ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ, ಪುತ್ತೂರು ಘಟಕದ ಸಭೆ

ಪುತ್ತೂರು: ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ರಿ. ಮೆಲ್ಕಾರು ಬಂಟ್ವಾಳ ಇದರ ಪುತ್ತೂರು ಘಟಕದ ಸಭೆ ಸ್ವಾಗತ ಹೋಟೆಲ್ ಸಭಾಂಗಣದಲ್ಲಿ ಜರಗಿತು. ಸಭೆಯಲ್ಲಿ ಪುತ್ತೂರು ಆನಂದಾಶ್ರಮಕ್ಕೆ ಭೇಟಿ, ಜಿಲ್ಲಾ ಸಂಚಾಲಕರ ಭಾಸ್ಕರ್ ಬಾರ್ಯ ಅಗಸ್ತ್ಯ ಅವರ ಮನೆಯಲ್ಲಿ ಶ್ರೀ ಮಹಾಲಿಂಗೇಶ್ವರ ದೇವರ ಕಟ್ಟೆ ಪೂಜೆಯಲ್ಲಿ ಭಾಗವಹಿಸಿ ಸಾಂಸ್ಕೃತಿಕ ಕಾರ್ಯಕ್ರಮ ನೀಡುವುದು, ಬಾರ್ಯ ವಿಷ್ಣುಮೂರ್ತಿ ನೂರಿತ್ತಾಯ ಪ್ರತಿಷ್ಠಾನದ ವಾರ್ಷಿಕ ಪ್ರಶಸ್ತಿ ಸಮಾರಂಭ, ಎಪ್ರಿಲ್ 14ರಂದು ಬಾರ್ಯ ಶ್ರೀ ಮಹಾ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಜರಗಲಿರುವ ಶ್ರೀ ಮಹಾವಿಷ್ಣು ಯಾಗದಲ್ಲಿ […]

ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ, ಪುತ್ತೂರು ಘಟಕದ ಸಭೆ Read More »

ನಿಧಿಯಾಸೆಗೆ ಪುರಾತನ ದೇವಾಲಯ ಧ್ವಂಸ, ಶಿವಲಿಂಗ ಭಗ್ನ

ಕಲ್ಬುರ್ಗಿ: ಪುರಾತನ ದೇಗುಲವೊಂದು ದುಷ್ಕರ್ಮಿಗಳ ನಿಧಿಯಾಸೆಗೆ ಧ್ವಂಸವಾದ ಘಟನೆ ಅಫ್ಜಲಪುರದ ಬಡದಾಳ ಗ್ರಾಮದಲ್ಲಿ ನಡೆದಿದೆ. ಬಡದಾಳದ ಬಸವಣ್ಣ ದೇಗುಲದಲ್ಲಿ ನಿಧಿ ಇದೆ ಎಂದು ದುಷ್ಕರ್ಮಿಗಳು ರಾತ್ರಿ ವೇಳೆ ಶೋಧ ಕಾರ್ಯ ನಡೆಸಿದ್ದಾರೆ. ದೇಗುಲದ ಒಳಕ್ಕೆ ನುಗ್ಗಿ ಶಿವಲಿಂಗ ಸೇರಿದಂತೆ ದೇವರ ಇನ್ನಿತರ ಮೂರ್ತಿಗಳನ್ನು ಭಗ್ನಗೊಳಿಸಿದ್ದಾರೆ. ಘಟನೆಗೆ ಸಂಬಂಧಿಸಿದ ಹಾಗೆ ಆಕ್ರೋಶ ವ್ಯಕ್ತಪಡಿಸಿರುವ ಗ್ರಾಮಸ್ಥರು, ಇಂತಹ ಕೃತ್ಯ ಎಸಗಿದ ಆರೋಪಿಗಳನ್ನು ತಕ್ಷಣವೇ ಬಂಧಿಸುವಂತೆ ಆಗ್ರಹಿಸಿದ್ದಾರೆ.

