ಪುತ್ತೂರು

ಶ್ರೀರಾಮ ಪ್ರೌಢಶಾಲೆಯಲ್ಲಿ ಮಹಾಭಾರತ ರಸಪ್ರಶ್ನೆ ಸ್ಪರ್ಧೆ

ಉಪ್ಪಿನಂಗಡಿ: ಶ್ರೀ ಕಾಳಿಕಾಂಬಾ ಯಕ್ಷಕಲಾ ಟ್ರಸ್ಟ್(ರಿ) ಉಪ್ಪಿನಂಗಡಿ ಇದರ ಸುವರ್ಣ ಮಹೋತ್ಸವದ ಅಂಗವಾಗಿ ಉಪ್ಪಿನಂಗಡಿ ವೇದಶಂಕರ ನಗರದ ಶ್ರೀ ರಾಮ ಶಾಲೆಯಲ್ಲಿ ಶ್ರೀ ಮಹಾಭಾರತ ರಸ ಪ್ರಶ್ನೆ ಸ್ಪರ್ಧೆ ನಡೆಸಲಾಯಿತು. 6 ,7 ,8 ಮತ್ತು 9ನೇ ತರಗತಿಯ 75 ವಿದ್ಯಾರ್ಥಿಗಳು ಶ್ರೀ ಮಹಾಭಾರತ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಟ್ರಸ್ಟಿನ ಸದಸ್ಯ ಕೆ.ಮಹಾಲಿಂಗೇಶ್ವರ ಭಟ್ ಪೆರಿಯಡ್ಕ ಮಾತನಾಡಿ, ಮಹಾಭಾರತವು ಧರ್ಮಕ್ಕೆ ಜಯವೆಂಬ ಸಂದೇಶವನ್ನು ನೀಡುತ್ತದೆ. ಬಾಲ್ಯದಲ್ಲಿ ಓದುವ ಹವ್ಯಾಸ , ಕಲಾಸಕ್ತಿಯು ಜೀವನದಲ್ಲಿ ಸತ್ಪರಿಣಾಮವನ್ನು ಬೀರುತ್ತದೆ ಎಂದು […]

ಶ್ರೀರಾಮ ಪ್ರೌಢಶಾಲೆಯಲ್ಲಿ ಮಹಾಭಾರತ ರಸಪ್ರಶ್ನೆ ಸ್ಪರ್ಧೆ Read More »

ಅಕ್ಷಯ ಪದವಿ ಕಾಲೇಜಿನಲ್ಲಿ ರಾಷ್ಟ್ರ ಮಟ್ಟದ ಅಂತರ್ ಕಾಲೇಜು ಸಾಂಸ್ಕೃತಿಕ ಸ್ಪರ್ಧೆ ಕೃತ್ವ ಫೆಸ್ಟ್ 2K26

ಪುತ್ತೂರು: ಅಕ್ಷಯ ಪದವಿ ಕಾಲೇಜಿನಲ್ಲಿ ರಾಷ್ಟ್ರ ಮಟ್ಟದ ಪದವಿ ಕಾಲೇಜುಗಳ ಸಾಂಸ್ಕೃತಿಕ ಸ್ಪರ್ಧೆ ಕೃತ್ವ ಫೆಸ್ಟ್ 2K26 ಸಂಪನ್ನಗೊಂಡಿತು. ಅಕ್ಷಯ ಶಿಕ್ಷಣ ಸಂಸ್ಥೆಗಳ ಆಡಳಿತ ನಿರ್ದೇಶಕಿ ಕಲಾವತಿ ಜಯಂತ್ ಕಾರ್ಯಕ್ರಮವನ್ನು ಉದ್ಘಾಟಿಸಿ, ಪ್ರತಿಭೆಗಳ ಅನಾವರಣಕ್ಕಾಗಿ ಕಾಲೇಜು ವಿದ್ಯಾರ್ಥಿಗಳೇ ಆಯೋಜಿಸಿದ ಸ್ಪರ್ಧೆಯ ಸದುಪಯೋಗ ಪಡೆದುಕೊಂಡು ಯಶಸ್ಸನ್ನು ಕಾಣುವಂತಾಗಲಿ ಎಂದು ಶುಭಹಾರೈಸಿದರು. ಕೃತ್ವ 2K26 ಇದರ ಸಂಯೋಜಕ ಗಂಧರ್ವ ಅವರು ಪ್ರಸ್ತಾವನೆಗೈದು ಕಾರ್ಯಕ್ರಮ ಕುರಿತಾಗಿ ಮಾಹಿತಿ ನೀಡಿ, ವಿದ್ಯಾರ್ಥಿಗಳಿಗೆ ಧನ್ಯವಾದಗಳನ್ನು ಸಮರ್ಪಿಸುತ್ತಾ ಶುಭ ಹಾರೈಸಿದರು. ಅಧ್ಯಕ್ಷತೆ ವಹಿಸಿದ್ದ ಜಯಂತ್ ನಡುಬೈಲು

