ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಈಶಾನ್ -ಫ್ರಾನ್ಸ್ ಗೆ

ಪುತ್ತೂರು: ಫ್ರಾನ್ಸ್ ನ ಪ್ಯಾರಿಸ್ ನಲ್ಲಿ ಜೂ.27ರಿಂದ ಜು.17ರ ತನಕ ನಡೆಯಲಿರುವ ಜಾಗತಿಕ ಮಟ್ಟದ ಆಹ್ವಾನಿತರ ಕೂಟ ಮತ್ತು ಅಂತಾರಾಷ್ಟ್ರೀಯ “ಹಿಪ್ ಹಾಪ್” ಡಾನ್ಸ್ ಸ್ಪರ್ಧೆಯಲ್ಲಿ ಭಾಗವಹಿಸಲು ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿಯ ಈಶಾನ್ ಆಯ್ಕೆಯಾಗಿದ್ದು, ನಾಳೆ (ಜೂ.27)ರಂದು ಭಾಗವಹಿಸಲು ಫ್ರಾನ್ಸ್ ಗೆ ತೆರಳುವನು.

Lock is not Joke ಎಂಬ ಅಂತಾರಾಷ್ಟ್ರೀಯ ಖ್ಯಾತಿಯ ಡಾನ್ಸ್ ಅಸೋಸಿಯನ್ ವತಿಯಿಂದ ಆಯೋಜಿಸಲ್ಪಡುವ ಈ ಸ್ಪರ್ಧೆಯಲ್ಲಿ ಜಗತ್ತಿನಾದ್ಯಂತ 40ದೇಶಗಳಿಂದ ಸ್ಪರ್ಧಿಗಳು ಭಾಗವಹಿಸುತ್ತಿದ್ದು, ಭಾರತದಿಂದ ಭಾಗವಹಿಸುತ್ತಿರುವ ಏಕೈಕ ಸ್ಪರ್ಧಿ ಈಶಾನ್, ಪಡೀಲ್ ನಿವಾಸಿ ಆರ್ಕಿಟೆಕ್ಟ್ ಇಂಜಿನಿಯರ್ ರಾಮಕೃಷ್ಣ ಭಟ್ ಮತ್ತು ದಿವ್ಯಲಕ್ಷ್ಮೀ ದಂಪತಿಗಳ ಪುತ್ರ.

ಅಂತಾರಾಷ್ಟ್ರೀಯ “ಹಿಪ್ ಹಾಪ್” ಡಾನ್ಸ್ ಸ್ಪರ್ಧೆಯಲ್ಲಿ ಭಾಗವಹಿಸಲಿರುವ ಈಶಾನ್ ಗೆ ಶಾಲಾ ಆಡಳಿತ ಮಂಡಳಿ, ರಕ್ಷಕ-ಶಿಕ್ಷಕ ಸಂಘ, ಮುಖ್ಯ ಶಿಕ್ಷಕರು, ಶಾಲಾ ಶಿಕ್ಷಕರ ತಂಡ ಶುಭ ಹಾರೈಸಿರುತ್ತಾರೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.





































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top