ಪುತ್ತೂರು

ಪುತ್ತೂರು ಜಾತ್ರಾ ಪ್ರಯುಕ್ತ ಗ್ರಾಮೀಣ ಭಾಗಗಳಿಗೆ ಹೆಚ್ಚುವರಿ ವಿಶೇಷ ಸಾರಿಗೆ ಬಸ್‌ಗಳ ವ್ಯವಸ್ಥೆ

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವದ ಪ್ರಯುಕ್ತ ಗ್ರಾಮಾಂತರ ಭಾಗದ ಭಕ್ತರ ಅನುಕೂಲಕ್ಕಾಗಿ KSRTC ಯು ಹೆಚ್ಚುವರಿ ಬಸ್ಸುಗಳ ವ್ಯವಸ್ಥೆ ಕಲ್ಪಿಸಿದೆ. ಪ್ರತಿ ವರ್ಷ ಪುತ್ತೂರು ಜಾತ್ರೆಯ ವಿಶೇಷ ದಿನಗಳಂದು ಹೆಚ್ಚುವರಿ ಬಸ್ಸುಗಳ ವ್ಯವಸ್ಥೆಯನ್ನು ಭಕ್ತರಿಗೆ ಒದಗಿಸಿ ಕೊಡುವಂತೆಯೇ ಈ ಬಾರಿಯೂ ಕೆಎಸ್‌ಆರ್‌ಟಿಸಿ ಹೆಚ್ಚುವರಿ ಬಸ್ಸುಗಳ ವ್ಯವಸ್ಥೆ ಒದಗಿಸಿ ಕೊಡಲಿದೆ. ಎ. 16 ರಂದು ನಡೆಯುವ ಕೆರೆ ಉತ್ಸವಕ್ಕೆ, ಎ. 17 ರಥೋತ್ಸವದ ‌ಸಂದರ್ಭಗಳನ್ನು ಕಣ್ತುಂಬಿಕೊಳ್ಳಲು ಬರುವ ಭಕ್ತರ ಅನುಕೂಲಕ್ಕೆ ಹೆಚ್ಚುವರಿ ಸಾರಿಗೆ ಬಸ್ಸುಗಳ ವ್ಯವಸ್ಥೆಯನ್ನು ಸಂಸ್ಥೆ […]

ಪುತ್ತೂರು ಜಾತ್ರಾ ಪ್ರಯುಕ್ತ ಗ್ರಾಮೀಣ ಭಾಗಗಳಿಗೆ ಹೆಚ್ಚುವರಿ ವಿಶೇಷ ಸಾರಿಗೆ ಬಸ್‌ಗಳ ವ್ಯವಸ್ಥೆ Read More »

ಎವಿಜಿ ಶಾಲೆಯಲ್ಲಿ ಯಶಸ್ವಿ ಬೇಸಿಗೆ ಶಿಬಿರ ಸಂಪನ್ನ

ಅಲುಂಬುಡ: 2026ನೆ ಸಾಲಿನ ಎವಿಜಿ ಸಾಪ್ತಾಹಿಕ ಬೇಸಿಗೆ ಶಿಬಿರವು ಏಪ್ರಿಲ್ 16ರಂದು ಬನ್ನೂರಿನ ಅಲುಂಬುಡದಲ್ಲಿರುವ ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್ನಲ್ಲಿ ವರ್ಣರಂಜಿತವಾಗಿ ಸಮಾಪನಗೊಂಡಿತು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಭಾರತ ಮಾತೆಗೆ ಪುಷ್ಪಾರ್ಚನೆಗೈದು, ದೀಪ ಪ್ರಜ್ವಲಿಸಿ ಮಾತನಾಡಿದ ಪುತ್ತೂರಿನ ಗಾನಕೋಗಿಲೆ, ಸಾವಿರಾರು ಗಾಯನ ಕಂಠಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದ ಗಾನಸಿರಿ ಖ್ಯಾತಿಯ ಡಾ. ಕಿರಣ್ ಕುಮಾರ್ ಅವರು ಮಾತನಾಡಿ ಮಾತಾಪಿತರನ್ನು ಗೌರವಿಸುವವರು ಜೀವನದಲ್ಲಿ ಸೋತಿಲ್ಲ ಎಂದರು. ಅಂತಹ ಸಂಸ್ಕಾರ ಈ ಎವಿಜಿ ಶಾಲೆಯಲ್ಲಿ ಸಿಗುತ್ತಿದೆ. ಎವಿಜಿ ಕಲಾ

