ಪುತ್ತೂರು: ಪುತ್ತೂರು ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ಅರ್ಪಿಸುವ ನೃತ್ಯಾಂತರಂಗ-101 ಜು.1 ಶನಿವಾರ ದರ್ಬೆ ಶಶಿಶಂಕರ ಸಭಾಂಗಣದಲ್ಲಿ ನಡೆಯಲಿದೆ.
ಸಂಜೆ 5.45 ರಿಂದ ಆರಂಭಗೊಳ್ಳುವ ಕಾರ್ಯಕ್ರಮದಲ್ಲಿ ವಿದುಷಿ ಮಾನಸ ಪುನೀತ್ ರೈ ಕಡಬ ಅವರ ಶಿಷ್ಯೆಯರಾದ ಪ್ರಣಮ್ಯ ಪಿ.ರಾವ್ ಮತ್ತು ಸ್ನೇಹ ಪಿ.ರಾವ್ ಅವರಿಂದ ನೃತ್ಯಾಂತರಂಗ ಪ್ರಸ್ತುತಿಗೊಳ್ಳಲಿದೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಮಹೇಶ್ ನಿಟಿಲಾಪುರ ಪಾಲ್ಗೊಳ್ಳಲಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
























