ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ದಿವ್ಯಪ್ರಭಾ ಗೌಡ ಬನ್ನೂರು, ಕೇಪುಲು, ತಾರಿ ಗುಡ್ಡೆ ಹಾಗೂ ಕೃಷ್ಣಾನಗರ ವಾರ್ಡ್ ಗಳಲ್ಲಿ ಇಂದು ಸಾರ್ವಜನಿಕ ಭಾಷಣ ನಡೆಸಿ ಮತ ಯಾಚಿಸಿದರು.

ಈ ಸಂಧರ್ಭದಲ್ಲಿ ಮಾತನಾಡಿದ ದಿವ್ಯ ಪ್ರಭಾ, ಪುತ್ತೂರು ಕ್ಷೇತ್ರದಲ್ಲಿ ಈಗ ಬಿಜೆಪಿ vs ಜೆಡಿಎಸ್ ಸ್ಪರ್ಧೆಯಾಗಿ ಮಾರ್ಪಟ್ಟಿದೆ. ಯಾಕೆಂದರೆ ಕಾಂಗ್ರೆಸ್ನಲ್ಲಿ ಇರುವ ಅಭ್ಯರ್ಥಿ ಬಿಜೆಪಿಯಿಂದ ಬಂದವರು ಹಾಗೇಯೇ ಪಕ್ಷೇತರ ಅಭ್ಯರ್ಥಿ ಕೂಡ ಬಿಜೆಪಿಯವರು ಎಂದು ಲೇವಡಿ ಮಾಡಿದರು. ನಗರದ ವಾರ್ಡ್ ಗಳಿಗೆ ಶಾಸಕರು ಕೋಟಿ ಕೋಟಿ ಅನುದಾನ ನೀಡಿದ್ದಾರೆ ಎಂದು ಫ್ಲೆಕ್ಸ್ ಬ್ಯಾನರ್ ಗಳಲ್ಲಿ ಪ್ರಚಾರ ನೀಡಿದ್ದಾದರೆಯೆ ಹೊರತು ಅಭಿವೃದ್ಧಿಯ ಒಂದಕ್ಷರ ಕೂಡ ನಡೆದಿಲ್ಲ. ಕಾಲೋನಿಗಳಲ್ಲಿ ಸರಿಯಾದ ಚರಂಡಿ ವ್ಯವಸ್ಥೆಗಳಿಲ್ಲ , ಚರಂಡಿಯಲ್ಲಿನ ಕಸ ಕಡ್ಡಿ ಬೆಳೆದ ಗಿಡಗಳನ್ನು ಸ್ವಚ್ಚಗೊಳಿಸದೆ ವರ್ಷಗಳೇ ಕಳೆದಿವೆ 40% ಆಸೆಗಾಗಿ ಕೇವಲ ರಸ್ತೆಗಳನ್ನು ನಿರ್ಮಿಸಿ ಜನರ ಕಣ್ಣಿಗೆ ಮಣ್ಣೆರಚಿದ್ದಾರೆ. ನಗರದಲ್ಲಿ ಆಟೋ ರಿಕ್ಷಾ ಚಾಲಕರಿಗೆ ಸರಿಯಾದ ರಿಕ್ಷಾ ಸ್ಟ್ಯಾಂಡ್ ಗಳಿಲ್ಲ ಚಾಲಕರಿಗೆ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ ಇಲ್ಲ ಹೀಗೆ ನಗರದಲ್ಲಿ ಯಾವುದೇ ಅಭಿವೃದ್ಧಿ ಆಗಿಲ್ಲ ಎಂದು ಆರೋಪಿಸಿದರು.
ಈ ಬಾರಿ ಪರ್ಯಾಯವಾಗಿ ಜೆಡಿಎಸ್ ಅಭ್ಯರ್ಥಿ ಯಾದ ನನಗೆ ಮತ ನೀಡಿ ಗೆಲ್ಲಿಸಿಕೊಟ್ಟು ಅಭಿವೃದ್ಧಿ ಎಂದರೆ ಏನೆಂಬುದನ್ನು ತೋರಿಸುತ್ತೇನೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಜೆಡಿಎಸ್ ಪುತ್ತೂರು ತಾಲೂಕು ಅಧ್ಯಕ್ಷ ಅಶ್ರಫ್ ಕಲ್ಲೇಗ, ರಾಜ್ಯ ಜೆಡಿಎಸ್ ವಕ್ತಾರೆ ಜೋಹರ ನಿಸಾರ್ ಅಹ್ಮದ್ ಮತ್ತಿತರರು ಉಪಸ್ಥಿತರಿದ್ದರು.
