ಅಕ್ಷಯ ಪದವಿ ಕಾಲೇಜಿನಲ್ಲಿ ರಾಷ್ಟ್ರ ಮಟ್ಟದ ಅಂತರ್ ಕಾಲೇಜು ಸಾಂಸ್ಕೃತಿಕ ಸ್ಪರ್ಧೆ ಕೃತ್ವ ಫೆಸ್ಟ್ 2K26 Read More »

ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್‌‍ನಲ್ಲಿ ಜಿ.ಎಲ್. ಶಾಪಿಂಗ್ ಹಬ್ಬ ವರುಷದ ಹರುಷ

ಪುತ್ತೂರು: ಮುಖ್ಯರಸ್ತೆಯಲ್ಲಿರುವ ಪ್ರತಿಷ್ಟಿತ ಚಿನ್ನಾಭರಣಗಳ ಮಳಿಗೆ ಜಿ.ಎಲ್. ಆಚಾರ್ಯ ಜ್ಯುವೆಲ್ಲ‌ರ್ಸ್ ಸಂಸ್ಥೆಯು ಪುತ್ತೂರು, ಹಾಸನ, ಸುಳ್ಯ ಮತ್ತು ಕುಶಾಲನಗರದಲ್ಲಿರುವ ತಮ್ಮ ಶಾಖೆಗಳಲ್ಲಿ ಮಾತ್ರ ವಾರ್ಷಿಕೋತ್ಸವದ ಸಂಭ್ರಮದ ಪ್ರಯುಕ್ತ ನೆಚ್ಚಿನ ಗ್ರಾಹಕರಿಗೆ ಜಿ.ಎಲ್. ಶಾಪಿಂಗ್ ಹಬ್ಬ “ವರುಷದ ಹರುಷ” ಎಂಬ ವಿಶಿಷ್ಟ ಶಾಪಿಂಗ್ ಹಬ್ಬವನ್ನು ತಾ.11.04.2026ರಿಂದ 20.04.2026ರವರೆಗೆ ಆಯೋಜಿಸಲಾಗಿದೆ. ಗ್ರಾಹಕರಿಗೆ ಚಿನ್ನಾಭರಣಗಳ VA ಶುಲ್ಕದ ಮೇಲೆ ಪ್ರತಿ ಗ್ರಾಂಗೆ ರೂ. 500/-ರವರೆಗೆ ರಿಯಾಯಿತಿ ನೀಡಲಾಗುವುದು ಅದೇ ರೀತಿ ವಜ್ರಾಭರಣಗಳ ಮೇಲೆ ಪ್ರತೀ ಕ್ಯಾರೇಟ್‌ ಗೆ ರೂ.7000/-ರವರೆಗೆ ರಿಯಾಯಿತಿ ಹಾಗೂ

ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್‌‍ನಲ್ಲಿ ಜಿ.ಎಲ್. ಶಾಪಿಂಗ್ ಹಬ್ಬ ವರುಷದ ಹರುಷ Read More »

ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್’ನಲ್ಲಿ ಸನ್ಮಾನ ಮತ್ತು ಬೇಸಿಗೆ ಶಿಬಿರಕ್ಕೆ ಚಾಲನೆ

ಅಲುಂಬುಂಡ: ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್’ನಲ್ಲಿ ನಡೆಯಲಿರುವ ಸಾಪ್ತಾಹಿಕ ಬೇಸಿಗೆ ಶಿಬಿರವನ್ನು ಖ್ಯಾತ ಚಿತ್ರಕಲಾ ಶಿಕ್ಷಕ, ಸಾಹಿತಿ ಮತ್ತು ಕವಿಯೂ ಆಗಿರುವ ಭಾಸ್ಕರ್ ನೆಲ್ಯಾಡಿಯವರು ದೀಪ ಪ್ರಜ್ವಲಿಸಿ, ಭಾರತ ಮಾತೆಗೆ ಪುಷ್ಪಾರ್ಚನೆಗೈದು ಉದ್ಘಾಟಿಸಿದರು. ಬೇಸಿಗೆ ಶಿಬಿರವು ಬೀಜವನ್ನು ಮೊಳಕೆಯೊಡೆಯಲು ಸಹಕರಿಸುವ ಸಸಿ ಮಾಡಿಯಂತೆ ಕಾರ್ಯನಿರ್ವಹಿಸುತ್ತದೆ ಎಂದು ಅವರು ಪ್ರತಿಪಾದಿಸಿದರು. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳನ್ನು ಮೈಗೂಡಿಸಿಕೊಂಡಾಗ ವ್ಯಕ್ತಿತ್ವ ಪರಿಪೂರ್ಣವಾಗುತ್ತದೆ ಎಂದು ಅವರು ವಿಶ್ಲೇಷಿಸಿದರು. ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್’ನಲ್ಲಿ ಶೈಕ್ಷಣಿಕ ಸೇವೆಯ ಜೊತೆಗೆ ವ್ಯಕ್ತಿತ್ವ ವಿಕಸನದ ಪುಣ್ಯಕಾರ್ಯವೂ

ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್’ನಲ್ಲಿ ಸನ್ಮಾನ ಮತ್ತು ಬೇಸಿಗೆ ಶಿಬಿರಕ್ಕೆ ಚಾಲನೆ Read More »

ಹತ್ತೂರೊಡೆಯ ಪುತ್ತೂರು ಮಹಾಲಿಂಗೇಶ್ವರನ ಜಾತ್ರೆಗೆ ಧ್ವಜಾರೋಹಣ

ಪುತ್ತೂರು: ಇತಿಹಾಸ ಪ್ರಸಿದ್ಧ ಹತ್ತೂರೊಡೆಯ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ವರ್ಷಾವಧಿ ಜಾತ್ರೋತ್ಸವಕ್ಕೆ ಚಾಲನೆ ದೊರೆತಿದೆ. ಧ್ವಜಾರೋಹಣದ ಮೂಲಕ ಭಕ್ತಿ ಭಾವದ ಹತ್ತು ದಿನಗಳ ಧಾರ್ಮಿಕ ಕಾರ್ಯಕ್ರಮಕ್ಕೆ ಚಾಲನೆ ದೊರೆತಿದೆ. ಬ್ರಹ್ಮಶ್ರೀ ‌ಕುಂಟಾರು ರವೀಶ ತಂತ್ರಿ ಅವರ ನೇತೃತ್ವದಲ್ಲಿ ಅದ್ಧೂರಿ ಜಾತ್ರೆ ಇಂದಿನಿಂದ ಆರಂಭವಾಗಿದೆ. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರು, ಭಕ್ತರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ಜಾತ್ರೋತ್ಸವದ ಧ್ವಜಾರೋಹಣವನ್ನು ಕಣ್ತುಂಬಿಕೊಂಡರು. ಮುಂದಿನ ಹತ್ತು ದಿನಗಳ ಕಾಲ ಈ ಜಾತ್ರೆ ನಡೆಯಲಿದ್ದು, ಲಕ್ಷಾಂತರ ಭಕ್ತರು

