ನಿನ್ನ ಹೆಗಲಿನ ಹೊರೆಯ ದೈವಭುಜಕೇರಿಸುವ|
ಸನ್ನಾಹ ಸಾಗೀತೆ? ದೈವ ಒಪ್ಪಿತೆ?||
ಮನ್ನಿಸಲಿ ವಿಧಿ ನಿನ್ನ ಬೇಡಿಕೆಯ, ಭಿನ್ನಿಸಲಿ|
ನಿನ್ನ ಬಲವನು ಮೆರೆಸೊ-ಮಂಕುತಿಮ್ಮ||
ನಾವು ಹೊತ್ತು ತಂದ ವಿಧಿಯ ಭಾರವನು ದೈವದ ಭುಜಕ್ಕೆ ಏರಿಸುವ ಪ್ರಯತ್ನ ಮಾಡಬಾರದು. ನಮ್ಮ ಈ ಬೇಡಿಕೆಯನ್ನು ದೈವ ಒಪ್ಪಲಿ ಅಥವಾ ತಿರಸ್ಕರಿಸಲಿ ಈ ಬಗ್ಗೆ ಯೋಚಿಸದೆ ದೇವರು ನಮಗೆ ಕೊಟ್ಟ ಬಲವನ್ನು ಬಳಸಿ ನಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕು ಎಂದು ಮಾನ್ಯ ಡಿವಿಜಿಯವರು ಈ ಕಗ್ಗದಲ್ಲಿ ಹೇಳಿದ್ದಾರೆ.
ಜೀವನದಲ್ಲಿ ಎಲ್ಲವೂ ವಿಧಿ ಲಿಖಿತದಂತೆ ನಡೆಯುವುದು ಎಂದು ಭಾವಿಸಿಕೊಂಡು ಕೈಕಟ್ಟಿಕೊಂಡು ಕುಳಿತುಕೊಳ್ಳಬಾರದು. ದೇವರು ನಮಗೆ ಕೊಟ್ಟರುವ ದೈಹಿಕ ಮತ್ತು ಬೌದ್ಧಿಕ ಶಕ್ತಿಯನ್ನು ಬಳಸಿಕೊಂಡು ಶ್ರದ್ಧಾಭಕ್ತಿಯಿಂದ ನಮ್ಮ ಕರ್ತವ್ಯದಲ್ಲಿ ತಲ್ಲೀನರಾಗಬೇಕು. ಜಗತ್ತಿನಲ್ಲಿರುವ ಪ್ರತಿ ವ್ಯಕ್ತಿಗೂ ಅವನದ್ದೇ ಆದ ಕರ್ತವ್ಯ ಮತ್ತು ಜವಾಬ್ದಾರಿಗಳಿರುತ್ತವೆ. ಅದನ್ನು ಶ್ರದ್ಧೆಯಿಂದ ನಿರ್ವಹಿಸುವುದೇ ನಿಜವಾದ ಜೀವನ ಧರ್ಮ. ಪುರುಷ ಪ್ರಯತ್ನವನ್ನು ಮಾಡದೆ ದೈವವನ್ನೇ ನಂಬಿ ಕುಳಿತುಕೊಳ್ಳುವುದನ್ನು ಒಪ್ಪಲಾಗದು.
ದೈವ ಮತ್ತು ಪುರುಷ ಪ್ರಯತ್ನಗಳಲ್ಲಿ ಯಾವುದು ಹೆಚ್ಚು ಪ್ರಾಮುಖ್ಯವಾದುದೆಂಬ ಬಗ್ಗೆ ಚರ್ಚೆ ನಡೆಯುತ್ತಲೇ ಬಂದಿದೆ. ನಾವು ಈ ಚರ್ಚೆಗೆ ಮನಗೊಡುವುದನ್ನು ಬಿಟ್ಟು ಇವೆರಡನ್ನು ಸರಿದೂಗಿಸಿಕೊಂಡು ಹೋಗುವುದೇ ಮನುಷ್ಯನ ಜಾಣ್ಮೆ ಎನ್ನುವುದನ್ನು ಅರಿಯಬೇಕು. ದೈವ ಆಕಾಶದಿಂದ ಮಳೆ ಸುರಿಸಿ ಕೆರೆಕಟ್ಟೆ ತುಂಬಿ ಸಕಲ ಜೀವಿಗಳಿಗೂ ನೀರನ್ನು ಒದಗಿಸುತ್ತದೆ. ಆದರೆ ಬೇಸಿಗೆಯಲ್ಲಿ ನೀರು ಬತ್ತಿದಾಗ ಆಳವಾದ ಬಾವಿಗಳನ್ನು ತೋಡಿ ನೀರನ್ನು ಪಡೆಯುವ ಮನುಷ್ಯ ಪ್ರಯತ್ನವು ಬೇಕಲ್ಲವೆ? ಇಂತಹ ಪುರುಷ ಪ್ರಯತ್ನಕ್ಕೆ ದೈವಾನುಗ್ರಹ ಸದಾ ಇರುತ್ತದೆ.
ಜಾಲ ಬೀಸದೆ ಬೆಸ್ತ ಮೀನ ಹಿಡಿಯುವನೆಂತು?|
ಚಾಣ ಹಿಡಿಯದೆ ಶಿಲ್ಪಿ ಮೂರ್ತಿ ರಚಿಸುವನೆ?||
ರೂಪಿಸದೆ ಪದವ ಕವಿ ಕವನ ಬರೆಯುವನೆಂತು?|
ಯತ್ನದಲಿ ಸತ್ವವಿದೆ- ಮುದ್ದುರಾಮ||
ಎಂಬ ಕವಿ ಶಿವಪ್ಪನವರ ನುಡಿಯರಿತು ನಮ್ಮ ಪೌರುಷದ ಬಲವನ್ನು ಮೆರೆಸುವ ಅಂದರೆ ಬಳಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಿದಾಗಲೇ ಜೀವನ ಸಾರ್ಥಕವಾಗುವುದಲ್ಲವೆ?

ಪ್ರಭಾಕರ ಶೆಟ್ಟಿ ಕೊಂಡಳ್ಳಿ