ಎವಿಜಿ ಶಾಲೆಯಲ್ಲಿ ಯಶಸ್ವಿ ಬೇಸಿಗೆ ಶಿಬಿರ ಸಂಪನ್ನ Read More »

ಶ್ರೇಷ್ಠ ಶೆಟ್ಟಿ ಅವರಿಗೆ CBSC ಹತ್ತನೇ ತರಗತಿ ಪರೀಕ್ಷೆಯಲ್ಲಿ 96.20% ಅಂಕ

ಬೆಳ್ಳಾರೆ: ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್ ಬೆಳ್ಳಾರೆ ಇಲ್ಲಿನ ವಿದ್ಯಾರ್ಥಿನಿ ಶ್ರೇಷ್ಠ ಶೆಟ್ಟಿ ಎಣ್ಮೂರುಗುತ್ತು ಅವರು ಸಿಬಿಎಸ್‌ಸಿ‌ ಹತ್ತನೇ ತರಗತಿ ಪರೀಕ್ಷೆಯಲ್ಲಿ 96.20% ಅಂಕಗಳನ್ನು ಗಳಿಸಿ ಶಾಲೆಗೆ ಪ್ರಥಮ ಸ್ಥಾನದಲ್ಲಿ ಉತ್ತೀರ್ಣರಾಗಿ, ಕೀರ್ತಿ ತಂದಿರುತ್ತಾರೆ. ಇವರು ಎಣ್ಮೂರುಗುತ್ತು ರಘುಪ್ರಸಾದ್ ‌ಶೆಟ್ಟಿ ಮತ್ತು ಭಾರತಿ ಶೆಟ್ಟಿ ದಂಪತಿ ಪುತ್ರಿ.

ಶ್ರೇಷ್ಠ ಶೆಟ್ಟಿ ಅವರಿಗೆ CBSC ಹತ್ತನೇ ತರಗತಿ ಪರೀಕ್ಷೆಯಲ್ಲಿ 96.20% ಅಂಕ Read More »

ಪುತ್ತೂರು ಜಾತ್ರೆ : ಮದ್ಯ ಮಾರಾಟ ನಿಷೇಧ, ಸಂಚಾರ ಮಾರ್ಗ ಬದಲಾವಣೆ

ಮೂರು ದಿನ ಹಲವು ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಆದೇಶ ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆಯ ಪ್ರಯುಕ್ತ ಏಪ್ರಿಲ್ 16ರಂದು ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಗಳ ಭೇಟಿ, ಕೆರೆ ಉತ್ಸವ, ತೆಪ್ಪೋತ್ಸವ ಹಾಗೂ ಏಪ್ರಿಲ್ 17ರಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮರಥೋತ್ಸವ, ಏಪ್ರಿಲ್ 18 ರಂದು ದೇವರು ಅವಭೃತ ಸ್ನಾನಕ್ಕೆ ವೀರಮಂಗಲಕ್ಕೆ ಹೋಗಲಿದ್ದು, ಈ ವೇಳೆ ಸಾವಿರಾರು ಜನ ಭಕ್ತಾದಿಗಳು ಸೇರುವ ನಿರೀಕ್ಷೆಯಿರುತ್ತದೆ. ಪುತ್ತೂರು ಪರಿಸರವು ಸೂಕ್ಷ್ಮ ಪ್ರದೇಶವಾಗಿರುವುದರಿಂದ ಈ ಸಮಯದಲ್ಲಿ ಕಿಡಿಗೇಡಿಗಳು ಅಮಲು

