ಕಲ್ಲುಗುಡ್ಡೆ: ಅಂಗನವಾಡಿ ಕೇಂದ್ರದ ವಾರ್ಷಿಕೋತ್ಸವ, ಸನ್ಮಾನ

ಕಡಬ: ಪ್ರಾಥಮಿಕ ಶಾಲೆಗೆ ಮಕ್ಕಳನ್ನು ಸೇರ್ಪಡೆ ಮಾಡುವ ಮೊದಲು ಅವರಿಗೆ ಪೂರ್ವ ಶಿಕ್ಷಣ ಅಂಗನವಾಡಿ ಕೇಂದ್ರದಲ್ಲಿ ಸಿಗುತ್ತಿದೆ. ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಸಂಸ್ಕಾರವನ್ನು  ನೀಡಿ, ಯಾವುದೇ ಒತ್ತಡ ನೀಡಿದೆ ಅವರನ್ನು ಮುಂದಿನ ಶಾಲಾ ಶಿಕ್ಷಣಕ್ಕೆ ತಯಾರು ಮಾಡಲಾಗುತ್ತದೆ. ಅಂಗನವಾಡಿ ಕಾರ್ಯಕರ್ತೆಯರ ಸೇವೆ ಶ್ಲಾಘನೀಯ, ಶಾಲಾ ಶಿಕ್ಷಣಕ್ಕೆ ಮಕ್ಕಳನ್ನು ಸಿದ್ಧತೆ ಮಾಡಿದ ಕೀರ್ತಿ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರಿಗೆ ಸಲ್ಲುತ್ತದೆ ಎಂದು ನೂಜಿಬಾಳ್ತಿಲ ಗ್ರಾಮ ಪಂಚಾಯಿತಿ  ಅಧ್ಯಕ್ಷೆ ಗಂಗಮ್ಮ ಕೆ. ಹೇಳಿದರು. 

ಅವರು ನೂಜಿಬಾಳ್ತಿಲ ಸರಕಾರಿ ಉ.ಹಿ.ಪ್ರಾ. ಶಾಲಾ ಸಭಾಂಗಣದಲ್ಲಿ ದ.ಕ ಜಿಲ್ಲಾ.ಪಂ,  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಗ್ರಾಮ ಪಂ.ನೂಜಿಬಾಳ್ತಿಲ, ಬಾಲ ವಿಕಾಸ ಸಮಿತಿ, ಅಂಗನವಾಡಿ ಕೇಂದ್ರ ಕಲ್ಲುಗುಡ್ಡೆ ಇವುಗಳ  ಜಂಟಿ ಆಶ್ರಯದಲ್ಲಿ ಕಲ್ಲುಗುಡ್ಡೆ ಅಂಗನವಾಡಿ ಕೇಂದ್ರದ ವಾರ್ಷಿಕೋತ್ಸವ ಮತ್ತು ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಅಮೀನ ಕೆ. ಅವರಿಗೆ ಸಮ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 

ರೆಂಜಿಲಾಡಿ ಬೀಡಿನ ಯಶೋಧರ ಯಾನೆ ತಮ್ಮಯ್ಯ ಬಳ್ಳಾಲ್ ಮಾತನಾಡಿ, ಮಕ್ಕಳಿಗೆ ಚಟುವಟಿಕೆಯಲ್ಲಿ ತೊಡಗಲು ವಾರ್ಷಿಕೋತ್ಸವ ಕಾರ್ಯಕ್ರಮ ಪೂರಕವಾಗಿದ್ದು, ಈ ಮೂಲಕ ಮಕ್ಕಳ ವ್ಯಕ್ತಿತ್ವ ಬೆಳವಣಿಗೆಗೂ ಇದು ದಾರಿಯಾಗುತ್ತದೆ. ಕಲ್ಲುಗುಡ್ಡೆ ಅಂಗನವಾಡಿ ಕೇಂದ್ರ ತನ್ನದೇ ಆದ ವಿಶೇಷತೆಗಳಿಂದ ಗುರುತಿಸಿಕೊಂಡಿದೆ. ಇಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿರುವುದು ಇದಕ್ಕೆ ಪೂರಕ ಎಂದರು.



