ಹತ್ತೂರೊಡೆಯ ಪುತ್ತೂರು ಮಹಾಲಿಂಗೇಶ್ವರನ ಜಾತ್ರೆಗೆ ಧ್ವಜಾರೋಹಣ Read More »

ಎ. 9 – 12: ಹನುಮಗಿರಿಯಲ್ಲಿ ನಡೆಯಲಿದೆ ಅದ್ಧೂರಿ ಬ್ರಹ್ಮಕಲಶ

ಪುತ್ತೂರು: ಈಶ್ವರಮಂಗಲದ ಹನುಮಗಿರಿಯಲ್ಲಿರುವ ತೋದಂಡರಾಮ, ಪಂಚಮುಖಿ ಆಂಜನೇಯ ಸ್ವಾಮಿ ಸನ್ನಿಧಿಯಲ್ಲಿ ಎ. 9-12 ರ ವರೆಗೆ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಸಕಲ ಸಿದ್ಧತೆಗಳು ಅಂತಿಮ ಘಟ್ಟಕ್ಕೆ ತಲುಪಿರುವುದಾಗಿ ಬ್ರಹ್ಮಕಲಶ ಸಮಿತಿಯ ಅಧ್ಯಕ್ಷ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ತಿಳಿಸಿದ್ದಾರೆ. ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವ ಅವರು ಎ. 10 ರಂದು ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಆಗಮಿಸಲಿದ್ದಾರೆ. ನೂತನ ಗೋಪುರ ಅವರಿಂದ ಲೋಕಾರ್ಪಣೆಯಾಗಲಿದೆ ಎಂದು ಹೇಳಿದ್ದಾರೆ. ಆಯೋಧ್ಯೆಯಿಂದ ತಂದ

ಎ. 9 – 12: ಹನುಮಗಿರಿಯಲ್ಲಿ ನಡೆಯಲಿದೆ ಅದ್ಧೂರಿ ಬ್ರಹ್ಮಕಲಶ Read More »

ಪುತ್ತೂರು ಜಾತ್ರೆಯಲ್ಲಿ ಅಹಿತಕರ ಘಟನೆ ಸಂಭವಿಸದಂತೆ ಎಚ್ಚರ ವಹಿಸಲು ಸರ್ಕಾರದ ಎಂಟು ಇಲಾಖೆಗಳಿಗೆ ಪತ್ರ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವದ ಸಂದರ್ಭದಲ್ಲಿ ಯಾವುದೇ ರೀತಿಯ ಪ್ರತಿಭಟನೆ, ಅಹಿತಕರ ಘಟನೆಗಳು ಸಂಭವಿಸದ ಹಾಗೆ ಸೂಕ್ತ ರಕ್ಷಣೆ ಒದಗಿಸುವಂತೆ ಆರ್. ಕೆ. ಪಾಂಗಣ್ಣಾಯ ಅವರು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಸೇರಿದಂತೆ ಎಂಟು ಇಲಾಖೆಗಳಿಗೆ ಮನವಿ ಸಲ್ಲಿಸಿದ್ದಾರೆ. ಪುತ್ತೂರಿನ ಪಿ. ಜಿ. ಜಗನ್ನಿವಾಸ ರಾವ್ ಅವರ ಪುತ್ರ ಯುವತಿಯೊಬ್ಬಳಿಗೆ ಮದುವೆಯಾಗುವ ಭರವಸೆ ನೀಡಿ ಮಗು ಕರುಣಿಸಿ ಕೈಕೊಟ್ಟ ಘಟನೆಗೆ ಸಂಬಂಧಿಸಿದ ಹಾಗೆ ಸಂತ್ರಸ್ತ ಯುವತಿಯ ತಾಯಿ ಜಾತ್ರೆಯ ಧ್ವಜಾರೋಹಣದ ದಿನ ಧ್ವಜ

