ನಾಳೆ (ಜೂ.8) : ಸವಣೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ರಂಗ ಪೂಜೆ

ಸವಣೂರು: ಸವಣೂರು ಸವಣೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಜೂ.8 ರಂದು ರಂಗ ಪೂಜೆ ನಡೆಯಲಿದೆ. ಸವಣೂರು ಗ್ರಾಮದ ಕಣಿಮಜಲು ಶ್ರೀ ಬೂಡು ಸಾನಿಧ್ಯ ಜೀರ್ಣೋದ್ಧಾರ ಹಿನ್ನೆಲೆಯಲ್ಲಿ ನಡೆದ ಅಷ್ಟಮಂಗಲ ಪ್ರಶ್ನಾ ಚಿಂತನೆಯಲ್ಲಿ ಕಂಡುಬಂದಂತೆ ಪರಿಹಾರರ್ಥ ಹಾಗೂ ಕ್ಷೇತ್ರ ಸಾನಿಧ್ಯ ಜೀರ್ಣೋದ್ಧಾರಕ್ಕಾಗಿ ಈ ವೈದಿಕ ಕಾರ್ಯಕ್ರಮಗಳು ನಡೆಯಲಿವೆ. ಗುರುವಾರ  ಬೆಳಿಗ್ಗೆ 10ಕ್ಕೆ ಪವಮಾನ ಅಭಿಷೇಕ ,ಸಂಜೆ 7 ಕ್ಕೆ ಶ್ರೀ ವಿಷ್ಣುಮೂರ್ತಿ ದೇವರಿಗೆ ರಂಗ ಪೂಜೆ ನಡೆಯಲಿದೆ ಎಂದು ದೇವಸ್ಥಾನ ಪ್ರಕಟಣೆಯಲ್ಲಿ ತಿಳಿಸಿದರು.

ನಾಳೆ (ಜೂ.8) : ಸವಣೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ರಂಗ ಪೂಜೆ Read More »

ವಿವೇಕಾನಂದ ಕಾಲೇಜಿನಲ್ಲಿ ಆರೋಹಣ – 2023

ಪುತ್ತೂರು: ಸಾಧನೆಗೆ ಅತೀ ಮುಖ್ಯವಾದದ್ದು ಸ್ಪಷ್ಟ ಗುರಿ.  ಜೀವನದಲ್ಲಿ ಏನನ್ನಾದರೂ ಸಾಧಿಸಬೇಕಾದರೆ ಮೊದಲು ನಾವು ನಮ್ಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು ಅದರ ಮೇಲೆ ನಮ್ಮ ಜೀವನದ ಗೆಲುವು ಅವಲಂಬಿತವಾಗಿರುತ್ತದೆ. ನಮ್ಮ ಜೀವನದಲ್ಲಿ ಧನಾತ್ಮಕವಾಗಿ ಚಿಂತಿಸುವುದನ್ನು ರೂಢಿಸಿಕೊಳ್ಳುವುದು ಅತ್ಯವಶ್ಯಕ. ಹಾಗಾಗಿ ವಿದ್ಯಾರ್ಥಿ ದೆಸೆಯಲ್ಲಿಯೇ ನಾವು ವೃತ್ತಿಯ ಬಗೆಗೆ ಯೋಚಿಸಬೇಕು ಎಂದು ಎನ್.ಎ.ಎಂ. ಎಫ್.ಐ  ನೊಂದಾಯಿತ ಮ್ಯೂಚುವಲ್ ಫಂಡ್ ವಿತರಕ ವಿನೋದ್ ಕುಮಾರ್ ಹೇಳಿದರು. ವಿವೇಕಾನಂದ ಕಾಲೇಜಿನ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ )ದ ವಾಣಿಜ್ಯ ವಿಭಾಗ ಹಾಗೂ

ವಿವೇಕಾನಂದ ಕಾಲೇಜಿನಲ್ಲಿ ಆರೋಹಣ – 2023 Read More »