ಪುತ್ತೂರು ಜಾತ್ರೆ : ಮದ್ಯ ಮಾರಾಟ ನಿಷೇಧ, ಸಂಚಾರ ಮಾರ್ಗ ಬದಲಾವಣೆ Read More »

ಮಹಿಳೆಗೆ ಅಗೌರವ, ಜೀವ ಬೆದರಿಕೆ: ತಿಮರೋಡಿ ವಿರುದ್ಧ ಪ್ರಕರಣ ದಾಖಲು

ಪುತ್ತೂರು: ದೂರವಾಣಿ ಮೂಲಕ ಮಹಿಳೆಗೆ ಅವಾಚ್ಯವಾಗಿ ನಿಂದಿಸಿ, ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಉಜಿರೆಯ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯಕ್ಷಗಾನ ಕಲಾವಿದ ದಿನೇಶ್ ಕೊಡಪದವು ಅವರ ತಾಯಿ ಬಂಟ್ವಾಳದ ಲೀಲಾವತಿ (71) ಅವರು ದೂರು ನೀಡಿದ್ದಾರೆ. ತಿಮರೋಡಿ ಫೋನ್ ಮೂಲಕ ಅತ್ಯಂತ ಕೀಳು ಮಟ್ಟದಲ್ಲಿ ಮಾತನಾಡಿ ಮಹಿಳೆಯ ತೇಜೋವಧೆ ಮಾಡಿದ್ದಾರೆ. ಮಹಿಳೆಯ ಗೌರವಕ್ಕೆ ಧಕ್ಕೆ ತರುವ ರೀತಿ ಮಾತನಾಡಿದ್ದು ಮಾತ್ರವಲ್ಲದೆ, ಜೀವ ಬೆದರಿಕೆ ಹಾಕಿದ್ದಾರೆ. ಈ

ಮಹಿಳೆಗೆ ಅಗೌರವ, ಜೀವ ಬೆದರಿಕೆ: ತಿಮರೋಡಿ ವಿರುದ್ಧ ಪ್ರಕರಣ ದಾಖಲು Read More »

ಪತಂಜಲಿ ಯೋಗ ಶಾಖೆಯಲ್ಲಿ ಸೌರ ಯುಗಾದಿ ಆಚರಣೆ

ಪುತ್ತೂರು: ಪತಂಜಲಿ ಯೋಗ ಶಿಕ್ಷಣ ಸಮಿತಿ ರಿ. ಕರ್ನಾಟಕ, ಕೇಂದ್ರ ಕಚೇರಿ ತುಮಕೂರು ಇದರ ಕ್ಷೀರ ಸಂಗಮ ಸಭಾಭವನ ಕಳಿಯ ಗೇರುಕಟ್ಟೆ ಶಾಖೆಯಲ್ಲಿ ಪಂಚಾಂಗ ಪಠಣ, ಭಜನಾ ಸಂಕೀರ್ತನೆ, ಧ್ಯಾನ, ಸೂರ್ಯ ನಮಸ್ಕಾರ ಅಮೃತ ಫಲಹಾರದೊಂದಿಗೆ ಸೌರ ಯುಗಾದಿಯನ್ನು ಆಚರಿಸಲಾಯಿತು. ಹಿರಿಯ ಯೋಗ ಬಂದು ಭಾರತಿ ಸೌರ ಯುಗಾದಿಯ ಬಗ್ಗೆ ಬೌದ್ಧಿಕ ನೀಡಿದರು. ಕೇಂದ್ರದ ಸಂಚಾಲಕ ವಿಜಯ, ಅಶೋಕ, ದಿವಾಕರ ಆಚಾರ್ಯ, ಸತೀಶ, ಶಿವಣ್ಣ, ಪದ್ಮಲತಾ, ಹರ್ಷಿತಾ ಮೊದಲಾದವರು ಭಾಗವಹಿಸಿದ್ದರು.

