ಪೆರ್ನೆ : ಪೆರ್ನೆ ಶೌರ್ಯ ವಿಪತ್ತು ನಿರ್ವಹಣಾ ಘಟಕದಿಂದ ಕೆದಿಲ ಗಾಂಧಿನಗರ ಪಂಚಾಯಿತು ಸಭಾಭವನದಲ್ಲಿ ಸಾಮೂಹಿಕ ಯೋಗಾಸನ ಕಾರ್ಯಕ್ರಮ ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಲೋಕಯ್ಯಪೂಜಾರಿ. ಉದ್ಘಾಟಿಸಿದರು. ವಿವೇಕಾನದ ಕನ್ನಡ ಮಾಧ್ಯಮ ಶಾಲೆಯ ಯೋಗ ಶಿಕ್ಷಕ ರಂಗಪ್ಪ ಯೋಗಾಸನ ಹೇಳಿಕೊಟ್ಟರು.
ಈ ಸಂದರ್ಭದಲ್ಲಿ. ಪೆರ್ನೆ ವಲಯ ಮೇಲ್ವಿಚಾರಕಿ ಶಾರದ ಪೆರ್ನೆ ಶೌರ್ಯ ವಿಪತ್ತು ಘಟಕದ ಸಂಯೋಜಕಿ ಅಶ್ಮಿತಾ, ಸದಸ್ಯರಾದ ಜಗದೀಶ ವೆಂಕಪ್ಪ. ಗಿರೀಶ . ಸುರೇಶ. ಕೇಶವ. ಮತ್ತು ಸೇವಾಪ್ರತಿನಿದಿಗಳಾದ ಶಾರದ, ಜಯಂತಿ, ಜಯಶ್ರೀ, ಸಂಜೀವಿನಿ ಸಂಯೋಜಕಿ ಆಶಾ, ಪಂಚಾಯಿತಿ ಅಧ್ಯಕ್ಷೆ ಜಯಂತಿ. ಡಿ. ಶೆಟ್ಟಿ. ಉಪಾಧ್ಯಕ್ಷ ಉಮೇಶ್ ಮುರುವ, ಅಂಗನವಾಡಿ ಶಿಕ್ಷಕಿ ಲೀನಾ ಮತ್ತು ಅಂಗನವಾಡಿಯ ಪುಟಾಣಿಗಳು ಭಾಗವಹಿಸಿದರು.