ಬೆಂಗಳೂರು:: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ದ್ವೇಷಕ್ಕೆ ಬಲಿಯಾದ ನಾಲ್ವರು ಯುವಕರ ಕುಟುಂಬಕ್ಕೆ ರಾಜ್ಯ ಸರ್ಕಾರ ತಲಾ 25 ಲಕ್ಷ ರೂಪಾಯಿಗಳನ್ನು ಪರಿಹಾರದ ರೂಪದಲ್ಲಿ ಘೋಷಣೆ ಮಾಡಿದೆ.
ಓರ್ವ ಬಿಜೆಪಿ ಕಾರ್ಯಕರ್ತ ಹಾಗೂ ಮೂವರು ಮುಸ್ಲಿಂ ಸಮುದಾಯದ ಯುವಕರ ಕುಟುಂಬಕ್ಕೆ ಪರಿಹಾರ ಘೋಷಣೆಯಾಗಿದೆ.
ಮಂಗಳೂರಿನಲ್ಲಿ 2018ರ ಜನವರಿ ಮೂರರಂದು ಕೊಲೆಯಾದ ಕಾಟಿಪಳ್ಳದ ದೀಪಕ್ ರಾವ್, 2022ರ ಜುಲೈ 19ರಂದು ಮೃತಪಟ್ಟ ಬೆಳ್ಳಾರೆಯ ಮಸೂದ್,ಜುಲೈ 28ರಂದು ಕೊಲೆಯಾದ ಮಂಗಳಪೇಟೆಯ ಮಹಮ್ಮದ್ ಫಾಜಿಲ್, ಡಿಸೆಂಬರ್ 24ರಂದು ಹತ್ಯೆಗೀಡಾದ ಕಾಟಿಪಳ್ಳದ ಅಬ್ದುಲ್ ಜಲೀಲ್ ಕುಟುಂಬಕ್ಕೆ ತಲಾ 25 ಲಕ್ಷ ರೂಪಾಯಿ ಪರಿಹಾರ ಘೋಷಣೆಯಾಗಿದೆ.
ಈ ನಾಲ್ವರ ಕೊಲೆಗೆ ಕೋಮುದ್ವೇಷವೇ ಕಾರಣ ಎಂಬ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ರಾಜ್ಯ ಸರ್ಕಾರ ತಲಾ 25 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದೆ. ಜೂನ್ 19ರಂದು ಪರಿಹಾರ ಧನದ ಚೆಕ್ ಪಡೆದುಕೊಳ್ಳುವಂತೆ ಸೂಚಿಸಲಾಗಿದೆ .