ವಿದ್ಯಾರ್ಥಿನಿಗೆ ಲವ್‌ ಪ್ರಪೋಸ್‌ ಪ್ರಕರಣ : ಕಾಲೇಜಿಗೆ ಬಾಂಬ್‌ ಬೆದರಿಕೆ

ಪ್ರೊಪೆಸರ್‌ಗೆ ಥಳಿಸಿದ ವಿಡಿಯೋ ವೈರಲ್‌ ಆದ ಹಿನ್ನೆಲೆಯಲ್ಲಿ ಬೆದರಿಕೆ ಬೆಂಗಳೂರು: ಬೆಂಗಳೂರು ಸಮೀಪದ ನೆಲಮಂಗಲ ತಾಲೂಕಿನ ಟಿ.ಬೇಗೂರಿನಲ್ಲಿರುವ ಶ್ರೀ ಸಿದ್ಧಾರ್ಥ ಮೆಡಿಕಲ್ ಸೈನ್ಸಸ್ ಮತ್ತು ರಿಸರ್ಚ್ ಸೆಂಟರ್ ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಅಬ್ದುಲ್‌ ಎಂಬಾತ ತರಗತಿಯಲ್ಲಿ ವಿದ್ಯಾರ್ಥಿನಿಗೆ ಲವ್ ಪ್ರಪೋಸ್ ಮಾಡಿದ ವಿಡಿಯೋ ವೈರಲ್ ಆದ ಬೆನ್ನಲ್ಲೇ, ಕಾಲೇಜಿಗೆ ಬಾಂಬ್ ಬೆದರಿಕೆ ಕರೆ ಬಂದಿದೆ. ಡಾ.ಅಬ್ದುಲ್‌ಗೆ ವಿದ್ಯಾರ್ಥಿನಿ ಚಪ್ಪಲಿಯಲ್ಲಿ ಹೊಡೆದ ವಿಡಿಯೋ ವೈರಲ್‌ ಆಗಿದೆ. ಶುಕ್ರವಾರ ಮುಂಜಾನೆ ಕಾಲೇಜಿನ ಪ್ರಿನ್ಸಿಪಾಲ್ ಸೇರಿದಂತೆ ಅಧಿಕಾರಿಗಳ ಅಧಿಕೃತ ಇಮೇಲ್‌ಗಳಿಗೆ ಬಾಂಬ್ […]

ವಿದ್ಯಾರ್ಥಿನಿಗೆ ಲವ್‌ ಪ್ರಪೋಸ್‌ ಪ್ರಕರಣ : ಕಾಲೇಜಿಗೆ ಬಾಂಬ್‌ ಬೆದರಿಕೆ Read More »

ಐಪಿಎಲ್‌ ಉದ್ಘಾಟನೆಗೆ ಕ್ಷಣಗಣನೆ : ಕಾತುರದಿಂದ ಕಾಯುತ್ತಿರುವ ಕ್ರಿಕೆಟ್‌ ಪ್ರೇಮಿಗಳು

10 ತಂಡಗಳು, 74 ಪಂದ್ಯಗಳು, 65 ದಿನಗಳ ಕಾಲ ಸೆಣಸಾಟ ಬೆಂಗಳೂರು: ಜಾಗತಿಕ ಮಟ್ಟದ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಆಗಿರುವ ಐಪಿಎಲ್ ಇಂದಿನಿಂದ ಆರಂಭವಾಗುತ್ತಿದೆ. 18 ವರ್ಷಗಳಿಂದ ಕ್ರಿಕೆಟ್ ಅಭಿಮಾನಿಗಳಿಗೆ ಮನರಂಜನೆ ಒದಗಿಸುತ್ತಿರುವ ಐಪಿಎಲ್‌ನ 19ನೇ ಆವೃತ್ತಿಗೆ ಇಂದು ಚಾಲನೆ ಸಿಗಲಿದೆ. ಕಳೆದ ಸಾಲಿನ ಚಾಂಪಿಯನ್ ಆರ್‌ಸಿಬಿಯ ತವರು ಸ್ಟೇಡಿಯಂ ಆಗಿರುವ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದೆ. ಬೆಂಗಳೂರಿನಲ್ಲಿ ಬರೋಬ್ಬರಿ 18 ವರ್ಷ ಬಳಿಕ ಉದ್ಘಾಟನಾ ಪಂದ್ಯ ನಡೆಯಲಿದ್ದು, ಕಳೆದ ವರ್ಷದ ಭೀಕರ ಕಾಲ್ತುಳಿತ

