ಪುತ್ತೂರು: ಇತ್ತೀಚೆಗೆ ಅಗಲಿದ ಉಳ್ಳಾಲ ಬಾರಿಕೆಗುತ್ತು ಜಯರಾಮ ಶೆಟ್ಟಿಯವರ ಉತ್ತರಕ್ರಿಯಾದಿ ಸದ್ಗತಿ ಕಾರ್ಯವು ಜೂ.21 ರಂದು ತೆಂಕಿಲ ಬೈಪಾಸ್ ರಸ್ತೆಯ ಸ್ವಾಮಿ ಕಲಾಮಂದಿರದಲ್ಲಿ ಮಧ್ಯಾಹ್ನ ಜರಗಲಿದೆ.
ಪುತ್ತೂರು: ಸಾಮೆತ್ತಡ್ಕ ನಿವಾಸಿಯಾಗಿದ್ದು, ಹಲವಾರು ವರ್ಷಗಳಿಂದ ಅರುಣಾ ಚಿತ್ರಮಂದಿರದ ಬಳಿ ಸ್ವಾಗತ್ ಸ್ವೀಟ್ಸ್ ಅಂಗಡಿಯನ್ನು ಹೊಂದಿದ್ದ ಜಯರಾಮ ಶೆಟ್ಟಿ ಅವರು ಇತ್ತೀಚೆಗೆ ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದರು.
ಅವರು ಉತ್ತರಕ್ರಿಯಾದಿ ಸದ್ಗತಿ ಕಾರ್ಯಕ್ಕೆ ಬಂಧುಮಿತ್ರರು, ಹಿತೈಷಿಗಳು ಆಗಮಿಸಿ ಅಗಲಿದ ಉಳ್ಳಾಲ ಬಾರಿಕೆಗುತ್ತು ಜಯರಾಮ ಶೆಟ್ಟಿಯವರ ಆತ್ಮಕ್ಕೆ ಚಿರಶಾಂತಿಯನ್ನು ಕೋರಬೇಕಾಗಿ ಮೃತರ ಪತ್ನಿ ಉಮಾ, ಪುತ್ರ ಡಾ.ಶರಣ್ ಶೆಟ್ಟಿ, ಪುತ್ರಿ ಡಾ.ಶ್ರೇಯಾ ಶೆಟ್ಟಿ ಹಾಗೂ ಕುಟುಂಬಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