ನಿಧಿಯಾಸೆಗೆ ಪುರಾತನ ದೇವಾಲಯ ಧ್ವಂಸ, ಶಿವಲಿಂಗ ಭಗ್ನ Read More »

ಗಂಡನ ಜೊತೆ ಅಕ್ರಮ ಸಂಬಂಧ ಹೊಂದಿದ್ದವಳ ಪುತ್ರನಿಂದ ಪತ್ನಿ ಮತ್ತು ಆಕೆಯ ಸಹೋದರನ ಕೊಲೆ

ಬೆಂಗಳೂರು: ತನ್ನ ತಾಯಿಯ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದವನ ಪತ್ನಿ ಮತ್ತು ಅವಳ ಸಹೋದರನಿಗೆ ಚಾಕು ಚುಚ್ಚಿ ಕೊಲೆ ಮಾಡಿರುವ ಘಟನೆ ಪೀಣ್ಯಾ‌ದ ನೆಲಗೆದರನಹಳ್ಳಿಯಲ್ಲಿ ನಡೆದಿದೆ. ಮೃತರನ್ನು ತಿಗಳರಪಾಳ್ಯದ ಯಮುನಾ (36) ಮತ್ತು ಆಕೆಯ ಸಹೋದರ ಸುದೀಪ್ (34) ಎಂದು ಗುರುತಿಸಲಾಗಿದೆ. ಈ ಕೃತ್ಯವನ್ನು ಅಪರಾಧಿಗಳಾದ ಛಾಯಾ ಮತ್ತು ಆಕೆಯ ಅಪ್ರಾಪ್ತ ಪುತ್ರ ಎಸಗಿದ್ದಾಗಿದೆ. ಎಚ್‌ಎಂ‌ಟಿ ‌ಲೇ ಔಟ್‌ನ ಛಾಯಾಳ ಮನೆಯಲ್ಲೇ ಈ ಹತ್ಯೆ ನಡೆದಿದ್ದು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಯಮುನಾ ಎಂಬವರ ಗಂಡ ಮಲ್ಲೇಗೌಡನಿಗೆ ಮತ್ತು

ಗಂಡನ ಜೊತೆ ಅಕ್ರಮ ಸಂಬಂಧ ಹೊಂದಿದ್ದವಳ ಪುತ್ರನಿಂದ ಪತ್ನಿ ಮತ್ತು ಆಕೆಯ ಸಹೋದರನ ಕೊಲೆ Read More »

ಹರ್ಮುಜ್ ಜಲಸಂಧಿ ಮಿತ್ರ ರಾಷ್ಟ್ರಗಳಿಗೆ ಮುಕ್ತ: ನಿಲುವು ಸ್ಪಷ್ಟಪಡಿಸಿದ ಇರಾನ್

ನವದೆಹಲಿ: ಮಧ್ಯಪ್ರಾಚ್ಯ ಬಿಕ್ಕಟ್ಟು ಸದ್ಯಕ್ಕೆ ಮುಗಿಯದ ಇಕ್ಕಟ್ಟು ಎಂಬಂತಾಗಿದೆ. ಇರಾನ್ ದೇಶವು ಹರ್ಮುಜ್ ಜಲಸಂಧಿಗೆ ‌ಸಂಬಂಧಿಸಿದ ಹಾಗೆ ತನ್ನ ನಿಲುವನ್ನು ಸ್ಪಷ್ಟವಾಗಿ ಹೇಳಿದೆ. ಈ ಬಗ್ಗೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟನಿಯಾ ಗುಟೆರಸ್ ಅವರ ಜೊತೆಗೆ ಇರಾನಿನ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಮಾತುಕತೆ ನಡೆಸಿದ್ದು, ದೇಶದ ಭದ್ರತೆಯ ಹಿನ್ನೆಲೆಯಲ್ಲಿ ಮಿತ್ರರಿಗೆ ಜಲಸಂಧಿ ತೆರೆಯುವ ಮತ್ತು ಶತ್ರುಗಳಿಗೆ ಜಲಸಂಧಿ ಮುಚ್ಚುವ ಸಂಪೂರ್ಣ ಹಕ್ಕು ಇರಾನಿಗೆ ಇದೆ ಎಂದು ಹೇಳಿದ್ದಾರೆ. ಅಮೆರಿಕಾ ಮತ್ತು ಇಸ್ರೇಲಿನ ಆಕ್ರಮಣಕಾರಿ ಧೋರಣೆಯಿಂದ ಗಲ್ಫ್

ಹರ್ಮುಜ್ ಜಲಸಂಧಿ ಮಿತ್ರ ರಾಷ್ಟ್ರಗಳಿಗೆ ಮುಕ್ತ: ನಿಲುವು ಸ್ಪಷ್ಟಪಡಿಸಿದ ಇರಾನ್ Read More »

