ಪುತ್ತೂರು: ಕರ್ನಾಟಕ ಸಹಾಯಹಸ್ತ ಲೋಕ ಸೇವಾ ಟ್ರಸ್ಟ್, ನೊಂದವರ ಪಾಲಿಗೆ ಆಸರೆ ವತಿಯಿಂದ ಮಲ್ಪೆ ವಡಬಾಂಡೇಶ್ವರ ಪವಿತ್ರ ರಥೋತ್ಸವ ಸಂದರ್ಭ ಭವತಿ ಭಿಕ್ಷಾಂ ದೇಹಿ ಕಾರ್ಯಕ್ರಮ ಆಯೋಜಿಸಲಾಯಿತು.
ಕುಂದಾಪುರ ತಾಲೂಕು ಕಟ್ ಬೆಲ್ತೂರು ಗ್ರಾಮದ ಗುರುಚರಣ್ ಶ್ಯಾಮಲಾ ದಂಪತಿಯ 4 ವರ್ಷದ ಪುತ್ರ ಪವನ್ ಕುಮಾರ್ ಎಂಬ ಬಾಲಕನ ಚಿಕಿತ್ಸೆಗಾಗಿ 40 ಲಕ್ಷ ರೂ. ಅಗತ್ಯವಿದ್ದು, ಹಣ ಸಂಗ್ರಹಿಸುವ ಉದ್ದೇಶದಿಂದ ಯೋಜನೆ ಹಮ್ಮಿಕೊಳ್ಳಲಾಯಿತು.
ದಾನಿಗಳಿಂದ ಸಂಗ್ರಹವಾದ 40100 ರೂ.ವನ್ನು ಮಲ್ಪೆ ಪೊಲೀಸ್ ಠಾಣೆಯಲ್ಲಿ ಮಗುವಿಗೆ ಹಸ್ತಾಂತರಿಸಲಾಯಿತು. ಮಲ್ಪೆ ಠಾಣಾ ಪಿ.ಎಸ್.ಐ ಸುಷ್ಮಾ ಭಂಡಾರಿ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಈಶ್ವರ್ ಮಲ್ಪೆ ಅವರು ಮಗುವಿಗೆ ಸಹಾಯಧನವನ್ನು ಹಸ್ತಾಂತರಿಸಲಾಯಿತು.ಈಶ್ವರ್ ಮಲ್ಪೆ ಮಾತನಾಡಿ, ಟ್ರಸ್ಟಿನ ವತಿಯಿಂದ ನಡೆಯುವ ಸೇವಾಹಸ್ತಾ ಕಾರ್ಯಕ್ರಮಕ್ಕೆ ಸಂಪೂರ್ಣ ಬೆಂಬಲ ನೀಡಲಿದ್ದು, ಸಹಾಯಧನ ಪಡೆದುಕೊಂಡ ಮಗು ಶೀಘ್ರ ಗುಣಮುಖವಾಗಲಿ ಎಂದು ಹಾರೈಸಿದರು.ಪಿಎಸ್ಐ ಸುಷ್ಮಾ ಭಂಡಾರಿ ಮಾತನಾಡಿ. ಟ್ರಸ್ಟಿನ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ತುಳುನಾಡ ಪೊರ್ಲು ಸೇವಾ ಟ್ರಸ್ಟಿನ ಚಂದು ಕೋಟ್ಯಾನ್ ಕುಪ್ಪೆಪದವು, ಟ್ರಸ್ಟಿನ ಅಧ್ಯಕ್ಷ ಡಿ.ಎಸ್. ಒಡ್ಯ, ಪೊಲೀಸ್ ಸಿಬ್ಬಂದಿಗಳಾದ ಸಂತೋಷ್, ಸರಸ್ವತಿ, ಸೇವಾಹಸ್ತಕ್ಕೆ ಸಹಕರಿಸಿದ ಬಿಲಾಲ್ ಮಲ್ಪೆ, ಸರಸ್ವತಿ, ವಿದ್ಯಾ ಉಪಸ್ಥಿತರಿದ್ದರು.ಟ್ರಸ್ಟಿನ ಕಾರ್ಯದರ್ಶಿ ಮನೋಹರ್ ಸ್ವಾಗತಿಸಿ, ವಂದಿಸಿದರು.