ಪುತ್ತೂರು: ಝೀ ಕನ್ನಡ ವಾಹಿನಿಯ ಛೋಟಾ ಚಾಂಪಿಯನ್ ಗೇಮ್ ಶೋ ದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದ ರಾಮಕುಂಜ ಗ್ರಾಮದ ಸಂಪ್ಯಾಡಿ ನಿವಾಸಿ ಸುಜಿತ್ ಹಾಗೂ ಉಮಾಶ್ರೀ ದಂಪತಿ ಪುತ್ರಿ ಮೂರುವರೆ ವರ್ಷದ ಪುಟಾಣಿ ಆತ್ಮಿ ಗೌಡರನ್ನು ಅಲಂಕಾರು ಒಕ್ಕಲಿಗ ಗೌಡ ಸೇವಾ ಸಂಘದ ವತಿಯಿಂದ ಸಂಪ್ಯಾಡಿಯ ಅವರ ಮನೆಯಲ್ಲಿ ಸನ್ಮಾನಿಸಲಾಯಿತು.
ಒಕ್ಕಲಿಗ ಗೌಡ ಸಮುದಾಯ ಪತ್ತಿನ ಸಹಕಾರ ಸಂಘದ ಮಾಜಿ ನಿರ್ದೇಶಕ ಲಿಂಗಪ್ಪ ಗೌಡ ಕಡೆಂಬ್ಯಾಲ್, ಒಕ್ಕಲಿಗ ಗೌಡ ಸಂಘದ ಆಲಂಕಾರು ವಲಯ ಅಧ್ಯಕ್ಷ ರಾಮಣ್ಣ ಗೌಡ ಸುರುಳಿ, ನಿವೃತ್ತ ಪ್ರಾಂಶುಪಾಲ ಭವಾನಿಶಂಕರ ಗೌಡ ಪರಂಗಾಜೆ, ಸಂಘದ ಕಡಬ ತಾಲೂಕು ಘಟಕದ ಉಪಾಧ್ಯಕ್ಷ ದಯಾನಂದ ಗೌಡ ಆಲಡ್ಕ, ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಆಲಂಕಾರು ಶಾಖಾ ಸಲಹಾ ಸಮಿತಿ ಅಧ್ಯಕ್ಷ ತೇಜಸ್ವಿನಿ ಕಟ್ಟಪುಣಿ ಆತ್ಮಿ ಗೌಡರನ್ನು ಸನ್ಮಾನಿಸಿ ಶುಭ ಹಾರೈಸಿದರು.
ಆತ್ಮಿ ಗೌಡ ಅವರ ತಾಯಿ ಉಮಾಶ್ರೀ ಛೋಟಾ ಚಾಂಪಿಯನ್ ಗೇಮ್ ಶೋಗೆ ಆಯ್ಕೆಯಾಗಿ ಪಾಲ್ಗೊಂಡಿರುವ ಅನುಭವದ ಕುರಿತು ತಿಳಿಸಿದರು. ಗೌಡ ಸಂಘದ ವಿವಿಧ ಪದಾಧಿಕಾರಿಗಳಾದ ಪದ್ಮಪ್ಪ ಗೌಡ ರಾಮಕುಂಜ, ಆನಂದ ಗೌಡ ಪಜ್ಜಡ್ಕ, ಮಂಜಪ್ಪ ಗೌಡ ಕುಂತೂರು, ಬಾಲಕೃಷ್ಣ ಗೌಡ ಸಂಪ್ಯಾಡಿ, ತಿಮ್ಮಪ್ಪ ಗೌಡ ಸಂಕೇಶ, ದುರ್ಗಾಪ್ರಸಾದ್ ಸಂಪ್ಯಾಡಿ, ಪೂವಪ್ಪ ಗೌಡ, ಆಶಾ ಕಾರ್ಯಕರ್ತೆ ಪದ್ಮಾವತಿ, ಅಂಗನವಾಡಿ ಶಿಕ್ಷಕಿ ಭಾಗೀರಥಿ ಸಂಪ್ಯಾಡಿ, ಹೇಮಂತ್, ಪುಟಾಣಿ ಆತ್ಮಿ ಗೌಡರ ತಂದೆ ಸುಜಿತ್ ಗೌಡ, ಚಂದ್ರಾವತಿ, ಚೇತನ್ ಗೌಡ, ಮಮತ ಚೇತನ್, ಸಚಿನ್, ಹವಿಶ್, ಶಾರ್ವಿನ್ ಉಪಸ್ಥಿತರಿದ್ದರು. ಆಲಂಕಾರು ವಲಯ ಅಧ್ಯಕ್ಷ ರಾಮಣ್ಣ ಗೌಡ ದೋಳ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸದಾನಂದ ಕುಂಟ್ಯಾನ ವಂದಿಸಿದರು.