ಉಡುಪಿ: ಧಾರಾಕಾರ ಮಳೆಗೆ ಮತ್ತೊಂದು ಬಲಿಯಾಗಿರುವ ದುರ್ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬೆಳ್ಮಣ್ ಪರಿಸರದಲ್ಲಿ ನಡೆದಿದೆ.
ಬೃಹತ್ ಆಲದ ಮರ ಬಿದ್ದು ಬೈಕ್ ಸವಾರ ಮೃತಪಟ್ಟಿದ್ದಾನೆ. ಗಾಳಿ ಮಳೆ ಹಿನ್ನಲೆ ಬೃಹತ್ ಆಲದ ಮರ ಧರೆಗುರುಳಿದೆ. ಈ ವೇಳೆ ಅದೇ ಪರಿಸರದಲ್ಲಿ ಸಂಚರಿಸುತ್ತಿದ್ದ ಬೈಕ್ ಸವಾರನ ಮೇಲೆ ಆಲದ ಮರ ಬಿದ್ದಿದೆ. ಪರಿಣಾಮ ಬೈಕ್ ಸವಾರ ಪ್ರವೀಣ್ ಆಚಾರ್ಯ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬೈಕ್ ನಲ್ಲಿ ತೆರಳುತ್ತಿದ್ದ ಪ್ರವೀಣ್ ಮೇಲೆ ಏಕಾಏಕಿ ಮರ ಬಿದ್ದಿದೆ. ಮರ ಬಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮರ ಬಿದ್ದ ಹಿನ್ನೆಲೆ ವಿದ್ಯುತ್ ಕಂಬ ಸೇರಿದಂತೆ ಇತರ ಕಟ್ಟಡಗಳಿಗೂ ಹಾನಿಯಾಗಿದೆ. ಕೂಡಲೇ ಸ್ಥಳೀಯರು ಮರ ತೆರವು ಮಾಡಿದ್ದಾರೆ. ಮಳೆಗೆ ಜಿಲ್ಲೆಯಲ್ಲಿ ಒಟ್ಟು ಮೂರು ಮಂದಿ ಮೃತಪಟ್ಟಿದ್ದಾರೆ.