ನಿವೃತ್ತ ಎ.ಎಸ್.ಐ., ಆರ್ಯಾಪು ಗ್ರಾ.ಪಂ. ಸದಸ್ಯ ರುಕ್ಮಯ್ಯ ಮೂಲ್ಯ ನಿಧನ

ಪುತ್ತೂರು: ಆರ್ಯಾಪು ಗ್ರಾಮ ಪಂಚಾಯತ್ ಸದಸ್ಯ, ನಿವೃತ್ತ ಎ.ಎಸ್.ಐ., ವಳತ್ತಡ್ಕ ನಿವಾಸಿ ರುಕ್ಮಯ್ಯ ಮೂಲ್ಯ (62 ವ.)ರವರು ಮಂಗಳವಾರ ಮಧ್ಯಾಹ್ನ‌ ಹೃದಯಾಘಾತದಿಂದ ನಿಧನರಾದರು. ಅವರಿಗೆ ಮಧ್ಯಾಹ್ನ‌ ಮನೆಯಲ್ಲಿ ಲಘು ಹೃದಯ ನೋವು ಕಾಣಿಸಿಕೊಂಡಿದ್ದು, ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಷ್ಟರಲ್ಲಾಗಲೇ ಮೃತಪಟ್ಟಿದ್ದರು. ಮೃತರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ನಿವೃತ್ತ ಎ.ಎಸ್.ಐ., ಆರ್ಯಾಪು ಗ್ರಾ.ಪಂ. ಸದಸ್ಯ ರುಕ್ಮಯ್ಯ ಮೂಲ್ಯ ನಿಧನ Read More »

SSLC ಮರುಮೌಲ್ಯಮಾಪನದಲ್ಲಿ 7 ಹೆಚ್ಚುವರಿ ಅಂಕ | 615 ಅಂಕ ಪಡೆದುಕೊಂಡ ಶ್ರಾವ್ಯ ಕೆ.ಎಚ್. ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಗೆ ದ್ವಿತೀಯ

ಪುತ್ತೂರು: SSLC  ಪರೀಕ್ಷೆಯ ಮರು ಮೌಲ್ಯಮಾಪನದಲ್ಲಿ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಆಂಗ್ಲ ಮಾಧ್ಯಮ ವಿಭಾಗದ ಶ್ರಾವ್ಯ ಕೆ.ಎಚ್. 615 ಅಂಕ ಪಡೆದುಕೊಂಡಿದ್ದಾರೆ. ಈ ಹಿಂದೆ 608 ಅಂಕ ಪಡೆದಿದ್ದ ಶ್ರಾವ್ಯ ಕೆ.ಎಚ್. ಅವರು ಮರುಮೌಲ್ಯಮಾಪನದಲ್ಲಿ 7 ಹೆಚ್ಚುವರಿ ಅಂಕ ಪಡೆದುಕೊಂಡಿದ್ದಾರೆ. ಇದೀಗ ಒಟ್ಟು 615 ಅಂಕ ಪಡೆದುಕೊಳ್ಳುವ ಮೂಲಕ, ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಗೆ ದ್ವಿತೀಯ ಸ್ಥಾನಿಯಾಗಿ ಹೊರಹೊಮ್ಮಿದ್ದಾರೆ ಎಂದು ಸಂಸ್ಥೆಯ ಸಂಚಾಲಕ ಜಯಸೂರ್ಯ ರೈ ಮಾದೋಡಿ ತಿಳಿಸಿದ್ದಾರೆ. ಇವರು ಸುಳ್ಯ ತಾಲೂಕಿನ ಮುರುಳ್ಯ ಗ್ರಾಮದ ಹುದೇರಿ ಕುಶಾಲಪ್ಪ

SSLC ಮರುಮೌಲ್ಯಮಾಪನದಲ್ಲಿ 7 ಹೆಚ್ಚುವರಿ ಅಂಕ | 615 ಅಂಕ ಪಡೆದುಕೊಂಡ ಶ್ರಾವ್ಯ ಕೆ.ಎಚ್. ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಗೆ ದ್ವಿತೀಯ Read More »