 
 

ಕಲ್ಲುಗುಡ್ಡೆ ಅಂಗನವಾಡಿ ಕೇಂದ್ರದ ಬಾಲವಿಕಾಸ ಸಮಿತಿ ಅಧ್ಯಕ್ಷೆ ನಾಗವೇಣಿ ದುರ್ಗಾಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಕಡಬ ಉಪತಹಶೀಲ್ದಾರ್ ಗೋಪಾಲ ಕಲ್ಲುಗುಡ್ಡೆ ಸಮ್ಮಾನ ನೆರವೇರಿಸಿದರು. ಗ್ರಾ.ಪಂ. ಪ್ರಭಾರ ಪಿಡಿಒ ಗುರುವ ಎಸ್.ಬಹುಮಾನ ವಿತರಿಸಿದರು. ಗ್ರಾ.ಪಂ. ಸದಸ್ಯರಾದ ಜೋಸೆಫ್ ಪಿ.ಜೆ., ವಸಂತ ಕುಬಲಾಡಿ, ವಿಜಯಲಕ್ಷ್ಮಿ ಅರಿಮಜಲು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಭವಾನಿ, ನೂಜಿಬಾಳ್ತಿಲ ಶಾಲಾ ಮುಖ್ಯ ಶಿಕ್ಷಕಿ ಸುಂದರಿ, ಸಿವಿಲ್ ಇಂಜಿನಿಯರ್ ದುರ್ಗಾಪ್ರಸಾದ್ ಕೆ.ಪಿ., ನೂಜಿಬಾಳ್ತಿಲ ಶಾಲಾ ಎಸ್ಡಿಎಂಸಿ ಅಧ್ಯಕ್ಷ ಬಾಲಕೃಷ್ಣ ಉಳಿಪ್ಪು, ಮಾಜಿ ಮೇಲ್ವಿಚಾರಕಿ ಹೇಮರಾಮ್ ದಾಸ್, ಗೊಂಚಲು ಸಮಿತಿ ಅಧ್ಯಕ್ಷೆ ಮರಿಯಮ್ಮ, ಅಂಗನವಾಡಿ ಕಾರ್ಯಕರ್ತೆ/ಸಹಾಯಕಿಯರ ಸಂಘದ ಅಧ್ಯಕ್ಷೆ ಪ್ರಫುಲ್ಲಾ ರೈ ಕುಬಲಾಡಿ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

 ಅಮೀನ ಕೆ. ವರದಿ ವಾಚಿಸಿದರು. ಶಿಕ್ಷಕಿ ಶ್ರೀಲತಾ ಸ್ವಾಗತಿಸಿದರು. ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಕಿಟ್ಟು ಕೆ. ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಈ ಸಂದರ್ಭದಲ್ಲಿ ನಿವೃತ್ತಿಗೊಂಡ ಅಂಗನವಾಡಿ ಕಾರ್ಯಕರ್ತೆ ಅಮೀನ ಕೆ. ಅವರನ್ನು ಶಾಲು, ಹಾರ, ಸಮ್ಮಾನ ಪತ್ರ, ಫಲ-ಪುಷ್ಪ ನೀಡಿ ಸಮ್ಮಾನಿಸಿ ಗೌರವಿಸಲಾಯಿತು. ಪುತ್ರಿ ಇಂದಿಕಾ ಜತೆಗಿದ್ದರು. ಅಮೀನ ಅವರು ಅಂಗನವಾಡಿಗೆ ತಮ್ಮ ವತಿಯಿಂದ ಕೊಡುಗೆ ಹಸ್ತಾಂತರಿಸಿದರು. ಪೋಷಕರ ವತಿಯಿಂದಲೂ ಅಂಗನವಾಡಿಗೆ ಕೊಡುಗೆ ಹಸ್ತಾಂತರಿಸಲಾಯಿತು. 

ಅಂಗನವಾಡಿ ಪುಟಾಣಿ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top