ಪುತ್ತೂರು; ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿರುವ ವ್ಯಕ್ತಿಯೋರ್ವರು ತನ್ನ ಮನೆಯ ಬಳಿ ಇರುವ ಹಂಪನ್ನು ತೆಗೆದು ಬಿಡಿ ರಾತ್ರಿ ವಾಹನಗಳ ಜಂಪ್ಗೆ ನಿದ್ದೆ ಬರುತ್ತಿಲ್ಲ ಎಂದು ಕಚೇರಿಗೆ, ಮಾಜಿ ಶಾಸಕರ ಕಚೇರಿಗೆ ಅಲೆದಾಡಿ ಅಲೆದಾಡಿ ಸಾಕಾಗಿ ಹೋಗಿ ಕೊನೆಗೆ ಪುತ್ತೂರಿನ ಶಾಸಕರಾದ ಅಶೋಕ್ ರೈ ಬಳಿ ಹೇಳಿಕೊಂಡಾಗ ಮೂರೇ ದಿನದಲ್ಲಿ ಹಂಪನ್ನು ತೆರವು ಮಾಡಲಾಗಿದೆ.
ಶಾಸಕರ ಅಧಿಕಾರದ ಪವರನ್ನು ಕಂಡ ಆ ವ್ಯಕ್ತಿ ನಾನು ಅಶೋಕ್ ರೈಗೆ ಓಟು ಹಾಕದೆ ತಪ್ಪು ಮಾಡಿದೆ ಎಂದು ತನ್ನ ಸ್ನೇಹಿತರಲ್ಲಿ ಹೇಳಿಕೊಂಡಿದ್ದು ಈ ವಿಚಾರ ಈಗ ಭಾರೀ ಸುದ್ದಿಯಾಗಿದೆ.
ಎರಡೂವರೆ ವರ್ಷದಲ್ಲಿ ಆಗದ ಕೆಲಸವನ್ನು ಕೇವಲ ಮೂರೇ ದಿನದಲ್ಲಿ ಮಾಡಿಸಿದ್ದಾರೆ ಅದು ಅವರ ಗಟ್ಸ್ ಎಂದು ಹೋದಲ್ಲೆಲ್ಲಾ ಅ ವ್ಯಕ್ತಿ ಹೇಳಿಕೊಂಡು ಹೋಗುತ್ತಿದ್ದಾರೆ ಎಂಬ ವಿಚಾರ ಬೆಳಕಿಗೆ ಬಂದಿದೆ.
ಈ ಬಗ್ಗೆ ವವರಣೆ ನೀಡಿದ ಶಾಸಕ ಅಶೋಕ್ ರೈ ನಗರಸಭಾ ವ್ಯಾಪ್ತಿಯ ಆ ವ್ಯಕ್ತಿ ನನ್ನ ಬಳಿ ಪದೇ ಪದೇ ಬರುತ್ತಿದ್ದರು. ಹಂಪ್ ತೆಗೆಸಿ ಸರ್ .. ಹಂಪ್ ತೆಗೆಸಿ ಸಾರ್ ಎಂದು ಮನವಿ ಮಾಡುತ್ತಿದ್ದರು. ಪದೇ ಪದೇ ಬರುವುದನ್ನು ಕಂಡ ನಾನು ಅಧಿಕಾರಿಗಳಿಗೆ ಕರೆ ಮಾಡಿ ಅವರ ಮನೆ ಬಳಿ ಇರುವ ಹಂಪನ್ನು ತೆಗೆಯುವಂತೆ ಸೂಚನೆಯನ್ನು ನೀಡಿದೆ. ಹಂಪ್ ತೆಗೆಯಲಾಗಿದೆ. ಹಂಪ್ ತೆಗೆದ ಖುಷಿಯಲ್ಲಿ ಅವರು ಆ ರೀತಿ ಹೇಳಿದ್ದಾರೆ ಎಂದು ಶಾಸಕರು ತಿಳಿಸಿದ್ದಾರೆ. ಈ ವಿಚಾರವನ್ನು ಕಾರ್ಯಕರ್ತರ ಮುಂದೆ ಶಾಸಕರು ಹೇಳಿಕೊಂಡರು.
