ನಿಮ್ಮ ದೇಶದಲ್ಲೇ ಶಾಂತಿ ಇಲ್ಲ, ಜನರಿಗೆ ಊಟವಿಲ್ಲ : ಪಾಕಿಸ್ತಾನವನ್ನು ಅಪಮಾನಿಸಿದ ಅಮೆರಿಕ

ಯುದ್ಧ ನಿಲ್ಲಿಸಲು ಮಧ್ಯಸ್ಥಿಕೆ ವಹಿಸುವ ಪಾಕಿಸ್ತಾನದ ಕೊಡುಗೆಗೆ ಹಿಗ್ಗಾಮುಗ್ಗಾ ಲೇವಡಿ ವಾಷಿಂಗ್ಟನ್‌ : ಅಮೆರಿಕ ಮತ್ತು ಇರಾನ್‌ ನಡುವೆ ಮಧ್ಯಸ್ಥಿಕೆ ವಹಿಸಲು ಬಂದ ಪಾಕಿಸ್ತಾನ ಅದೇ ಅಮೆರಿಕದಿಂದ ಅಪಮಾನಕ್ಕೆ ಗುರಿಯಾಗಿದೆ. ಅಮೆರಿಕದ ರಕ್ಷಣಾ ತಜ್ಞ ಮತ್ತು ಭೌಗೋಳಿಕ ರಾಜಕೀಯ ಸಲಹೆಗಾರ ಡೌಗ್ಲಾಸ್‌ ಮ್ಯಾಕ್‌ಗ್ರೆಗರ್‌ ಪಾಕಿಸ್ತಾನದ ಸಂಧಾನದ ಕೊಡುಗೆಯನ್ನು ಹಾಸ್ಯಾಸ್ಪದ ಮತ್ತು ಅಸಂಬದ್ಧತೆ ಎಂದು ಲೇವಡಿ ಮಾಡಿದ್ದಾರೆ. ಮಧ್ಯಪ್ರಾಚ್ಯ ಸಂಘರ್ಷ ಇತ್ಯರ್ಥಕ್ಕೆ ಮಧ್ಯಸ್ಥಿಕೆ ವಹಿಸಲು ಸಜ್ಜಾದ ಇಸ್ಲಾಮಾಬಾದ್‌ ವಿಶ್ವಾಸಾರ್ಹತೆಯನ್ನೇ ಪ್ರಶ್ನಸಿರುವ ಡೌಗ್ಲಾಸ್ ಮ್ಯಾಕ್‌ಗ್ರೆಗರ್, ಪಾಕಿಸ್ತಾನದ ಆಂತರಿಕ ಅಸ್ಥಿರತೆ ಮತ್ತು

ನಿಮ್ಮ ದೇಶದಲ್ಲೇ ಶಾಂತಿ ಇಲ್ಲ, ಜನರಿಗೆ ಊಟವಿಲ್ಲ : ಪಾಕಿಸ್ತಾನವನ್ನು ಅಪಮಾನಿಸಿದ ಅಮೆರಿಕ Read More »

ಮಾ. 27 ರಿಂದ ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ಸ್ ನಲ್ಲಿ ಡೈಮಂಡ್ ಫೆಸ್ಟ್

50,000 ರೂ. ಗಿಂತ ಹೆಚ್ಚಿನ ಖರೀದಿಗೆ ಗ್ಯಾರಂಟಿ ಗಿಫ್ಟ್ ಪುತ್ತೂರು: ಪ್ರಸಿದ್ಧ ಆಭರಣ ಸಂಸ್ಥೆ ಮುಳಿಯ ಗೋಲ್ಡ್ & ಡೈಮಂಡ್ಸ್‌ ತನ್ನ ಗ್ರಾಹಕರಿಗೆ ‘ಡೈಮಂಡ್ ಫೆಸ್ಟ್’ ವಿಶೇಷ ಉತ್ಸವವನ್ನು ಮಾರ್ಚ್ 27ರಿಂದ ಆರಂಭಿಸುತ್ತಿದೆ. ‘ವೈಡೆಸ್ಟ್ ರೇಂಜ್, ಎಂಡ್‌ಲೆಸ್ ವಾವ್ಸ್!’ ಎಂಬ ಘೋಷಣೆಯೊಂದಿಗೆ ನಡೆಯುತ್ತಿರುವ ಈ ಉತ್ಸವವು ವಜ್ರಾವರಣ ಪ್ರಿಯರನ್ನು ಕೈಬೀಸಿ ಕರೆಯುತ್ತಿದೆ. ಫೆಸ್ಟ್‌ನ ಅಂಗವಾಗಿ ಗ್ರಾಹಕರು ₹50,000 ಹೆಚ್ಚಿನ ಖರೀದಿಗೆ ಖಚಿತ ಉಡುಗೊರೆ ಪಡೆಯಬಹುದಾಗಿದೆ. ಜೊತೆಗೆ ಲಕ್ಕಿ ಡ್ರಾ ಮೂಲಕ ಬಂಪರ್ ಬಹುಮಾನವಾಗಿ ಎಲೆಕ್ಟ್ರಿಕ್ ಸ್ಕೂಟರ್ ಗೆಲ್ಲುವ