ಪುತ್ತೂರು ಜಾತ್ರೆಯಲ್ಲಿ ಅಹಿತಕರ ಘಟನೆ ಸಂಭವಿಸದಂತೆ ಎಚ್ಚರ ವಹಿಸಲು ಸರ್ಕಾರದ ಎಂಟು ಇಲಾಖೆಗಳಿಗೆ ಪತ್ರ Read More »

ಏ.16ರಿಂದ 19ರವರೆಗೆ ತಿಂಗಳಾಡಿಯಲ್ಲಿ ಸುಬ್ಬಜ್ಜನ ಮನೆಯಲ್ಲಿ ವಸತಿಯುತ ಬೇಸಿಗೆ ಶಿಬಿರ

ಮಕ್ಕಳಿಗೆ ಪ್ರಕೃತಿ ಒಡಲಿನ ಅಗಾಧತೆಯನ್ನು ತಿಳಿಸುವ ಅರ್ಥಪೂರ್ಣ ಶಿಬಿರ ಪುತ್ತೂರು : ದಕ್ಷಿಣ ಕನ್ನಡ ಜಿಲ್ಲೆ, ಪುತ್ತೂರು ತಾಲೂಕಿನ ತಿಂಗಳಾಡಿ ಎಂಬಲ್ಲಿ ನಡೆಯುವ ರಾಜ್ಯಮಟ್ಟದ ‘ಸುಬ್ಬಜ್ಜನ ಮನೆಯಲ್ಲಿ ವಸತಿಯುತ ಬೇಸಿಗೆ ಶಿಬಿರ’ವನ್ನು ಈ ಬಾರಿ ಏಪ್ರಿಲ್ 16ರಿಂದ 19ರವರೆಗೆ ನಡೆಸಲಾಗುತ್ತಿದೆ. ಕಾಡಿನ ರಹಸ್ಯ ತಿಳಿಯುವುದು, ಟ್ರೆಷರ್ ಹಂಟ್, ವರ್ಲಿ ಆರ್ಟ್, ನೀರಾಟ, ಗೋವು ಮೇವು, ಗೋ ಪೂಜೆ, ನಿತ್ಯ ಪೂಜೆ, ರಾಮಾಯಣ ದೃಶ್ಯ ಕಾವ್ಯ, ಭಗವದ್ ಗೀತೆ ಜೊತೆಗೆ ಜೀವನ ಕೌಶಲಗಳನ್ನು ತಿಳಿಸುವ ಹತ್ತು ಹಲವು ಕುತೂಹಲಕಾರಿ

ಏ.16ರಿಂದ 19ರವರೆಗೆ ತಿಂಗಳಾಡಿಯಲ್ಲಿ ಸುಬ್ಬಜ್ಜನ ಮನೆಯಲ್ಲಿ ವಸತಿಯುತ ಬೇಸಿಗೆ ಶಿಬಿರ Read More »