SSLC ಮರು ಮೌಲ್ಯಮಾಪನದಲ್ಲಿ 624 ಅಂಕ | ಕಾಣಿಯೂರು ಪ್ರಗತಿಯ ಉತ್ತಮ್ ರಾಜ್ಯಕ್ಕೆ ದ್ವಿತೀಯ

ಪುತ್ತೂರು: SSLC ಪರೀಕ್ಷೆಯ ಮರು ಮೌಲ್ಯಮಾಪನದಲ್ಲಿ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಆಂಗ್ಲ ಮಾಧ್ಯಮ ವಿಭಾಗದ ಉತ್ತಮ್ ಜಿ. 624 ಅಂಕ ಪಡೆದುಕೊಂಡಿದ್ದು, ರಾಜ್ಯಕ್ಕೆ ದ್ವಿತೀಯ ಸ್ಥಾನಿಯಾಗಿ ಹೊರಹೊಮ್ಮಿದ್ದಾರೆ. ಉತ್ತಮ್ ಅವರಿಗೆ ಸಮಾಜ ವಿಜ್ಞಾನದಲ್ಲಿ ಈ ಹಿಂದೆ 98 ಅಂಕ ಗಳಿಸಿದ್ದರು. ಇದೀಗ ಮರುಮೌಲ್ಯಮಾಪನದಲ್ಲಿ 99 ಅಂಕ ಗಳಿಸುವ ಮೂಲಕ 624 ಅಂಕ ಪಡೆದುಕೊಂಡಿದ್ದಾರೆ ಎಂದು ಸಂಸ್ಥೆಯ ಸಂಚಾಲಕ ಜಯಸೂರ್ಯ ರೈ ಮಾದೋಡಿ ತಿಳಿಸಿದ್ದಾರೆ. ಇವರು ಕಾಣಿಯೂರು ಗ್ರಾಮದ ಗುಂಡಿಗದ್ದೆ ಪದ್ಮನಾಭ ಜಿ. ಹಾಗೂ ಹೇಮಾವತಿ ದಂಪತಿ ಪುತ್ರ.

SSLC ಮರು ಮೌಲ್ಯಮಾಪನದಲ್ಲಿ 624 ಅಂಕ | ಕಾಣಿಯೂರು ಪ್ರಗತಿಯ ಉತ್ತಮ್ ರಾಜ್ಯಕ್ಕೆ ದ್ವಿತೀಯ Read More »

ಸುಲಲಿತವಾಗಿ ಇಂಗ್ಲೀಷ್ ಮಾತನಾಡಬೇಕೇ? ಪ್ರೇರಣಾದಲ್ಲಿ ಶೀಘ್ರ ಸ್ಪೋಕನ್ ಇಂಗ್ಲೀಷ್ ಹೊಸ ಬ್ಯಾಚ್ ಆರಂಭ

ಪುತ್ತೂರು: ಸುಲಭವಾಗಿ ಇಂಗ್ಲೀಷ್ ಭಾಷೆಯನ್ನು ಮಾತನಾಡಬಲ್ಲವರಾಗಿದ್ದರೆ ಮಾತ್ರ ಪೈಪೋಟಿಯ ಪ್ರಪಂಚದಲ್ಲಿ ಮೇಲುಗೈ ಸಾಧಿಸಲು ಸಾಧ್ಯ. ಇದಕ್ಕಾಗಿ ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳಿಗೆ ಪ್ರೇರಣಾದಲ್ಲಿ ಸ್ಪೋಕನ್ ಇಂಗ್ಲೀಷ್ ತರಗತಿಯ ಹೊಸ ಬ್ಯಾಚ್ ಅನ್ನು ಆರಂಭಿಸಲಾಗುತ್ತಿದೆ. ಸುಲಲಿತವಾಗಿ ಇಂಗ್ಲೀಷ್ ಬಲ್ಲವರಾಗಿದ್ದರೆ, ಪ್ರಪಂಚದ ಯಾವುದೇ ಮೂಲೆಗಾದರೂ ಹೋಗಿ ವ್ಯವಹರಿಸಬಹುದು. ಆದರೆ ಗ್ರಾಮೀಣ ಭಾಗದವರಿಗೆ ಇಂಗ್ಲೀಷ್ ಎಂದರೆ ತುಸು ಕಷ್ಟವೇ. ಇಂತಹ ಮನಸ್ಥಿತಿಯನ್ನು ದೂರಮಾಡಿ, ಇಂಗ್ಲೀಷ್ ಭಾಷೆಯನ್ನು ಸುಲಭವಾಗಿ ಹೇಗೆ ಮಾತನಾಡಬಹುದು ಎನ್ನುವುದನ್ನು ಪ್ರೇರಣಾದಲ್ಲಿ ನುರಿತ ಶಿಕ್ಷಕರು ಹೇಳಿಕೊಡಲಿದ್ದಾರೆ. ಆಧುನಿಕ ಜಗತ್ತಿನ ಸ್ಪರ್ಧೆಗೆ ಸರಿಯಾಗಿ

