ಪುತ್ತೂರು, ಸುಳ್ಯದಲ್ಲಿ ಮಹಿಳಾ ಅಭ್ಯರ್ಥಿಗಳಿಗೆ ಅವಕಾಶ; ಗೆದ್ದೇ ಗೆಲ್ತೀವಿ: ಅಣ್ಣಾಮಲೈ

ಪುತ್ತೂರು: ಬಹಳ  ಧೈರ್ಯಶಾಲಿ  ಕ್ರಮವನ್ನು ಮೋದಿ ತೆಗೆದುಕೊಂಡಿದ್ದಾರೆ ಎಂದರೆ ಅದಕ್ಕೆ ಮತದಾರರು ಕಾರಣ. ಮುಂದೆಯೂ ಇಂತಹ ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ. ಅದಕ್ಕಾಗಿ ರಾಜ್ಯದಲ್ಲಿ ಬಿಜೆಪಿ 130ಕ್ಕೂ ಅಧಿಕ ಸೀಟ್ ಪಡೆದುಕೊಳ್ಳಬೇಕು. ಇದಕ್ಕೆ ಪೂರಕವಾಗಿ ಬಿಜೆಪಿಯ ಭದ್ರ ಬುನಾದಿ ಇರುವ ಪುತ್ತೂರಿನಲ್ಲೂ ಬಿಜೆಪಿ ಗೆಲ್ಲಲಿದೆ ಎಂದು ಕರ್ನಾಟಕ ಬಿಜೆಪಿ ಚುನಾವಣಾ ಸಹ ಪ್ರಭಾರಿ ಅಣ್ಣಾಮಲೈ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಡಾಯ, ಪಕ್ಷೇತರ ಅಭ್ಯರ್ಥಿಗಳ ಬಗ್ಗೆ ಮಾತನಾಡಲ್ಲ. ಕರಾವಳಿಯಲ್ಲಿ ಬಿಜೆಪಿ ಭದ್ರಬುನಾದಿ ಇರುವ ಕಾರಣ, ಪಕ್ಷೇತರರು ಬಿಜೆಪಿಯಲ್ಲಿ ಟಿಕೇಟ್ ಕೊಡಬೇಕು ಎಂದು ಕೇಳುತ್ತಾರೆ. ಬಿಜೆಪಿ ಡೆಮಾಕ್ರಾಟಿಕ್ ಪಕ್ಷ. ಆದ್ದರಿಂದ ಇದು ತಪ್ಪು ಎನ್ನುತ್ತಿಲ್ಲ. ಆದರೆ ಮತದಾರರು ಆಲೋಚಿಸಬೇಕು. ಎಷ್ಟೋ ಕಾರ್ಯಕರ್ತರು ಪಕ್ಷಕ್ಕಾಗಿ ಪ್ರಾಣ ನೀಡಿದ್ದಾರೆ. ನಾಯಕರು ಶ್ರಮ ವಹಿಸಿದ್ದಾರೆ. ಶಾಸಕ ಸಂಜೀವ  ಮಠಂದೂರು ಅಂತಹ ಶಾಸಕರು ಬಹಳ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಅದು ವ್ಯರ್ಥವಾಗದಂತೆ ನೋಡಿಕೊಳ್ಳಿ ಎಂದು ಮನವಿ ಮಾಡಿಕೊಂಡರು.

ಅಭ್ಯರ್ಥಿ ಆಶಾ ತಿಮ್ಮಪ್ಪ, ಶಾಸಕ ಸಂಜೀವ ಮಠಂದೂರು, ಸಾಜಾ ರಾಧಾಕೃಷ್ಣ ಆಳ್ವ, ಪಿ.ಜಿ. ಜಗನ್ನಿವಾಸ್ ರಾವ್, ಬಿಂದು ಸುರೇಶ್, ಅಡ್ವೊಕೇಟ್ ಸುರೇಶ್, ಅಪ್ಪಯ್ಯ ಮಣಿಯಾಣಿ, ಗೋಪಾಲಕೃಷ್ಣ ಹೇರಳೆ, ಬೂಡಿಯಾರ್ ರಾಧಾಕೃಷ್ಣ ರೈ, ಆರ್.ಸಿ. ನಾರಾಯಣ್, ಚಂದ್ರಶೇಖರ್ ರಾವ್ ಬಪ್ಪಳಿಗೆ ಉಪಸ್ಥಿತರಿದ್ದರು.



































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top