ಸವಣೂರು ಪ್ರಾ.ಕೃ.ಪ.ಸ.ಸಂಘದಲ್ಲಿ ಕರುಣಾಕರ ಪೂಜಾರಿ ಅವರಿಗೆ ಶ್ರದ್ಧಾಂಜಲಿ

ಸವಣೂರು: ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಸಂಘದ ಮಾಜಿ ಉಪಾಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ಕರುಣಾಕರ ಪೂಜಾರಿ ಪಟ್ಟೆ ಅವರಿಗೆ ಶ್ರದ್ಧಾಂಜಲಿ ಸಭೆ ನಡೆಯಿತು.

ಸಂಘದ ಅಧ್ಯಕ್ಷ ಗಣೇಶ್ ನಿಡ್ವಣ್ಣಾಯ ಮಾತನಾಡಿ, ಕರುಣಾಕರ ಪೂಜಾರಿರವರು ಸಂಘದ ಉಪಾಧ್ಯಕ್ಷರಾಗಿ, ನಿರ್ದೇಶಕರಾಗಿ ಉತ್ತಮ ಸೇವೆಯನ್ನು ನೀಡಿದ್ದಾರೆ. ಅವರ ಅಗಲುವಿಕೆ ತುಂಬಾ ನೋವು ತಂದಿದೆ ಎಂದರು.

ಸಂಘದ ಮಾಜಿ ಅಧ್ಯಕ್ಷ ,ಹಾಲಿ ನಿರ್ದೇಶಕ ಉದಯ ರೈ, ನಿರ್ದೇಶಕ ಮಹಾಬಲ ಶೆಟ್ಟಿ ಕೊಮ್ಮಂಡ , ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಪಿ. ಮಾತನಾಡಿದರು. ಸಂಘದ ಉಪಾಧ್ಯಕ್ಷ ತಾರಾನಾಥ ಕಾಯರ್ಗ, ನಿರ್ದೇಶಕರಾದ ಸೋಮನಾಥ ಕನ್ಯಾಮಂಗಲ, ತಿಮ್ಮಪ್ಪ ಗೌಡ ಮುಂಡಾಲ, ತನಿಯಪ್ಪ ನಾಯ್ಕ ಕಾರ್ಲಾಡಿ, ಚೇತನ್ ಕುಮಾರ್ ಕೋಡಿಬೈಲು, ಪ್ರಕಾಶ್ ರೈ ಸಾರಕರೆ, ನಿರ್ಮಲ ಕೇಶವ ಗೌಡ ಅಮೈ, ವೇದಾವತಿ ಕೆಡೆಂಜಿ ಉಪಸ್ಥಿತರಿದ್ದರು





































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top