ಕಲ್ಲಾರೆಯಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆ

ಪುತ್ತೂರು: ಕಲ್ಲಾರೆ ಕಟ್ಟಡವೊಂದರ ಬಳಿ ವ್ಯಕ್ತಿಯೊಬ್ಬರ ಶವ ಬುಧವಾರ ಪತ್ತೆಯಾಗಿದೆ.

ಉಪ್ಪಿನಂಗಡಿ ಮೂಲದ, ಗುಜರಿ ಹೆಕ್ಕುತ್ತಿದ್ದ ಮಂಜುನಾಥ ಮೃತಪಟ್ಟ ರೀತಿಯಲ್ಲಿ ಪತ್ತೆಯಾದವರು.

ಮಂಜುನಾಥ್ ಅವರು ನಿತ್ಯ ಗುಜುರಿ ಹೆಕ್ಕಿ ಜೀವನ ಸಾಗಿಸುತ್ತಿದ್ದರು. ಕಲ್ಲಾರೆ ಕಟ್ಟಡವೊಂದರ ಬಳಿ ಅವರು ಮಲಗುತ್ತಿದ್ದರು. ಕಳೆದ ಮೂರು ತಿಂಗಳ ಹಿಂದೆ ಪಕ್ಷಪಾತಕ್ಕೀಡಾಗಿ ಮಂಗಳೂರಿನ ವೆನ್‍ಲಾಕ್ ಆಸ್ಪತ್ರೆಗೆ ದಾಖಲಾಗಿದ್ದು, ಚೇತರಿಕೆಗೊಂಡ ಬಳಿಕ ಮತ್ತೆ ಅದೇ ಕಾಯಕ ಮಾಡುತ್ತಿದ್ದರು. ಇದೀಗ ಅವರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಮಾಹಿತಿ ಕಲೆ ಹಾಕಿದ್ದಾರೆ.



































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top