ಸುಲಲಿತವಾಗಿ ಇಂಗ್ಲೀಷ್ ಮಾತನಾಡಬೇಕೇ? ಪ್ರೇರಣಾದಲ್ಲಿ ಶೀಘ್ರ ಸ್ಪೋಕನ್ ಇಂಗ್ಲೀಷ್ ಹೊಸ ಬ್ಯಾಚ್ ಆರಂಭ Read More »

ನೂಜಿಬಾಳ್ತಿಲ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಗೆ ಸೇತುವೆ ಅಳವಡಿಕೆ

ಕಡಬ: ಕಡಬ ತಾಲೂಕಿನ ನೂಜಿಬಾಳ್ತಿಲ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲಾ ಸಂಪರ್ಕದ ಚರಂಡಿಗೆ ಕಬ್ಬಿಣದ ಸೇತುವೆ ಅಳವಡಿಸಲಾಯಿತು. ಈ ಕೆಲಸವನ್ನು  ಶ್ರಮದಾನದ ಮೂಲಕ ಮೂಲಕ ನಡೆಸಲಾಯಿತು. ಈ ಸಂದರ್ಭದಲ್ಲಿ ಮೋಹನ ಹಳೆನೂಜಿ, ತಿಮ್ಮಪ್ಪ ಪಾಲೆತ್ತಡಿ, ಡೀಕಯ್ಯ ಪಾಲೆತ್ತಡಿ, ಮಹೇಶ್ ಪಾಲೆತ್ತಡಿ, ಹರೀಶ್ ನೀರಾರಿ, ಸುಂದರ ಪಡಲಡ್ಕ, ಉಮೇಶ್ ಶೆಟ್ಟಿ ಸಾಯಿರಾಮ್, ಮತ್ತಿತರರು ಭಾಗವಹಿಸಿದ್ದರು.

ನೂಜಿಬಾಳ್ತಿಲ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಗೆ ಸೇತುವೆ ಅಳವಡಿಕೆ Read More »

ಸಿ.ಎ.ಬ್ಯಾಂಕ್ ಗೋದಾಮು ಕಟ್ಟಡ ಉದ್ಘಾಟನೆ|ಸಹಕಾರಿ ಸಂಘಗಳು ಗ್ರಾಮೀಣ ರೈತರ ಬದುಕಿನ ಜೀವನಾಡಿ: ಭಾಗೀರಥಿ ಮುರುಳ್ಯ

ಕಡಬ: ರೈತರ ದೈನಂದಿನ ಅಗತ್ಯಗಳಿಗೆ ಪೂರಕವಾಗಿ ಸ್ಪಂದಿಸುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ಗ್ರಾಮೀಣ ರೈತರ ಬದುಕಿನ ಜೀವನಾಡಿಯಾಗಿದೆ ಎಂದು ಸುಳ್ಯ ವಿಧಾನಸಭಾ  ಕ್ಷೇತ್ರದ ಶಾಸಕಿ  ಭಾಗೀರಥಿ ಮುರುಳ್ಯ ಹೇಳಿದರು. ಅವರು ಶನಿವಾರ  ಕಡಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮರ್ದಾಳ ಶಾಖಾ ಕಚೇರಿಯ ಆವರಣದಲ್ಲಿ  ನಬಾರ್ಡ್ ನೆರವಿನೊಂದಿಗೆ 60 ಲಕ್ಷ ರೂ. ವೆಚ್ಚದಲ್ಲಿ  ನೂತನವಾಗಿ ನಿರ್ಮಾಣಗೊಂಡಿರುವ ಗೋದಾಮು ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.  ರೈತರಿಗೆ ಸಹಕಾರಿ ಸಂಘಗಳ ಸವಲತ್ತುಗಳು  ಸರಕಾರದ ಯೋಜನೆಗಳಿಗಿಂತಲೂ ಹೆಚ್ಚು  ಪ್ರಯೋಜನಕಾರಿಯಾಗಿವೆ.

