ವಿಟ್ಲ: ಕನ್ಯಾನ ಗ್ರಾಮದಲ್ಲಿ ದಾಸ್ತಾನು ಕೊಠಡಿಗೆ ಬೆಂಕಿ ತಗುಲಿ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ.
ಕನ್ಯಾನ ಗ್ರಾಮದ ಪೇಪರ್ ವಿತರಕ ಗಂಗಾಧರ ಎಂಬವರ ಮನೆಯ ದಾಸ್ತಾನು ಕೊಠಡಿಗೆ ತಡ ರಾತ್ರಿ ಬೆಂಕಿ ಬಿದ್ದಿದ್ದು, ಕೊಠಡಿಯಲ್ಲಿದ್ದ ಕಟ್ಟಿಗೆ, ತೆಂಗಿನಕಾಯಿ, ಹಲಗೆಗಳು ಸೇರಿದಂತೆ ಮತ್ತಿತರ ವಸ್ತುಗಳು ಸುಟ್ಟು ಕರಕಲಾಗಿದೆ.
ಬೆಂಕಿನ ಕೆನ್ನಾಲಗೆಗೆ ಕೊಟ್ಟಿಗೆಯ ಛಾವಣಿ ಕುಸಿದುಬಿದ್ದಿದ್ದು, ಸಮೀಪದ ಮನೆಗಳಿದ್ದರೂ ಯಾವುದೇ ಹೆಚ್ಚಿನ ಅಪಾಯ ಸಂಭವಿಸಿಲ್ಲ. ಬಂಟ್ವಾಳ ಅಗ್ನಿಶಾಮಕ ದಳ ಹಾಗೂ ಸ್ಥಳೀಯರು ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ ಎಂದು ತಿಳಿದು ಬಂದಿದೆ.