ಐಪಿಎಲ್‌ ಉದ್ಘಾಟನೆಗೆ ಕ್ಷಣಗಣನೆ : ಕಾತುರದಿಂದ ಕಾಯುತ್ತಿರುವ ಕ್ರಿಕೆಟ್‌ ಪ್ರೇಮಿಗಳು Read More »

ಮಣ್ಣು ತುಂಬಿದ ಬುಟ್ಟಿ ತಲೆ ಮೇಲೆ ಬಿದ್ದು ಕಾರ್ಮಿಕ ಸಾವು

ಬಾವಿ ಕೊರೆಯುವಾಗ ಸಂಭವಿಸಿದ ದುರಂತ ಉಳ್ಳಾಲ: ಹೊಸ ಬಾವಿ ಕೊರೆಯುವ ಕಾಮಗಾರಿ ನಡೆಸುತ್ತಿದ್ದ ವೇಳೆ ಕ್ರೇನ್‌ನಿಂದ ಮಣ್ಣು ತುಂಬಿದ್ದ ಕಬ್ಬಿಣದ ಬಕೆಟ್ ತಲೆಗೆ ಬಿದ್ದ ಪರಿಣಾಮ ಕೂಲಿ ಕಾರ್ಮಿಕ ದಾರುಣವಾಗಿ ಮೃತಪಟ್ಟ ಘಟನೆ ಶುಕ್ರವಾರ ಸಂಜೆ ಉಳ್ಳಾಲ ಸಮೀಪ ಕುತ್ತಾರು ಪದವಿನ ಸಲಾತ್ ನಗರದಲ್ಲಿ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕು ಮಲ್ಲಾಪುರ ನಿವಾಸಿ ಶಿವಕುಮಾರ ಜಿ.ಕೆ (30) ಮೃತರು ಎಂದು ಗುರುತಿಸಲಾಗಿದೆ.ಉಳ್ಳಾಲ ತಾಲೂಕಿನ ಕುತ್ತಾರು ಪದವಿನ ಸಲಾತ್ ನಗರದಲ್ಲಿ ಹೊಸ ಬಾವಿ ನಿರ್ಮಾಣ ಕಾಮಗಾರಿ ನಡೆಯುತ್ತಿತ್ತು.

ಮಣ್ಣು ತುಂಬಿದ ಬುಟ್ಟಿ ತಲೆ ಮೇಲೆ ಬಿದ್ದು ಕಾರ್ಮಿಕ ಸಾವು Read More »

ಕೋಳಿ ಅಂಕ ವಿಚಾರದಲ್ಲಿ ಮಾರಾಮಾರಿ : ನಾಲ್ವರ ಬಂಧನ

ಕಾರ್ಕಳ : ಕೋಳಿ ಅಂಕದ ವ್ಯವಹಾರದ ಹಣಕ್ಕೆ ಸಂಬಂಧಿಸಿದ ವಿವಾದವೊಂದು ಮಾರಾಮಾರಿಗೆ ತಿರುಗಿ ಪರಸ್ಪರ ಹಲ್ಲೆ ನಡೆಸಿದ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ಸಂಭವಿಸಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಜೆಕಾರು ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಬಂಧಿತರನ್ನು ಬೈರಂಪಳ್ಳಿ ಹರಿಕಂಡಿಗೆಯ ಪ್ರತಾಪ್ ಪೂಜಾರಿ (32), ಕಡ್ತಲ ಗ್ರಾಮದ ಸಿರಿಬೈಲು ನಿವಾಸಿ ದಿಲೀಪ್ ಶೆಟ್ಟಿ (28), ಮುತ್ತುಪಾಡಿಯ ಸುದರ್ಶನ್ ಶೆಟ್ಟಿ (36) ಮತ್ತು ವರಂಗ ಗ್ರಾಮದ ಮೂಡುಕುದೂರು ನಿವಾಸಿ ಆಕಾಶ್ (21) ಎಂದು ಗುರುತಿಸಲಾಗಿದೆ. ಮಾರ್ಚ್ 26ರಂದು ರಾತ್ರಿ