ಪುತ್ತೂರಿನಲ್ಲಿ ʼಮಕ್ಕಳ ಕಲರವʼ ಉಚಿತ ಸಂಸ್ಕಾರ ಬೇಸಿಗೆ ಶಿಬಿರ

ಬೇಸಿಗೆಯಲ್ಲಿ ಪ್ರಾಣಿಪಕ್ಷಿಗಳಿಗೆ ನೀರುಣಿಸಲು ಮಕ್ಕಳಿಗೆ ಗಣೇಶ ಭಟ್ ಕೇರ ಖಂಡಿಗ ಕರೆ ಪುತ್ತೂರು: ಮಕ್ಕಳು ತಮ್ಮ ಪೋಷಕರೊಂದಿಗೆ ಹಸಿದ ಬೀದಿನಾಯಿಗಳಿಗೆ ಹಾಗೂ ಇನ್ನಿತರ ಅಶಕ್ತ ಪ್ರಾಣಿಗಳಿಗೆ ಆಹಾರ ಮತ್ತು ನೀರನ್ನು ಒದಗಿಸಿ ಪ್ರಾಣಿ ದಯೆ ತೋರಬೇಕೆಂದು ಗಣೇಶ ಭಟ್ ಕೇರ ಖಂಡಿಗ ಹೇಳಿದರು. ದೇವಾಲಯ ಸಂವರ್ಧನಾ ಸಮಿತಿ, ಪುತ್ತೂರಿನ ಹಿಂದೂ ಧಾರ್ಮಿಕ ಶಿಕ್ಷಣ ಪ್ರಕಲ್ಪ ವತಿಯಿಂದ ಪಾಂಗಳಾಯಿ ಅರಸು ಮುಂಡಿತ್ತಾಯ ದೈವಸ್ಥಾನದ ವಠಾರದಲ್ಲಿ ನಡೆದ ಮೊದಲ ದಿನದ ‘ಮಕ್ಕಳ ಕಲರವ’ ಬೇಸಿಗೆ ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ,

ಪುತ್ತೂರಿನಲ್ಲಿ ʼಮಕ್ಕಳ ಕಲರವʼ ಉಚಿತ ಸಂಸ್ಕಾರ ಬೇಸಿಗೆ ಶಿಬಿರ Read More »

ಇಚ್ಚೂರು ದೇವಸ್ಥಾನದಲ್ಲಿ ಶ್ರೀ ಮಹಾಭಾರತ ಸರಣಿಯ ತಾಳಮದ್ದಳೆ

ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಇಚ್ಚೂರು ಉರುವಾಲು ಇಲ್ಲಿನ ವಾರ್ಷಿಕ ಜಾತ್ರೆಯ ಪ್ರಯುಕ್ತ ಉಪ್ಪಿನಂಗಡಿ ಶ್ರೀ ಕಾಳಿಕಾಂಬಾ ಯಕ್ಷಕಲಾ ಟ್ರಸ್ಟ್ ಸುವರ್ಣ ವರ್ಷದ ನಿಮಿತ್ತ ಶ್ರೀ ಮಹಾಭಾರತ ಸರಣಿಯ 109 ಮತ್ತು 110ನೇ ತಾಳಮದ್ದಳೆ ಜರಗಿತು. ಕವಿ ಗೆರೆಸೊಪ್ಪೆ ಶಾಂತಪ್ಪಯ್ಯ ವಿರಚಿತ ರುದ್ರ ಭೀಮ ಪ್ರಸಂಗದಲ್ಲಿ ಭಾಗವತರಾಗಿ ಮಹೇಶ್ ಕನ್ಯಾಡಿ, ಹಿಮ್ಮೇಳದಲ್ಲಿ ಲಕ್ಷ್ಮೀಶ ಅಮ್ಮಣ್ಣಾಯ, ಚಂದ್ರಶೇಖರ ಆಚಾರ್ಯ ಗುರುವಾಯನಕೆರೆ ಅರ್ಥಧಾರಿಗಳಾಗಿ ಗಣರಾಜ ಕುಂಬ್ಳೆ(ಭೀಮಸೇನ)ಜಯರಾಮ ಬಲ್ಯ (ದುಶ್ಯಾಸನ)ಜಿನೇಂದ್ರ ಜೈನ್ (ದ್ರೌಪದಿ)ದಿವಾಕರ ಆಚಾರ್ಯ ಗೇರುಕಟ್ಟೆ(ಶ್ರೀಕೃಷ್ಣ),ಶ್ರೀಧರ ಎಸ್ಪಿ ಕೃಷ್ಣಾಪುರ (ಅರ್ಜುನ) ಕಿರಿಯ

ಇಚ್ಚೂರು ದೇವಸ್ಥಾನದಲ್ಲಿ ಶ್ರೀ ಮಹಾಭಾರತ ಸರಣಿಯ ತಾಳಮದ್ದಳೆ Read More »

error: Content is protected !!
Scroll to Top