ಪತಂಜಲಿ ಯೋಗ ಶಾಖೆಯಲ್ಲಿ ಸೌರ ಯುಗಾದಿ ಆಚರಣೆ Read More »

ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ

ಪುತ್ತೂರು : ಬನ್ನೂರಿನ ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಯಿತು . ಶಾಲಾ ಆಡಳಿತ ಸಮಿತಿಯ ಉಪಾಧ್ಯಕ್ಷ ಉಮೇಶ್ ಮಲುವೇಲು ಅವರು ಅಧ್ಯಕ್ಷತೆ ವಹಿಸಿ, ದೀಪ ಬೆಳಗಿಸಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದರು‌. ಬಳಿಕ ಮಾತನಾಡಿದ ಅವರು, ದೇಶವು ಸುಗಮವಾಗಿ ಮುನ್ನಡೆಯಬೇಕಾದರೆ ಪೂರಕವಾದ ಕಾನೂನು ಚೌಕಟ್ಟು ಅಗತ್ಯ. ಸುಗಮ ಆಡಳಿತಕ್ಕೆ ಕಾನೂನು ವ್ಯವಸ್ಥಿತ ಸಂವಿಧಾನವನ್ನು ರಚಿಸುವಲ್ಲಿ ಡಾ. ಬಿಆರ್ ಅಂಬೇಡ್ಕರ್ ರವರು ಪ್ರಧಾನ ಪಾತ್ರ ವಹಿಸಿದ್ದರು ಎಂದರು. ಶಾಲಾ ಸಂಚಾಲಕ

ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ Read More »

ವಿ .ಎಸ್. ಭಟ್ಟರಿಗೆ ‘ಬಾರ್ಯ ಪ್ರಶಸ್ತಿ’ ಪ್ರದಾನ

ಪುತ್ತೂರು: ಮಾತಾಪಿತರನ್ನು ಗೌರವದಿಂದ ಕಾಣುವುದು ಮತ್ತು ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ತಪಸ್ಸಿಗೆ ಸಮಾನ. ಅವರ ಸ್ಮರಣೆಯಲ್ಲಿ ಸಾಧಕರನ್ನು ಗುರುತಿಸಿ ಸನ್ಮಾನಿಸುವುದು ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುವುದೆಂದು ಕುಂಟಾರು ಶ್ರೀಧರ ತಂತ್ರಿಗಳು ತಿಳಿಸಿದರು. ಪರ್ಲಡ್ಕದ ಅಗಸ್ತ್ಯ ನಿವಾಸದ ಶಾರದಮ್ಮ ವೇದಿಕೆಯಲ್ಲಿ ಜರಗಿದ ಸಮಾರಂಭದಲ್ಲಿ 26ನೇ ವರ್ಷದ ಬಾರ್ಯ ಪ್ರಶಸ್ತಿಯನ್ನು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವೆಂಕಟೇಶ ಸುಬ್ರಹ್ಮಣ್ಯ ಭಟ್ ಅವರಿಗೆ ಪ್ರದಾನ ಮಾಡಿ ಮಾತನಾಡಿದರು. ಸನ್ಮಾನ ಸ್ವೀಕರಿಸಿದ ವಿ. ಎಸ್‌. ಭಟ್ ಮಾತನಾಡಿ, ಕಳೆದ

ವಿ .ಎಸ್. ಭಟ್ಟರಿಗೆ ‘ಬಾರ್ಯ ಪ್ರಶಸ್ತಿ’ ಪ್ರದಾನ Read More »