ಮಾ. 27 ರಿಂದ ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ಸ್ ನಲ್ಲಿ ಡೈಮಂಡ್ ಫೆಸ್ಟ್ Read More »

ಪೆಟ್ರೋಲು, ಡೀಸಿಲ್‌ ಮೇಲಿನ ಅಬಕಾರಿ ಸುಂಕ ಕಡಿತ : ಕೇಂದ್ರದ ಮಹತ್ವದ ನಿರ್ಧಾರ

ಡೀಸಿಲ್‌ 10 ರೂ.; ಪೆಟ್ರೋಲು 3 ರೂ. ಕಡಿತ : ಯುದ್ಧ ಕಾಲದಲ್ಲಿ ಜನರಿಗೆ ಲಾಭವಾಗುವ ನಡೆ ನವದೆಹಲಿ: ಮಧ್ಯಪ್ರಾಚ್ಯದ ಯುದ್ಧದ ಪರಿಸ್ಥಿತಿಯಿಂದಾಗಿ ದೇಶದಲ್ಲಿ ಪೆಟ್ರೋಲು ಮತ್ತು ಡೀಸಿಲ್‌ ಬೆಲೆ ಹೆಚ್ಚಾಗಬಹುದು ಎಂಬ ಆತಂಕ ಇರುವಾಗಲೇ ಇದಕ್ಕೆ ವ್ಯತಿರಿಕ್ತವಾಗಿ ಕೆಂದ್ರ ಸರ್ಕಾರ ಈ ಎರಡು ಇಂಧನಗಳ ಬೆಲೆಯನ್ನು ಕಡಿಮೆಗೊಳಿಸಿ ಜನರನ್ನು ತುಸು ನಿರಾಳರನ್ನಾಗಿ ಮಾಡಿದೆ. ಪೆಟ್ರೋಲು ಮೇಲೆ ಅಬಕಾರಿ ಸುಂಕವನ್ನು 3 ರೂ. ಇಳಿಸಲಾಗಿದೆ. ಅದೇ ರೀತಿ ಡೀಸಿಲ್‌ ಮೇಲಿನ ಅಬಕಾರಿ ಸುಂಕ ಬರೋಬ್ಬರಿ 10 ರೂ.

ಪೆಟ್ರೋಲು, ಡೀಸಿಲ್‌ ಮೇಲಿನ ಅಬಕಾರಿ ಸುಂಕ ಕಡಿತ : ಕೇಂದ್ರದ ಮಹತ್ವದ ನಿರ್ಧಾರ Read More »

ಇಂದು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಮೋದಿ ಸಂವಾದ

ಮಧ್ಯಪ್ರಾಚ್ಯ ಯುದ್ಧದ ಹಿನ್ನೆಲೆಯಲ್ಲಿ ದೇಶದ ಒಟ್ಟಾರೆ ಸಿದ್ಧತೆ ಬಗ್ಗೆ ಚರ್ಚೆ ನವದೆಹಲಿ: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧ ನಾಲ್ಕನೇ ವಾರಕ್ಕೆ ಕಾಲಿಟ್ಟಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಲಿದ್ದಾರೆ. ದೇಶದ ಒಟ್ಟಾರೆ ಸಿದ್ಧತೆ ಮತ್ತು ಯೋಜನೆಗಳನ್ನು ಪರಿಶೀಲಿಸುವ ಮುಖ್ಯ ಉದ್ದೇಶವನ್ನು ಈ ಸಭೆ ಹೊಂದಿದೆ. ಆದರೆ ಏಪ್ರಿಲ್‌ನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಕೆಲ ರಾಜ್ಯಗಳ ಮುಖ್ಯಮಂತ್ರಿಗಳು ನೀತಿ ಸಂಹಿತೆ ಕಾರಣದಿಂದ ಈ ಸಭೆಯಲ್ಲಿ ಭಾಗವಹಿಸುವುದಿಲ್ಲ. ಹೀಗಾಗಿ ಬದಲಿಗೆ,

ಇಂದು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಮೋದಿ ಸಂವಾದ Read More »

