ಪುತ್ತೂರು

ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಗಾನ ಸಂಘದ ಹಿರಿಯ ಸದಸ್ಯ ಕುಶಾಲಪ್ಪ ಗೌಡ ನಿಧನ

ಉಪ್ಪಿನಂಗಡಿ : ಶ್ರೀ ಕಾಳಿಕಾಂಬ ಯಕ್ಷಗಾನ ಸಂಘದ ಹಿರಿಯ ಸದಸ್ಯರಾಗಿ ಅರ್ಥಧಾರಿಯಾಗಿ ಭಾಗವಹಿಸುತ್ತಿದ್ದ ಶ್ರೀ ಕುಶಾಲಪ್ಪ ಗೌಡ (78) ಇವರು ಅಲ್ಪಕಾಲದ ಅಸೌಖ್ಯದಿಂದ ದಿನಾಂಕ 31.03.2026ರಂದು ಉಪ್ಪಿನಂಗಡಿ ಕಟ್ಟೆಚಾರು  ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಇವರು  ಉಪ್ಪಿನಂಗಡಿಯ ಶ್ರೀ ಗಣೇಶ ಸ್ಟೋರ್ ಜವಳಿ ಮಳಿಗೆಯಲ್ಲಿ ದೀರ್ಘಕಾಲ ಕಾರ್ಯನಿರ್ವಹಿಸುತ್ತಿದ್ದು, ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸಂಘದ ಹಿರಿಯ ಸದಸ್ಯರಾಗಿದ್ದ ಇವರು ಸುಮಾರು ಮೂರು ದಶಕಗಳಿಗಿಂತಲೂ ಹೆಚ್ಚು ಕಾಲ ಸಂಘದೊಂದಿಗೆ ಸಕ್ರಿಯರಾಗಿದ್ದರು. ರಾವಣ, ಇಂದ್ರಜಿತು, ವಾಲಿ,ಸುಗ್ರೀವ,ಮಾಗಧ ,ಕೌರವ ಮುಂತಾದ ಪಾತ್ರಗಳನ್ನು ನಿರ್ವಹಿಸುತ್ತಿದ್ದರಲ್ಲದೆ […]

ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಗಾನ ಸಂಘದ ಹಿರಿಯ ಸದಸ್ಯ ಕುಶಾಲಪ್ಪ ಗೌಡ ನಿಧನ Read More »

ಮಾ.30: ಮುಳಿಯ ಡೈಮಂಡ್ ಫೆಸ್ಟ್ ಉದ್ಘಾಟನೆ

ಪುತ್ತೂರು, ಮಾ. 30: ಪ್ರಸಿದ್ಧ ಆಭರಣ ಸಂಸ್ಥೆ ಮುಳಿಯ ಗೋಲ್ಡ್ -ಡೈಮಂಡ್ಸ್ ವತಿಯಿಂದ ಗ್ರಾಹಕರಿಗಾಗಿ ಆಯೋಜಿಸಲಾದ ‘ಡೈಮಂಡ್ ಫೆಸ್ಟ್’ ವಿಶೇಷ ಉತ್ಸವ ಮಾ.30ರಂದು ಉದ್ಘಾಟನೆಯಾಯಿತು. ಸುಬ್ರಹ್ಮಣ್ಯ ಶ್ರೀಕೃಷ್ಣ ರೆಸಿಡೆನ್ಸಿ ಮಾಲಕಿ ಪ್ರಜ್ಞಾ ಶೆಣೈ ಉತ್ಸವವನ್ನು ಉದ್ಘಾಟಿಸಿ ಮಾತನಾಡಿ, ಗುಣಮಟ್ಟ ಮತ್ತು ನಂಬಿಕೆಯಿಂದ ಜನರ ವಿಶ್ವಾಸಗಳಿಸಿರುವ ಮುಳಿಯ ಜ್ಯುವೆಲ್ಸ್ ಹತ್ತೂರಿನಲ್ಲಿ ಮನೆ ಮಾತಾಗಿದೆ ಎಂದರು. ಗ್ರಾಹಕರ ಆಯ್ಕೆಗೆ ತಕ್ಕಂತೆ ವಿಶಾಲ ಸಂಗ್ರಹ ಹಾಗೂ ಸಿಬಂದಿ ಆತ್ಮೀಯ ಸೇವೆ ಸಂಸ್ಥೆಯ ವಿಶೇಷತೆ ಎಂದರು. ಉತ್ಸವ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

ಮಾ.30: ಮುಳಿಯ ಡೈಮಂಡ್ ಫೆಸ್ಟ್ ಉದ್ಘಾಟನೆ Read More »

ಭಾಗವತ ಮಹೇಶ ಕನ್ಯಾಡಿ ಅವರಿಗೆ ಗೌರವಾರ್ಪಣೆ

ಇಚ್ಚೂರು ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ವರ್ಷಾವಧಿ ಜಾತ್ರೆ ಪ್ರಯುಕ್ತ ಉಪ್ಪಿನಂಗಡಿ ಶ್ರೀ ಕಾಳಿಕಾಂಬಾ ಯಕ್ಷಕಲಾ ಟ್ರಸ್ಟ್ ಸಂಯೋಜನೆಯಲ್ಲಿ ಜರಗಿದ ಶ್ರೀ ಮಹಾಭಾರತ ಸರಣಿ ತಾಳ ಮದ್ದಳೆ ಸಂದರ್ಭದಲ್ಲಿ ಯಕ್ಷ ಭಾರತಿ ರಿ.ಕನ್ಯಾಡಿ ಸಂಚಾಲಕ, ಭಾಗವತ ಮಹೇಶ್ ಕನ್ಯಾಡಿ ಇವರನ್ನು ಗೌರವಿಸಲಾಯಿತು. ದೇವಳದ ಅರ್ಚಕರಾದ ಸುರೇಶ ಪುತ್ತೂರಾಯ,  ಹಿಮ್ಮೇಳ ಕಲಾವಿದ ಲಕ್ಷ್ಮೀಶ ಅಮ್ಮಣ್ಣಾಯ ಇಳoತಿಲ , ನಿವೃತ ಉಪನ್ಯಾಸಕ-ಅರ್ಥಧಾರಿ ಗಣರಾಜ ಕುಂಬ್ಳೆ, ಯಕ್ಷ ಭಾರತಿ ಖಜಾಂಜಿ ಚಂದ್ರಶೇಖರ ಆಚಾರ್ಯ ಗುರುವಾಯನಕೆರೆ, ಶ್ರೀ ಕಾಳಿಕಾಂಬಾ ಯಕ್ಷಕಲಾ ಟ್ರಸ್ಟಿನ ಅಧ್ಯಕ್ಷ

ಭಾಗವತ ಮಹೇಶ ಕನ್ಯಾಡಿ ಅವರಿಗೆ ಗೌರವಾರ್ಪಣೆ Read More »

ಅಕ್ಷಯ ಕಾಲೇಜಿನಲ್ಲಿ ‘ಪ್ರಿಸಮ್-2K26’ ಇಂಟರ್‌ಕ್ಲಾಸ್ ಫೆಸ್ಟ್ ಕಾರ್ಯಕ್ರಮ

ಪುತ್ತೂರು: ಅಕ್ಷಯ ಕಾಲೇಜು ಪುತ್ತೂರು ಇಲ್ಲಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಬೈಟ್‌ಬ್ಲಿಟ್ಜ್ ಐಟಿ ಕ್ಲಬ್ ಹಾಗೂ ಐಕ್ಯುಎಸಿ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ‘ಪ್ರಿಸಮ್-2K26’ ಇಂಟರ್‌ಕ್ಲಾಸ್ ಫೆಸ್ಟ್ ಮಾರ್ಚ್ 26ರಂದು ಯಶಸ್ವಿಯಾಗಿ ನೆರವೇರಿತು. ವಿದ್ಯಾರ್ಥಿಗಳ ಸೃಜನಶೀಲತೆ, ಕೌಶಲ್ಯ ಹಾಗೂ ತಂಡದ ಮನೋಭಾವವನ್ನು ಉತ್ತೇಜಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಅಕ್ಷಯ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಆದ ಶ್ರೀಮತಿ ಕಲಾವತಿ ಜಯಂತ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಶುಭಾಶಯ ಕೋರಿದರು. ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ

ಅಕ್ಷಯ ಕಾಲೇಜಿನಲ್ಲಿ ‘ಪ್ರಿಸಮ್-2K26’ ಇಂಟರ್‌ಕ್ಲಾಸ್ ಫೆಸ್ಟ್ ಕಾರ್ಯಕ್ರಮ Read More »

ಅಸೌಖ್ಯದಿಂದ ಮಹಿಳೆ ಸಾವು

ಪುತ್ತೂರು: ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ‌ಮೃತಪಟ್ಟ ಘಟನೆ ನಿನ್ನೆ ನಡೆದಿದೆ. ಮೃತರನ್ನು ದೇವಚಳ್ಳ ಗ್ರಾಮದ ಕಲ್ಲುಪಣೆ ಕೃಷ್ಣಪ್ಪ ನಾಯ್ಕ ಎಂಬವರ ಪುತ್ರಿ ಉಷಾಲತಾ(31) ಎಂದು ಗುರುತಿಸಲಾಗಿದೆ. ಉಷಾ ಅವರು ಮಾವಿನಕಟ್ಟೆಯ ಅರ್ಣ ಗ್ಯಾಸ್‌ನಲ್ಲಿ ಉದ್ಯೋಗಿಯಾಗಿದ್ದರು. ಕಳೆದ ಎರಡು ವರ್ಷದ ಹಿಂದಷ್ಟೇ ಅಲೆಟ್ಟಿಯ ಸೂರಜ್ ಎಂಬವರ ಜೊತೆ ಇವರ ವಿವಾಹ ನಡೆದಿತ್ತು. ಮೃತರು ಪತಿ, ತಂದೆ, ತಾಯಿ, ಸಹೋದರಿಯರನ್ನು ಅಗಲಿದ್ದಾರೆ.

ಅಸೌಖ್ಯದಿಂದ ಮಹಿಳೆ ಸಾವು Read More »

ಪತಂಜಲಿ ಯೋಗ ಶಾಖೆಯಲ್ಲಿ ಶ್ರೀರಾಮನವಮಿ ಆಚರಣೆ

ಪುತ್ತೂರು: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ರಿ. ಕರ್ನಾಟಕ, ಕೇಂದ್ರ ಕಚೇರಿ ತುಮಕೂರು, ಮಂಗಳೂರು ವಿಭಾಗ ಪುತ್ತೂರು ತಾಲೂಕು ಕಳಿಯ ಶಾಖೆಯಲ್ಲಿ ಶ್ರೀರಾಮ ರಾಮನವಮಿ ಆಚರಣೆ ಮಾಡಲಾಯಿತು. ಗೇರುಕಟ್ಟೆ ಕ್ಷೀರ ಸಂಗಮ ಸಭಾಭವನದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಶ್ರೀರಾಮ ಭಜನೆ, ಸ್ತೋತ್ರ ಪಾರಾಯಣವನ್ನು ಯೋಗ ಬಂಧುಗಳು ನಡೆಸಿಕೊಟ್ಟರು. ಭಾರತಿ ಎಂ. ಎಲ್., ಅರುಣಾ, ಪದ್ಮಲತಾ ಪೂಜಾ ಕಾರ್ಯಕ್ರಮವನ್ನು ನೆರವೇರಿಸಿದರು. ಹಿರಿಯ ಯೋಗ ಬಂಧು ದಿವಾಕರ ಆಚಾರ್ಯ ಗೇರುಕಟ್ಟೆ, ಶ್ರೀ ರಾಮಚಂದ್ರನ ಆದರ್ಶಗುಣಗಳ ಬಗ್ಗೆ ಬೌದ್ಧಿಕ ನೀಡಿ ಮರ್ಯಾದ

ಪತಂಜಲಿ ಯೋಗ ಶಾಖೆಯಲ್ಲಿ ಶ್ರೀರಾಮನವಮಿ ಆಚರಣೆ Read More »

ಅಕ್ಷಯ ಪದವಿಪೂರ್ವ ಕಾಲೇಜಿನಲ್ಲಿ ಉಚಿತ CET ತರಬೇತಿ ಆರಂಭ

ಪುತ್ತೂರು: ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳನ್ನು ಮುಂದಿನ ಹಂತಕ್ಕೆ ತಲುಪಿಸುವ ನಿಟ್ಟಿನಲ್ಲಿ ಸಂಪ್ಯದಲ್ಲಿರುವ ಅಕ್ಷಯ ಪಿಯು ಕಾಲೇಜು ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ವೃತ್ತಿ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು, ಕಾಲೇಜು ವತಿಯಿಂದ ಉಚಿತ ಕ್ರ್ಯಾಶ್ ಕೋರ್ಸ್ಗಳನ್ನು ಆರಂಭಿಸಲಾಗಿದ್ದು, ಇದು ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಿದೆ. ವಿಜ್ಞಾನ ಹಾಗೂ ವಾಣಿಜ್ಯ ವಿಭಾಗಗಳಲ್ಲಿ ಉತ್ತಮ ಶಿಕ್ಷಣ ವ್ಯವಸ್ಥೆಯನ್ನು ಹೊಂದಿರುವ ಈ ಸಂಸ್ಥೆ, ಸ್ಪರ್ಧಾತ್ಮಕ ಪರೀಕ್ಷೆಗಳಾದ CET, NEET ಹಾಗೂ IIT-JEEಗೆ ವಿಶೇಷ ತರಬೇತಿ ನೀಡುತ್ತಿದೆ. ಶ್ರೀ ಚೈತನ್ಯ ಇನ್‌ಸ್ಟಿಟ್ಯೂಷನ್

ಅಕ್ಷಯ ಪದವಿಪೂರ್ವ ಕಾಲೇಜಿನಲ್ಲಿ ಉಚಿತ CET ತರಬೇತಿ ಆರಂಭ Read More »

ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ, ಪುತ್ತೂರು ಘಟಕದ ಸಭೆ

ಪುತ್ತೂರು: ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ರಿ. ಮೆಲ್ಕಾರು ಬಂಟ್ವಾಳ ಇದರ ಪುತ್ತೂರು ಘಟಕದ ಸಭೆ ಸ್ವಾಗತ ಹೋಟೆಲ್ ಸಭಾಂಗಣದಲ್ಲಿ ಜರಗಿತು. ಸಭೆಯಲ್ಲಿ ಪುತ್ತೂರು ಆನಂದಾಶ್ರಮಕ್ಕೆ ಭೇಟಿ, ಜಿಲ್ಲಾ ಸಂಚಾಲಕರ ಭಾಸ್ಕರ್ ಬಾರ್ಯ ಅಗಸ್ತ್ಯ ಅವರ ಮನೆಯಲ್ಲಿ ಶ್ರೀ ಮಹಾಲಿಂಗೇಶ್ವರ ದೇವರ ಕಟ್ಟೆ ಪೂಜೆಯಲ್ಲಿ ಭಾಗವಹಿಸಿ ಸಾಂಸ್ಕೃತಿಕ ಕಾರ್ಯಕ್ರಮ ನೀಡುವುದು, ಬಾರ್ಯ ವಿಷ್ಣುಮೂರ್ತಿ ನೂರಿತ್ತಾಯ ಪ್ರತಿಷ್ಠಾನದ ವಾರ್ಷಿಕ ಪ್ರಶಸ್ತಿ ಸಮಾರಂಭ, ಎಪ್ರಿಲ್ 14ರಂದು ಬಾರ್ಯ ಶ್ರೀ ಮಹಾ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಜರಗಲಿರುವ ಶ್ರೀ ಮಹಾವಿಷ್ಣು ಯಾಗದಲ್ಲಿ

ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ, ಪುತ್ತೂರು ಘಟಕದ ಸಭೆ Read More »

ಮಾ. 27 ರಿಂದ ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ಸ್ ನಲ್ಲಿ ಡೈಮಂಡ್ ಫೆಸ್ಟ್

50,000 ರೂ. ಗಿಂತ ಹೆಚ್ಚಿನ ಖರೀದಿಗೆ ಗ್ಯಾರಂಟಿ ಗಿಫ್ಟ್ ಪುತ್ತೂರು: ಪ್ರಸಿದ್ಧ ಆಭರಣ ಸಂಸ್ಥೆ ಮುಳಿಯ ಗೋಲ್ಡ್ & ಡೈಮಂಡ್ಸ್‌ ತನ್ನ ಗ್ರಾಹಕರಿಗೆ ‘ಡೈಮಂಡ್ ಫೆಸ್ಟ್’ ವಿಶೇಷ ಉತ್ಸವವನ್ನು ಮಾರ್ಚ್ 27ರಿಂದ ಆರಂಭಿಸುತ್ತಿದೆ. ‘ವೈಡೆಸ್ಟ್ ರೇಂಜ್, ಎಂಡ್‌ಲೆಸ್ ವಾವ್ಸ್!’ ಎಂಬ ಘೋಷಣೆಯೊಂದಿಗೆ ನಡೆಯುತ್ತಿರುವ ಈ ಉತ್ಸವವು ವಜ್ರಾವರಣ ಪ್ರಿಯರನ್ನು ಕೈಬೀಸಿ ಕರೆಯುತ್ತಿದೆ. ಫೆಸ್ಟ್‌ನ ಅಂಗವಾಗಿ ಗ್ರಾಹಕರು ₹50,000 ಹೆಚ್ಚಿನ ಖರೀದಿಗೆ ಖಚಿತ ಉಡುಗೊರೆ ಪಡೆಯಬಹುದಾಗಿದೆ. ಜೊತೆಗೆ ಲಕ್ಕಿ ಡ್ರಾ ಮೂಲಕ ಬಂಪರ್ ಬಹುