೆಂಟರ್ ನಿರ್ಮಾಣ -92 ಕೋಟಿ
• ಹಳೇ ಶಾಲಾ ಕಾಲೇಜು ಕಟ್ಟಡ 100 ಕೋಟಿ ವೆಚ್ಚದಲ್ಲಿ ದುರಸ್ತಿ
• ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ತರಬೇತಿ
ಶಾಲೆಗಳಲ್ಲಿ 50 ಲಕ್ಷ ಸಸಿಗಳನ್ನು ನೆಡುವ ಸಸ್ಯ ಶ್ಯಾಮಲ ಯೋಜನೆ
ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನವಿಲ್ಲ- ಹೊಸ
ಶಿಕ್ಷಣ ನೀತಿ ರೂಪಣೆ ವಿವಿಗಳಲ್ಲಿ ಕನ್ನಡ ಪರೀಕ್ಷೆ ಬರೆಯಲು ರೆಫರೆನ್ಸ್ ಪುಸ್ತಕ, ಕಣ್ಣಿನ ಪರೀಕ್ಷೆ, ಕನ್ನಡಕ ವಿತರಣೆ
ಪುನೀತ್ ರಾಜ್‌ಕುಮಾರ್ ಸ್ಮರಣಾರ್ಥ ಹೃದ್ರೋಗ ಆಸ್ಪತ್ರೆ – ಹಠಾತ್ ಸಾವುಗಳನ್ನು ತಡೆಗಟ್ಟಲು 6 ಕೋಟಿ ಯೋಜನೆ
ನೈತಿಕ ಪೊಲೀಸ್‌ಗಿರಿ ತಡೆಯಲು ನಿರ್ದಾಕ್ಷಿಣ್ಯ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕ್ರಮ
ವೈದ್ಯಕೀಯ ಕಾಲೇಜುಗಳ ನಿರ್ಮಾಣಕ್ಕೆ 450 ಕೋಟಿ
• 6 ಮಹಿಳಾ ಪೊಲೀಸ್ ಠಾಣಗಳ ಸ್ಥಾಪನ , ಬುದ್ಧಿಮಾಂದ್ಯ ಮಕ್ಕಳ 10 ಶಾಲೆ ಎನ್‌ಜಿಒ ಸಹಾಯದಿಂದ ಪ್ರಾರಂಭ
ಏಷ್ಯನ್ ಕಾಮನ್‌ವೆಲ್ತ್ ಪದಕ ವಿಜೇತರಿಗೆ ಗ್ರೂಪ್ ಅವರು ಮಂಡನೆ ಮಾಡಿದ್ದು ನಾಲಾಯಕ್ ಬಜೆಟ್ – ಆರ್. ಅಶೋಕ್
• ಸಿಎಂ ಸಿದ್ದರಾಮಯ್ಯ ಅವರು ಮಂಡನೆ ಮಾಡಿದ ಬಜೆಟ್ ನಾಲಾಯಕ್ ಬಜೆಟ್
ಸುಳ್ಳು ಮೋಸ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿದ್ದು ಮಾತ್ರ ಬಜೆಟ್ ಪುಸ್ತಕದಲ್ಲಿದೆ
ಘೋಷಣೆ ಮಾಡಿದ ಯೋಜನೆಗಳಿಗೆ ಬಜೆಟ್ ನಲ್ಲಿ ಅನುದಾನ ಇಟ್ಟಿಲ್ಲ
ಸಿದ್ದರಾಮಯ್ಯ ಮಂಡಿಸಿದ ಪೂರ್ಣ ಬಜೆಟ್ ನಲ್ಲಿ ಕೇಂದ್ರ ಸರಕಾರ ಹಾಗೂ ಪ್ರಧಾನ ಮಂತ್ರಿ ವಿರುದ್ಧ
ವಾಗ್ದಾಳಿ ನಡೆಸಿದ್ದಾರೆ • ಮಾಜಿ ಸಚಿವ ಆರ್. ಅಶೋಕ್ ಹೇಳಿಕೆ
























