ಬೆಳ್ತಂಗಡಿ: ಅವಿವಾಹಿತ ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಜಿರೆಯ ಖಾಸಗಿ ಲಾಡ್ಜ್ ಒಂದರಲ್ಲಿ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ಅವಿವಾಹಿತ ಕಾರ್ತಿಕ್ (29) ಆತ್ಮಹತ್ಯೆ ಮಾಡಿಕೊಂಡವ.
ಈತ ಉಜಿರೆಯ ಖಾಸಗಿ ಲಾಡ್ಜ್ ಒಂದರಲ್ಲಿ ರೂಂ ಪಡೆದುಕೊಂಡು ತಂಗಿದ್ದ. ಜೂ.28 ರಂದು ಫ್ಯಾನ್ಗೆ ಹಗ್ಗದಿಂದ ನೇಣು ಬಿಗಿದುಕೊಂಡಿದ್ದಾನೆ ಎನ್ನಲಾಗಿದೆ. ರೂಂನಿಂದ ಕಾರ್ತಿಕ್ ಹೊರಬಾರದೇ ಇದ್ದಾಗ ಅನುಮಾನಗೊಂಡು ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಸಬ್ ಇನ್ ಸ್ಪೆಕ್ಟರ್ ಆನಂದ ಹಾಗೂ ತಂಡ ಲಾಡ್ಜ್ ಗೆ ತೆರಳಿ ಬಾಗಿಲು ಒಡೆದು ಒಳಗೆ ಹೋದಾಗ ಆತ್ಮಹತ್ಯೆ ಬೆಳಕಿಗೆ ಬಂದಿದೆ. ಬಳಿಕ ಪೊಲೀಸರು ಕಾರ್ತಿಕ್ ಮನೆಯವರನ್ನು ದೂರವಾಣಿ ಸಂಪರ್ಕಿಸಿದ್ದು, ಮನೆಯವರು ಪೊಲೀಸ್ ಠಾಣೆ ತಲುಪಲಿದ್ದಾರೆ. ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.