ಪುತ್ತೂರು : ಹಿಂದೂ ಮುಖಂಡ ಅಜಿತ್ ರೈ ಹೊಸಮನೆಯನ್ನು ಕಾರ್ಯಕರ್ತರು ಹೊರದೂಡಿದ ಘಟನೆ ಪುತ್ತೂರು ಮಹಾವೀರ ಆಸ್ಪತ್ರೆಯಲ್ಲಿ ಮೇ 19 ರಂದು ನಡೆದಿದೆ.
ಬಿಜೆಪಿ ನಾಯಕ ಬಸನಗೌಡ ಪಾಟೀಲ ಯತ್ನಾಳ್ ಪುತ್ತೂರಿಗೆ ಆಗಮಿಸಿ ಬ್ಯಾನರ್ ಪ್ರಕರಣದಲ್ಲಿ ಪೊಲೀಸ್ ದೌರ್ಜನ್ಯಕ್ಕೊಳಗಾಗಿ ಮಹಾವೀರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿಂದೂ ಕಾರ್ಯಕರ್ತರನ್ನು ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದರು. ಈ ಸಂದರ್ಭ ಅವರೊಂದಿಗೆ ಅರುಣ್ ಪುತ್ತಿಲ ಮತ್ತು ಅವರ ಬೆಂಬಲಿಗರು ಇದ್ದು, ಯತ್ನಾಳ್ ಗಾಯಾಳು ಕೊಠಡಿಗೆ ಹೋಗುವ ಸಂದರ್ಭ ಅವರ ಹಿಂದೆ ಅಜಿತ್ ರೈ ಹೊಸಮನೆ ಕೊಠಡಿಯ ಒಳಬರಲು ಪ್ರಯತ್ನಿಸಿದಾಗ ಆತನನ್ನು ಒಳಬರದಂತೆ ಕಾರ್ಯಕರ್ತರು ತಡೆಹಿಡಿದು ಹೊರದೂಡಿ ಬಾಗಿಲು ಹಾಕಿದ್ದಾರೆ.
ಸದ್ಯ ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.