ಸಿ.ಎ.ಬ್ಯಾಂಕ್ ಗೋದಾಮು ಕಟ್ಟಡ ಉದ್ಘಾಟನೆ|ಸಹಕಾರಿ ಸಂಘಗಳು ಗ್ರಾಮೀಣ ರೈತರ ಬದುಕಿನ ಜೀವನಾಡಿ: ಭಾಗೀರಥಿ ಮುರುಳ್ಯ Read More »

ನರೇಂದ್ರ ಪ.ಪೂ.ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಪೋಷಕರ ಮಹಾಸಭೆ

ಪುತ್ತೂರು: ಮಕ್ಕಳ ಸರ್ವತೋಮುಖ ವಿಕಾಸದಲ್ಲಿ ಶಿಕ್ಷಕರ ಜೊತೆಗೆ ಪಾಲಕರ ಪಾತ್ರ ಮಹತ್ವದ್ದಾಗಿದೆ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಅವರ ಶೈಕ್ಷಣಿಕ ಸಾಧನೆಗಳ ವಿಶ್ಲೇಷಣೆಗೆ ಪೂರಕವಾದ, ವಿದ್ಯಾರ್ಥಿಗಳ ವರ್ತನೆ, ನೈತಿಕತೆ, ಕಲಿಕಾ ಪ್ರಗತಿಗೆ ಪೂರಕವಾದ ವಿಚಾರಗಳ ಬಗ್ಗೆ ಚರ್ಚಿಸಿ ಕ್ರಮ ತೆಗೆದುಕೊಳ್ಳಬೇಕು.ಇದು ದೇಶದ ಸುಂದರ ಭವಿಷ್ಯ ನಿರ್ಮಾಣದ ಹೆಜ್ಜೆಗಳಾಗಲಿ ಎಂದು ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಜೊತೆ ಕಾರ್‍ಯದರ್ಶಿ ರೂಪಲೇಖ ಹೇಳಿದರು. ನರೇಂದ್ರ ಪ.ಪೂ.ಕಾಲೇಜಿನಲ್ಲಿ ನಡೆದ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಪೋಷಕರ ಮಹಾಸಭೆಯಲ್ಲಿ ಅವರು ಮಾತನಾಡಿದರು. ಕಾಲೇಜಿನ ಆಡಳಿತ ಮಂಡಳಿ

ನರೇಂದ್ರ ಪ.ಪೂ.ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಪೋಷಕರ ಮಹಾಸಭೆ Read More »

ಒಡಿಯೂರು ಶ್ರೀ ಗುರುದೇವ ಸೇವಾ ಬಳಗದ ವಾರ್ಷಿಕೋತ್ಸವ | ಶ್ರೀ ಸತ್ಯದತ್ತ ವೃತ ಪೂಜೆ

ಪುತ್ತೂರು : ಮನುಷ್ಯನಿಗೆ ಬದುಕಿನ ತಳಪಾಯ ಧರ್ಮ. ಅನುಷ್ಠಾನದಿಂದ ಮಾತ್ರ ಧರ್ಮದ ಸಂರಕ್ಷಣೆ ಸಾಧ್ಯ. ಧರ್ಮ ರಕ್ಷಣೆಯಾಗದಿದ್ದಲ್ಲಿ ಸಮಾಜದಲ್ಲಿ ದ್ವೇಷ ಹುಟ್ಟಿಕೊಳ್ಳುತ್ತದೆ. ಇದಕ್ಕೆ ಧರ್ಮ ಪ್ರಜ್ಞೆಯ ಕೊರತೆ ಕಾರಣ. ಈ ನಿಟ್ಟಿನಲ್ಲಿ ಸಮಾಜದಲ್ಲಿ ಗುಣಾತ್ಮಕ ವಿಷಯ ನಂಬಬೇಕಾದ ಅಗತ್ಯವಿದೆ ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ನುಡಿದರು. ಅವರು ಮಂಗಳವಾರ ಒಡಿಯೂರು ಶ್ರೀ ಗುರುದೇವ ಸೇವಾ ಬಳಗ, ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ, ಶ್ರೀ ವಜ್ರಮಾತಾ ಮಹಿಳಾ ಮಂಡಳಿ, ಒಡಿಯೂರು ಶ್ರೀ ವಿವಿಧೋದ್ಧೇಶ ಸಹಕಾರ ಸಂಘದ ಆಶ್ರಯದಲ್ಲಿ

ಒಡಿಯೂರು ಶ್ರೀ ಗುರುದೇವ ಸೇವಾ ಬಳಗದ ವಾರ್ಷಿಕೋತ್ಸವ | ಶ್ರೀ ಸತ್ಯದತ್ತ ವೃತ ಪೂಜೆ Read More »

error: Content is protected !!
Scroll to Top