ಕರಾವಳಿಯಲ್ಲಿ ಮತ್ತೆ ಹರಿದ ನೆತ್ತರು : ಬೆಳ್ಳಂಬೆಳಗ್ಗೆ ರೌಡಿಶೀಟರ್‌ ಹತ್ಯೆ

ತೊಕ್ಕೊಟ್ಟು ಫ್ಲೈ ಓವರ್‌ನಲ್ಲಿ ನಸುಕಿನ ಹೊತ್ತು ಬರ್ಬರ ಕೊಲೆ ಮಂಗಳೂರು: ಬೆಳ್ಳಂಬೆಳಗ್ಗೆ ಕರಾವಳಿಯಲ್ಲಿ ನೆತ್ತರು ಹರಿದಿದೆ. ಮಂಗಳೂರು ಹೊರವಲಯದ ತೊಕ್ಕೊಟ್ಟು ಫೈಓವರ್ ಮೇಲೆ ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್‌ನೋರ್ವನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಕಿನ್ಯ ಅಜ್ಜಿನಡ್ಕ ನಿವಾಸಿ ಆರಿಫ್ ಅಲಿಯಾಸ್‌ ಟಾಬ್ಲೆಟ್ ಆರಿಫ್ (40) ಕೊಲೆಯಾದ ರೌಡಶೀಟರ್. ಆತನ ವಿರುದ್ಧ 2008ರಲ್ಲಿ ಎರಡು ಪ್ರಕರಣಗಳು ದಾಖಲಾಗಿದ್ದವು. ನಂತರ ಯಾವುದೇ ಪ್ರಕರಣಗಳು ಇರಲಿಲ್ಲ ಎಂದು ತಿಳಿದುಬಂದಿದೆ. 2022ರಲ್ಲಿ ಆತನನ್ನು ಕೊಲೆ ಮಾಡುವ ಯತ್ನ ಉಚ್ಚಿಲದ ಬಳಿ ನಡೆದಿತ್ತು. ಈ ಸಂಬಂಧ

ಕರಾವಳಿಯಲ್ಲಿ ಮತ್ತೆ ಹರಿದ ನೆತ್ತರು : ಬೆಳ್ಳಂಬೆಳಗ್ಗೆ ರೌಡಿಶೀಟರ್‌ ಹತ್ಯೆ Read More »

ನಾಳೆಯಿಂದ ಶುರುವಾಗಲಿದೆ ಐಪಿಎಲ್‌ ಹಬ್ಬ : 2 ತಿಂಗಳು ಕ್ರಿಕೆಟ್‌ ಪ್ರೇಮಿಗಳಿಗೆ ಭರಪೂರ ಮನರಂಜನೆ

ಮಾ.28ರಂದು ಆರ್‌ಸಿಬಿ-ಸನ್‌ರೈಸರ್ಸ್‌ ಹೈದರಾಬಾದ್ ಮಧ್ಯೆ ಬೆಂಗಳೂರಿನಲ್ಲಿ ಉದ್ಘಾಟನಾ ಪಂದ್ಯ ಬೆಂಗಳೂರು : ಶನಿವಾರದಿಂದ ಸುಮಾರು ಎರಡು ತಿಂಗಳು ಕ್ರಿಕೆಟ್‌ ಪ್ರೇಮಿಗಳಿಗೆ ಐಪಿಎಲ್‌ ಪಂದ್ಯಗಳ ಹಬ್ಬ. ಈ ವರ್ಷದ ಐಪಿಎಲ್ ಪಂದ್ಯಗಳು ಮಾರ್ಚ್ 28ರಿಂದ ಪ್ರಾರಂಭವಾಗಲಿವೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್‌ರೈಸರ್ಸ್‌ ಹೈದರಾಬಾದ್ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮುಖಾಮುಖಿಯಾಗಲಿವೆ. ಪಂದ್ಯಗಳು ಸಂಜೆ 7.30ಕ್ಕೆ ಪ್ರಾರಂಭವಾಗುತ್ತವೆ. 19ನೇ ಆವೃತ್ತಿಯ ಐಪಿಎಲ್​ನ ವೇಳಾಪಟ್ಟಿಯನ್ನು ಬಿಸಿಸಿಐ ಎರಡು ಹಂತದಲ್ಲಿ ಪ್ರಕಟಿಸಿದೆ. ಐಪಿಎಲ್ ಪಂದ್ಯಗಳು ನಡೆಯುವ ರಾಜ್ಯಗಳಲ್ಲಿ

ನಾಳೆಯಿಂದ ಶುರುವಾಗಲಿದೆ ಐಪಿಎಲ್‌ ಹಬ್ಬ : 2 ತಿಂಗಳು ಕ್ರಿಕೆಟ್‌ ಪ್ರೇಮಿಗಳಿಗೆ ಭರಪೂರ ಮನರಂಜನೆ Read More »

error: Content is protected !!
Scroll to Top