ವಿಟ್ಲ: ಕೆಲಸಕ್ಕೆಂದು ತೆರಳಿದ ವಿಟ್ಲದ ಯುವತಿಯೊಬ್ಬಳು ನಾಪತ್ತೆಯಾಗಿರುವ ಪ್ರಕರಣ ನಡೆದಿದೆ.
ಬಂಟ್ವಾಳ ತಾಲೂಕಿನ ವೀರಕಂಭ ಗ್ರಾಮದ ಮಜಿ ನಿವಾಸಿ ಬಾಲಕೃಷ್ಣ ಎಂಬವರ ಪುತ್ರಿ ಶ್ರೀದೇವಿ (23) ನಾಪತ್ತೆಯಾದವರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಟ್ಲ ವಲಯ ಸೇವಾ ಪ್ರತಿನಿಧಿಯಾಗಿರುವ ಶ್ರೀದೇವಿ ಜೂ.9 ರಂದು ಮನೆಯಿಂದ ಕೆಲಸಕ್ಕೆಂದು ತೆರಳಿದವರು ಸಂಜೆ ವರೆಗೂ ಬಾರದ ಹಿನ್ನಲೆಯಲ್ಲಿ ವಿಟ್ಲ ಪೇಟೆ, ಸಂಬಂಧಿಕರ ಮನೆ ಸಹಿತ ವಿವಿಧೆಡೆ ಹುಡುಕಾಟ ನಡೆಸಲಾಗಿತ್ತು. ಅವರ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಎಲ್ಲೂ ಕಂಡುಬರದ ಹಿನ್ನಲೆಯಲ್ಲಿ ವಿಟ್ಲ ಠಾಣೆಗೆ ತಂದೆ ಬಾಲಕೃಷ್ಣ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಪತ್ತೆ ಕಾರ್ಯ ನಡೆಯುತ್ತಿದೆ.