ಸ್ನಾನಕ್ಕೆ ತೆರಳಿದ ಸಹೋದರಿಯರು ಬಳ್ಪ‌ ಹೊಳೆ ಪಾಲು | ಹಂಸಿತಾ, ಅವಂತಿಕಾ ಮೃತದೇಹ ಪತ್ತೆ

ಸುಳ್ಯ: ಬಳ್ಪ ಸಮೀಪದ ಕೇನ್ಯ ಕಣ್ಕಲ್ ಬಳಿಯ ಹೊಳೆಯಲ್ಲಿ ಮುಳುಗಿ ಸಹೋದರಿಯರಿಬ್ಬರು ನೀರು ಪಾಲಾದ ಘಟನೆ ಸೋಮವಾರ ನಡೆದಿದೆ. ಹಂಸಿತಾ ( 15 ) ಮತ್ತು ಅವಂತಿಕಾ ( 11 ) ಇಬ್ಬರ ಮೃತದೇಹವೂ ಪತ್ತೆಯಾಗಿದೆ.

ಸೋಮವಾರ ಸಂಜೆ ದುರ್ಘಟನೆ ಸಂಭವಿಸಿದೆ. ಮೂಲತಃ ಕಣ್ಕಲ್ ನವರಾಗಿದ್ದು, ಬೆಂಗಳೂರಿನಲ್ಲಿ ಇಂಜಿನಿಯರ್ ಆಗಿರುವ ಸತೀಶ್ ಅಮ್ಮಣ್ಣಾಯ ಅವರ ಪುತ್ರಿಯರು ಇವರು.

ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದವರು ಕಾರ್ಯಾಚರಣೆ ಆರಂಭಿಸಿದರು. ರಾತ್ರಿ ವೇಳೆಗೆ ಇಬ್ಬರ ಮೃತದೇಹವೂ ಪತ್ತೆಯಾಗಿದೆ. ಸ್ಥಳೀಯರು ಕಾರ್ಯಾಚರಣೆಗೆ ಸಹಕರಿಸಿದರು.







































 
 

ಸತೀಶ್ ಅಮ್ಮಣ್ಣಾಯ ಅವರ ಮನೆಯಲ್ಲಿ ಮಂಗಳವಾರ ನಡೆಯುವ ಕಾರ್ಯಕ್ರಮವೊಂದರ ನಿಮಿತ್ತ ಸಹೋದರಿಯರಿಬ್ಬರು ತಾಯಿಯೊಂದಿಗೆ ಸೋಮವಾರ ಬೆಂಗಳೂರಿನಿಂದ ಆಗಮಿಸಿದ್ದರು. ಸಂಜೆ ವೇಳೆ ಸಹೋದರಿಯರು ಸ್ನಾನಕ್ಕೆಂದು ಹೊಳೆಗೆ ಹೋಗಿದ್ದರು. ಈ ವೇಳೆ ಒಬ್ಬಾಕೆ ನೀರಿನ ಸೆಳೆತಕ್ಕೆ ಸಿಲುಕಿದಾಗ ಮತ್ತೊಬ್ಬಾಕೆ ರಕ್ಷಿಸಲು ಹೋಗಿ ಇಬ್ಬರೂ ನೀರು ಪಾಲಾಗಿರಬಹುದೆಂದು ಶಂಕಿಸಲಾಗಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top