ಬೆಳ್ಳಾರೆ : ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ 9 ನೇ ಶಾಖೆ ಜು.6 ರಂದು ಉದ್ಘಾಟನೆಗೊಳ್ಳಲಿದ್ದು, ಪೂರ್ವ ಬಾವಿ ಸಭೆ ಗುರುವಾರ ಬೆಳ್ಳಾರೆ ಕೆಳಗಿನಪೇಟೆಯಲ್ಲಿರುವ ಕಾತ್ಯಾಯಿನಿ ಕಾಂಪ್ಲೆಕ್ಸ್ ನಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ ಉದ್ಘಾಟನಾ ಸಮಾರಂಭದ ಮಾಹಿತಿ ನೀಡಿದರು.
ಸಭೆಯಲ್ಲಿ ಸಮಿತಿ ಉಪಾಧ್ಯಕ್ಷ ಯು ಪಿ ರಾಮಕೃಷ್ಣ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸುಧಾಕರ ಕೆ.ಬೆಳ್ಳಾರೆ ಶಾಖೆಯ ಉಸ್ತುವಾರಿ ನಿರ್ದೇಶಕರಾದ ಸತೀಶ್ ಪಂಬಾರು. ಲೋಕೇಶ್ ಚಾಕೋಟೆ, ಪ್ರವೀಣ್ ಕುಂಟ್ಯಾನ, ತೇಜಸ್ವಿನಿ ಶೇಖರ ಗೌಡ, ಎಲ್ಯಣ ಗೌಡ, ವಾಸುದೇವ ಗೌಡ ನಡ್ಕ, ರವೀಂದ್ರ ಗೌಡ ಎಂ., ಪದ್ಮನಾಭ ಗೌಡ ಬೀಡು, ಕಾರ್ತಿಕ್. ಎಂ., ದೇವರಾಜ್, ಯಸ್ವಿತ್ ಉಪ್ಪಸ್ಥಿತರಿದ್ದರು.