ಪುತ್ತೂರು: ಜಯನಗರ ಕ್ಷೇತ್ರದಲ್ಲಿಕೊನೆಗೂ ಬಿಜೆಪಿ ಅಭ್ಯರ್ಥಿ ಕೆ.ಸಿ. ರಾಮಮೂರ್ತಿ ಜಯ ಗಳಿಸಿದ್ದಾರೆ.
ತಡರಾತ್ರಿವರೆಗೂ ಮರುಮತ ಎಣಿಕೆ ಕಾರ್ಯ ನಡೆಯಿತು. ಮೊದಲಿಗೆ 10 ಮತಗಳಿಂದ ಕಾಂಗ್ರೆಸಿನ ಸೌಮ್ಯ ರೆಡ್ಡಿ ಅವರು ಮುನ್ನಡೆ ಸಾಧಿಸಿದ್ದು, ಇದನ್ನು ಕೆ.ಸಿ. ರಾಮಮೂರ್ತಿ ಪ್ರಶ್ನಿಸಿ ಮರು ಮತ ಎಣಿಕೆಗೆ ಮನವಿ ಮಾಡಿದರು.
ಸ್ಥಳಕ್ಕೆ ಆಗಮಿಸಿದ ಚುನಾವಣಾಧಿಕಾರಿ, ಇಬ್ಬರು ಅಭ್ಯರ್ಥಿಗಳನ್ನು ಕರೆಸಿ ಅವರ ಸಮ್ಮುಖದಲ್ಲೇ ಮರು ಮತ ಎಣಿಕೆ ನಡೆಸಿದರು. 5 ಬಾರಿಯ ಮತ ಎಣಿಕೆಯಲ್ಲೂ ಸೂಕ್ತ ಫಲಿತಾಂಶ ಪಡೆಯಲು ಸಾಧ‍್ಯವಾಗಲಿಲ್ಲ. 6ನೇ ಬಾರಿಯ ಮತ ಎಣಿಕೆಯಲ್ಲಿ ಕೆ.ಸಿ. ರಾಮಮೂರ್ತಿ ಜಯ ಗಳಿಸಿದ್ದಾರೆ ಎಂದು ಘೋಷಿಸಲಾಯಿತು.
