ಪಾಳು ಬಾವಿಗೆ ಬಿದ್ದಿದ್ದ ಕಾಡಾನೆಯ ರಕ್ಷಣೆ

ಸುಳ್ಯ: ತಾಲೂಕಿನ ಪೆರಾಜೆ ‌ಗ್ರಾಮದಲ್ಲಿ ಆಕಸ್ಮಿಕವಾಗಿ ಪಾಳು ಬಾವಿಗೆ ಬಿದ್ದ ಒಂಟಿ ಸಲಗವೊಂದನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಸತತ ಎಂಟು ಗಂಟೆಗಳ ಕಾರ್ಯಾಚರಣೆಯ ಮೂಲಕ ರಕ್ಷಣೆ ಮಾಡಿದ ಘಟನೆ ನಡೆದಿದೆ. ಕಲ್ಲಚರ್ಪ ರಾಮ ನಾಯ್ಕ ಎಂಬವರ ತೋಟದಲ್ಲಿ ಎ. 12 ರ ರಾತ್ರಿ ಸಮಯದಲ್ಲಿ ಆನೆಯೊಂದು ನಿರಂತರವಾಗಿ ಘೀಳಿಡುವ ಸದ್ದು ಕೇಳಿ ಬಂದಿತ್ತು. ಸ್ಥಳೀಯರು ತೋಟದಲ್ಲಿ ಹುಡುಕಾಡಿದಾಗ ಸುಮಾರು 30 ಅಡಿ ಆಳದ ಪಾಳು ಬಾವಿಯಲ್ಲಿ ಕಾಡಾನೆಯೊಂದು ಬಿದ್ದಿರುವುದು ಗೊತ್ತಾಗಿದೆ. ಈ ಮಾಹಿತಿಯನ್ನು ಸ್ಥಳೀಯರು ತಕ್ಷಣವೇ ಅರಣ್ಯ

ಪಾಳು ಬಾವಿಗೆ ಬಿದ್ದಿದ್ದ ಕಾಡಾನೆಯ ರಕ್ಷಣೆ Read More »

ಕಲಾವಿದರಿಗೆ ನುಡಿ ನಮನ, ತಾಳಮದ್ದಳೆ

ಉಪ್ಪಿನಂಗಡಿ: ಶ್ರೀ ಕಾಳಿಕಾಂಬ ಯಕ್ಷ ಕಲಾ ಟ್ರಸ್ಟ್ ರಿ. ಉಪ್ಪಿನಂಗಡಿ ಸುವರ್ಣ ಮಾಹೋತ್ಸವದ ಶ್ರೀ ಮಹಾಭಾರತ ಸರಣಿಯಲ್ಲಿ 111ನೇ ತಾಳಮದ್ದಳೆಯಾಗಿ ಘಟೋತ್ಕಚ ವಿವಾಹಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಜರಗಿತು. ಕವಿ ಗುಂಡು ಸೀತಾರಾಮ್ ರಾವ್ ತಲವಾಟ ರಚಿತ ಚಕ್ರ ಚಂಡಿಕೆ ಪ್ರಸಂಗದಿಂದ ಆಯ್ದ ಆಖ್ಯಾನದಲ್ಲಿ ಭಾಗವತರಾಗಿ ಮಲ್ಲಿಕಾ ಶೆಟ್ಟಿ ಸಿದ್ದಕಟ್ಟೆ, ಪದ್ಮನಾಭ ಕುಲಾಲ್ ಇಳoತಿಲ ಹಿಮ್ಮೇಳದಲ್ಲಿ ಶ್ರೀಪತಿ ಭಟ್ ಉಪ್ಪಿನಂಗಡಿ, ಪ್ರಚೇತ್ ಆಳ್ವ ಬಾರ್ಯ. ಚಂದ್ರಶೇಖರ ಆಚಾರ್ಯ ಗೇರುಕಟ್ಟೆ ಅರ್ಥಧಾರಿಗಳಾಗಿ ದಿವಾಕರ ಆಚಾರ್ಯ ನೇರೆಂಕಿ(ಮೌರ್ವಿ) ಶ್ರೀಧರ ಎಸ್.

ಕಲಾವಿದರಿಗೆ ನುಡಿ ನಮನ, ತಾಳಮದ್ದಳೆ Read More »

error: Content is protected !!
Scroll to Top