ಇಂದು ಪುತ್ತೂರು ತಾಲೂಕಿನ 22 ಗ್ರಾಪಂಗಳ ಎರಡನೇ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಮೀಸಲಾತಿ ನಿಗದಿ ಪ್ರಕ್ರಿಯೆ

ಪುತ್ತೂರು:  ಪುತ್ತೂರು ತಾಲೂಕಿನ 22 ಗ್ರಾಮ ಪಂಚಾಯಿತಿಗಳ ಎರಡನೇ ಅವಧಿಗೆ ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಮೀಸಲಾತಿ ನಿಗದಿ ಇಂದು ನಡೆಯಲಿದೆ.

ಪುತ್ತೂರು ತಾಲೂಕಿನ 22 ಹಾಗೂ ಕಡಬ ತಾಲೂಕಿನ 21 ಗ್ರಾಮ ಪಂಚಾಯಿತಿಗಳಿಗೆ ಮೀಸಲಾತಿ ಪ್ರಕ್ರಿಯೆ ಜೂ.16 ಶುಕ್ರವಾರ ಅಪರಾಹ್ನ 3.30 ರಿಂದ ದ.ಕ. ಜಿಲ್ಲಾಧಿಕಾರಿಯವರ ನೇತೃತ್ವದಲ್ಲಿ ಪುತ್ತೂರು ಪುರಭವನದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರ ಸಮ್ಮುಖದಲ್ಲಿ ನಡೆಯಲಿದೆ.

ಕೋಡಿಂಬಾಡಿ, 34 ನೆಕ್ಕಿಲಾಡಿ, ಒಳಮೊಗ್ರು, ಬಜತ್ತೂರು, ಕೆಯ್ಯೂರು, ಮುಂಡೂರು, ಕಬಕ, ಬನ್ನೂರು, ಬಲ್ನಾಡು, ಕೊಳ್ತಿಗೆ, ಕೆದಂಬಾಡಿ, ನೆಟ್ಟಣಿಗೆ ಮುಡ್ನೂರು, ಉಪ್ಪಿನಂಗಡಿ, ಹಿರೇಬಂಡಾಡಿ, ಬೆಟ್ಟಂಪಾಡಿ, ಪಾಣಾಜೆ, ಬಡಗನ್ನೂರು, ಆರ್ಯಾಪು, ಅರಿಯಡ್ಕ, ನಿಡ್ಪಳ್ಳಿ, ನರಿಮೊಗರು, ಕೊಡಿಪ್ಪಾಡಿ ಗ್ರಾಪಂಗಳ ನೂತನ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಗೆ ಮೀಸಲಾತಿ ನಡೆಯಲಿದೆ.





































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top