ಕಡಬ : ಕಡಬ ಠಾಣಾ ವ್ಯಾಪ್ತಿಯ ಯುವತಿಯೊಬ್ಬಳು ನಾಪತ್ತೆಯಾಗಿರುವ ಕುರಿತು ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಡಬ ಗ್ರಾಮದ ಕಳಾರ ಎಂಬಲ್ಲಿ ವಾಸವಾಗಿರುವ ರಕ್ಷಿತಾ (18) ನಾಪತ್ತೆಯಾದ ಯುವತಿ. ಈಕೆ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದು, ಮೂಲತಃ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಹಗರೆ ಅಂಗಡಿಹಳ್ಳಿಯವಳು. ಕಳೆದ 6 ವರ್ಷಗಳಿಂದ ಕಡಬದಲ್ಲಿ ವಾಸವಿದ್ದು, 10 ನೇ ತರಗತಿ ಓದಿದ್ದು, ಬಳಿಕ ಮೂರು ವರ್ಷದಿಂದ ಮನೆಯಲ್ಲೇ ಇದ್ದಳು.
ಜೂ.20 ರಂದು ಬೆಳಿಗ್ಗೆ ಮನೆಯಿಂದ ಹೋದವಳು ಇದುವರೆಗೆ ಮನೆ ಬಾರದೆ, ಬೇಲೂರಿಗೂ ಹೋಗದೇ ನಾಪತ್ತೆಯಾಗಿದ್ದಾಳೆ ಎಂದು ಯುವತಿಯ ಸಹೋದರ ಸುನಿಲ್ ಎಂಬವರು ಕಡಬ ಪೊಲೀಸರಿಗೆ ದೂರು ನೀಡಿದ್ದಾರೆ.