ಪೊಲೀಸ್ ದೌರ್ಜನ್ಯಕ್ಕೊಳಗಾದವರಿಗೆ ಪುತ್ತಿಲ ಪರಿವಾರದಿಂದ ಒಂದು ಲಕ್ಷ ರೂ. ಸಹಾಯಧನ

ಪುತ್ತೂರು: ಚುನಾವಣೆ ಕಳೆದ ನಂತರ ಬ್ಯಾನರ್ ವಿಷಯಕ್ಕೆ ಸಂಬಂಧಿಸಿದಂತೆ  ಅಮಾನುಷವಾಗಿ ಪೊಲೀಸ್ ದೌರ್ಜನ್ಯಕ್ಕೊಳಕ್ಕಾದ ಕಾರ್ಯಕರ್ತರನ್ನು ಪುತ್ತಿಲ ಪರಿವಾರದ ವತಿಯಿಂದ ಅವರ ಮನೆಗೆ ಭೇಟಿಯಾಗಿ ಆರೋಗ್ಯ ವಿಚಾರಿಸಲಾಯಿತು.

ಈಗಾಗಲೇ ಆಸ್ಪತ್ರೆಯ ಹಾಗೂ ಇತರ ಖರ್ಚು  ವೆಚ್ಚ  ನೀಡಲಾಗಿದ್ದು, ದೌರ್ಜನ್ಯಕ್ಕೊಳಕ್ಕಾದವರು ಕೆಲ ತಿಂಗಳು ಕೆಲಸಕ್ಕೆ ಹೋಗಲು ಧ್ಯವಾಗದಿರುವುದರಿಂದ  ಅವರ ದೈನಂದಿನ ಖರ್ಚು ವೆಚ್ಚಗಳಿಗಾಗಿ ಈ ಸಂದರ್ಭ ಪುತ್ತಿಲ ಪರಿವಾರದ ವತಿಯಿಂದ ಸಂಗ್ರಹಿಸಿದ ಒಂದು ಲಕ್ಷ ರೂಪಾಯಿ ನೀಡಲಾಯಿತು. 

ಈ ಸಂದರ್ಭ ಅರುಣ್ ಕುಮಾರ್ ಪುತ್ತಿಲ,  ಪುತ್ತಿಲ ಪರಿವಾರದ ಅಧ್ಯಕ್ಷರಾದ ಪ್ರಸನ್ನ ಮಾರ್ತಾ,  ಅಂಬಿಕಾ ವಿದ್ಯಾಸಂಸ್ಥೆಗಳ ಮುಖ್ಯಸ್ಥರಾದ ಸುಬ್ರಹ್ಮಣ್ಯ ನಟ್ಟೋಜ,  ಬೀಮ್ ಭಟ್ , ಹಿಂದೂ ಜಾಗರಣ ವೇದಿಕೆಯ ಜಿಲ್ಲಾ  ಪ್ರಮುಖರಾದ ಅವಿನಾಶ್ ಹಾಗೂ ಪ್ರಮುಖರು ಉಪಸ್ಥಿತರಿದ್ದರು.



































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top