ಪುತ್ತೂರು: ಪ್ರಜಾಪ್ರಭುತ್ವದ ಹಬ್ಬವಾದ ಮತದಾನಕ್ಕೆ ಸೋಮವಾರ ಚಾಲನೆ ನೀಡಲಾಗಿದೆ.
ಮತಗಟ್ಟೆ ಅಧಿಕಾರಿಗಳು ಸೋಮವಾರ ತಾಲೂಕಿನ ವಿವಿಧ ಕಡೆಗಳ ಮನೆಗಳಿಗೆ ತೆರಳಿ 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರ ಹಾಗೂ ವಿಶೇಷ ಚೇತನರಿಂದ ಮತದಾನ ಮಾಡಿಸಿದರು.
ಇದೇ ಮೊದಲ ಬಾರಿಗೆ ಮತದಾನ ವ್ಯವಸ್ಥೆಯಲ್ಲಿ ಅಧಿಕಾರಿಗಳು ಸ್ವತಃ ಮನೆಗಳಿಗೆ ತೆರಳಿ ಮತದಾನ ನಡೆಸುತ್ತಿದ್ದಾರೆ. ಸೋಮವಾರ ಬೆಳಗ್ಗೆ ತಾಲೂಕು ಆಡಳಿತ ಸೌಧದಲ್ಲಿ ಮಸ್ಟರಿಂಗ್ ಪ್ರಕ್ರಿಯೆ ನಡೆದು, ಮತದಾನದ ಪ್ರಕ್ರಿಯೆ ನಡೆಯಿತು. ಸಂಜೆ ಡಿಮಸ್ಟರಿಂಗ್ ನಡೆಯಿತು.