ಪುತ್ತೂರು: ಭಾರತೀಯ ಜನತಾ ಪಾರ್ಟಿ ವತಿಯಿಂದ ಶಾಂತಿಗೋಡು ಗ್ರಾಮದಲ್ಲಿ ಬುಧವಾರ ಮತ ಯಾಚನೆ ಮಾಡಲಾಯಿತು.
ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ನೇತೃತ್ವದಲ್ಲಿ ಶಾಂತಿಗೋಡು ಗ್ರಾಮದ ಕೈಂದಾಡಿ, ಶಾಂತಿಗೋಡು, ಕುಕ್ಯಾನ, ಕರ್ಪುತಮೂಳೆ, ಪಜಿರೋಡಿ ಮುಂತಾದ ಕಡೆಗಳಲ್ಲಿ ಮನೆ ಮನೆಗೆ ತೆರಳಿ ಮತ ಯಾಚಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಜಿಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಶಕ್ತಿಕೇಂದ್ರದ ಅಧ್ಯಕ್ಷ ಶ್ಯಾಮ್ ಭಟ್, ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ವಿನೋದ್ ಕರ್ಪುತಮೂಳೆ, ಕಾರ್ಯಕರ್ತರಾದ ಶಿವಪ್ರಸಾದ್ ಕೈಂದಾಡಿ, ವಿಘ್ನೇಶ್ ಕುಕ್ಯಾನ, ಹೊನ್ನಪ್ಪ ಗೌಡ, ಪ್ರಸಾದ್ ಕಕ್ವೆ, ಸಂದೀಪ್ ಕಕ್ವೆ, ಮತ್ತಿತರರು ಪಾಲ್ಗೊಂಡಿದ್ದರು.