ಕೋಳಿ ಅಂಕ ವಿಚಾರದಲ್ಲಿ ಮಾರಾಮಾರಿ : ನಾಲ್ವರ ಬಂಧನ Read More »

ನೇಪಾಲದ ಮಾಜಿ ಪ್ರಧಾನಮಂತ್ರಿ, ಗೃಹ ಸಚಿವ ಬೆಳ್ಳಂಬೆಳಗ್ಗೆ ಅರೆಸ್ಟ್‌

ಹೊಸ ಸರ್ಕಾರ ಬಂದ ಮರುದಿನವೇ ಮಾಜಿಗಳ ವಿರುದ್ಧ ಕ್ರಮ ಕಠ್ಮಂಡು: ನೇಪಾಳದ ಪ್ರಧಾನಮಂತ್ರಿಯಾಗಿ ಬಾಲೇಂದ್ರ ಶಾ ನೂತನ ಪ್ರಧಾನಿಯಾಗಿ ಪ್ರಮಾಣ ಸ್ವೀಕರಿಸಿದ ಮರುದಿನವೇ ಕಳೆದ ವರ್ಷ ನೇಪಾಳದಾದ್ಯಂತ ನಡೆದಿದ್ದ ಜನರೇಷನ್ ಝಡ್‌ (ಝೆನ್ ಜಿ) ಪ್ರತಿಭಟನೆಯನ್ನು ಹತ್ತಿಕ್ಕಿದ ಆರೋಪದಲ್ಲಿ ಮಾಜಿ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಹಾಗೂ ಮಾಜಿ ಗೃಹ ಸಚಿವ ರಮೇಶ್ ಲೇಖಕ್ ಅವರನ್ನು ಬಂಧಿಸಲಾಗಿದೆ. ಕಳೆದ ವರ್ಷ ನಡೆದಿದ್ದ ಝೆನ್ ಜಿ ಪ್ರತಿಭಟನೆಗಳಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ಓಲಿ ಹಾಗೂ ಲೇಖಕ್‌ ಅವರನ್ನು

ನೇಪಾಲದ ಮಾಜಿ ಪ್ರಧಾನಮಂತ್ರಿ, ಗೃಹ ಸಚಿವ ಬೆಳ್ಳಂಬೆಳಗ್ಗೆ ಅರೆಸ್ಟ್‌ Read More »

ಪತಂಜಲಿ ಯೋಗ ಶಾಖೆಯಲ್ಲಿ ಶ್ರೀರಾಮನವಮಿ ಆಚರಣೆ

ಪುತ್ತೂರು: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ರಿ. ಕರ್ನಾಟಕ, ಕೇಂದ್ರ ಕಚೇರಿ ತುಮಕೂರು, ಮಂಗಳೂರು ವಿಭಾಗ ಪುತ್ತೂರು ತಾಲೂಕು ಕಳಿಯ ಶಾಖೆಯಲ್ಲಿ ಶ್ರೀರಾಮ ರಾಮನವಮಿ ಆಚರಣೆ ಮಾಡಲಾಯಿತು. ಗೇರುಕಟ್ಟೆ ಕ್ಷೀರ ಸಂಗಮ ಸಭಾಭವನದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಶ್ರೀರಾಮ ಭಜನೆ, ಸ್ತೋತ್ರ ಪಾರಾಯಣವನ್ನು ಯೋಗ ಬಂಧುಗಳು ನಡೆಸಿಕೊಟ್ಟರು. ಭಾರತಿ ಎಂ. ಎಲ್., ಅರುಣಾ, ಪದ್ಮಲತಾ ಪೂಜಾ ಕಾರ್ಯಕ್ರಮವನ್ನು ನೆರವೇರಿಸಿದರು. ಹಿರಿಯ ಯೋಗ ಬಂಧು ದಿವಾಕರ ಆಚಾರ್ಯ ಗೇರುಕಟ್ಟೆ, ಶ್ರೀ ರಾಮಚಂದ್ರನ ಆದರ್ಶಗುಣಗಳ ಬಗ್ಗೆ ಬೌದ್ಧಿಕ ನೀಡಿ ಮರ್ಯಾದ

ಪತಂಜಲಿ ಯೋಗ ಶಾಖೆಯಲ್ಲಿ ಶ್ರೀರಾಮನವಮಿ ಆಚರಣೆ Read More »

ಅಕ್ಷಯ ಪದವಿಪೂರ್ವ ಕಾಲೇಜಿನಲ್ಲಿ ಉಚಿತ CET ತರಬೇತಿ ಆರಂಭ

ಪುತ್ತೂರು: ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳನ್ನು ಮುಂದಿನ ಹಂತಕ್ಕೆ ತಲುಪಿಸುವ ನಿಟ್ಟಿನಲ್ಲಿ ಸಂಪ್ಯದಲ್ಲಿರುವ ಅಕ್ಷಯ ಪಿಯು ಕಾಲೇಜು ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ವೃತ್ತಿ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು, ಕಾಲೇಜು ವತಿಯಿಂದ ಉಚಿತ ಕ್ರ್ಯಾಶ್ ಕೋರ್ಸ್ಗಳನ್ನು ಆರಂಭಿಸಲಾಗಿದ್ದು, ಇದು ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಿದೆ. ವಿಜ್ಞಾನ ಹಾಗೂ ವಾಣಿಜ್ಯ ವಿಭಾಗಗಳಲ್ಲಿ ಉತ್ತಮ ಶಿಕ್ಷಣ ವ್ಯವಸ್ಥೆಯನ್ನು ಹೊಂದಿರುವ ಈ ಸಂಸ್ಥೆ, ಸ್ಪರ್ಧಾತ್ಮಕ ಪರೀಕ್ಷೆಗಳಾದ CET, NEET ಹಾಗೂ IIT-JEEಗೆ ವಿಶೇಷ ತರಬೇತಿ ನೀಡುತ್ತಿದೆ. ಶ್ರೀ ಚೈತನ್ಯ ಇನ್‌ಸ್ಟಿಟ್ಯೂಷನ್

ಅಕ್ಷಯ ಪದವಿಪೂರ್ವ ಕಾಲೇಜಿನಲ್ಲಿ ಉಚಿತ CET ತರಬೇತಿ ಆರಂಭ Read More »

ಮಾ: 28: ಮಂಗಳೂರು ವಿವಿ ಘಟಿಕೋತ್ಸವದಲ್ಲಿ ಮೂವರು ಸಾಧಕರಿಗೆ ಗೌರವ ಡಾಕ್ಟರೇಟ್ ಪ್ರದಾನ

ಮಂಗಳೂರು: ಮಾ. 28 ರಂದು ಮಂಗಳ ಗಂಗೋತ್ರಿ, ಮಂಗಳೂರು ವಿಶ್ವವಿದ್ಯಾಲಯದ 44 ನೇ ಘಟಿಕೋತ್ಸವವು ನಡೆಯಲಿದ್ದು ಈ ಸಂದರ್ಭದಲ್ಲಿ ಮೂವರು ಗಣ್ಯರಿಗೆ ಗೌರವ ಡಾಕ್ಟರೇಟ್ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಶಿಕ್ಷಣ ಕ್ಷೇತ್ರದ ಸಾಧಕ ಪದ್ಮಶ್ರೀ ಹರೇಕಳ ಹಾಜಬ್ಬ, ಮರಣೋತ್ತರವಾಗಿ ಇತ್ತೀಚೆಗೆ ಮೃತರಾದ ಯಕ್ಷಗಾನದ ಮೇರು ನಟ ಸೂರಿಕುಮೇರು ಗೋವಿಂದ ಭಟ್, ದೈವನರ್ತಕ ಡಾ. ರವೀಶ್ ಪಡುಮಲೆ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ನಡೆಯಲಿರುವುದಾಗಿ ಕುಲಪತಿ ಪ್ರೊ. ಕೆ. ಎಲ್. ಧರ್ಮ ತಿಳಿಸಿದ್ದಾರೆ. ಹರೇಕಳ ಹಾಜಬ್ಬ: ಇವರು ಕಿತ್ತಳೆ

ಮಾ: 28: ಮಂಗಳೂರು ವಿವಿ ಘಟಿಕೋತ್ಸವದಲ್ಲಿ ಮೂವರು ಸಾಧಕರಿಗೆ ಗೌರವ ಡಾಕ್ಟರೇಟ್ ಪ್ರದಾನ Read More »

ರೌಡಿ ಶೀಟರ್ ಆರಿಫ್ ಕೊಲೆ ಆರೋಪಿಗಳು ಬಳಸಿದ ಕಾರು ಪತ್ತೆ

ತೊಕ್ಕೊಟ್ಟು: ಇಲ್ಲಿನ ಫ್ಲೈ ಓವರ್ ಮೇಲೆ ಇಂದು ಬೆಳ್ಳಂಬೆಳಗ್ಗೆ ರೌಡಿ ಶೀಟರ್ ಆರಿಫ್ ಯಾನೆ ಟ್ಯಾಬ್ಲೆಟ್ ಆರಿಫ್‌ನ ಕೊಲೆಯ ಸಂದರ್ಭದಲ್ಲಿ ದುಷ್ಕರ್ಮಿಗಳು ಬಳಸಿದ್ದ ಕಾರನ್ನು ವಿಟ್ಲ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರಿಫ್‌ನನ್ನು ಬೈಕಿನಿಂದ ಕೆಡವಿ ಕೊಲೆಗೈದ ಬಳಿಕ ಆರೋಪಿಗಳು ಕಾರಿನಲ್ಲಿ ಪರಾರಿಯಾಗಿದ್ದರು. ಆ ಕಾರು ಬಂಟ್ವಾಳದ ಬುಡೋಳಿ ಎಂಬಲ್ಲಿ ಪತ್ತೆಯಾಗಿದೆ. ಆರಿಫ್ ಹತ್ಯೆಯ ಬಳಿಕ ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು. ಇದೇ ಸಂದರ್ಭದಲ್ಲಿ ಬುಡೋಳಿಯಲ್ಲಿ ಸಂಶಯಾಸ್ಪದ ರೀತಿಯಲ್ಲಿ ಕಾರೊಂದು ಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ದೊರೆತಿದೆ.

ರೌಡಿ ಶೀಟರ್ ಆರಿಫ್ ಕೊಲೆ ಆರೋಪಿಗಳು ಬಳಸಿದ ಕಾರು ಪತ್ತೆ Read More »

ರಘುಪತಿ ಭಟ್ ಪ್ರತಿಭಟನೆಗೆ ಮಣಿದು ಅನುಮತಿ ಪತ್ರ ನೀಡಿದ ಉಡಾ

ಉಡುಪಿ: ರೆಸಾರ್ಟ್ ನಿರ್ಮಾಣ ವಿಷಯದಲ್ಲಿ ಉಡಾ (ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ) ದ ವಿರುದ್ಧ ಮಾಜಿ ಶಾಸಕ ರಘುಪತಿ ಭಟ್ ಅವರು ನಡೆಸಿದ ಅನಿರ್ಧಿಷ್ಟಾವಧಿ ಧರಣಿಗೆ 12 ಗಂಟೆಗಳೊಳಗೆ ಫಲ ಸಿಕ್ಕಿದೆ. ಬಡಾನಿಡಿಯೂರು ಗ್ರಾಮದಲ್ಲಿ ರೆಸಾರ್ಟ್ ನಿರ್ಮಾಣಕ್ಕೆ ಸಿಂಗಲ್ ಲೇಔಟ್ ನಕ್ಷೆ ನೀಡದೆ ಉಡಾ ಸತಾಯಿಸುತ್ತಿತ್ತು. ಅದರ ವಿರುದ್ಧ ರಘುಪತಿ ಭಟ್ ಅವರು ಅನಿರ್ಧಿಷ್ಟಾವಧಿ ಪ್ರತಿಭಟನೆಗೆ ಕುಳಿತಿದ್ದರು. ಅವರ ಪ್ರತಿಭಟನೆಗೆ ಮಣಿದು ಉಡಾ ತಾತ್ಕಾಲಿಕ ಅನುಮತಿ ಪತ್ರವನ್ನು ನೀಡಿದೆ. ಹಾಗೆಯೇ ಎಲ್ಲಾ ಕಾನೂನು ಪ್ರಕ್ರಿಯೆಗಳ ಪರಿಶೀಲನೆಯ ಬಳಿಕ ಪ್ರಾಧಿಕಾರದ

ರಘುಪತಿ ಭಟ್ ಪ್ರತಿಭಟನೆಗೆ ಮಣಿದು ಅನುಮತಿ ಪತ್ರ ನೀಡಿದ ಉಡಾ Read More »

error: Content is protected !!
Scroll to Top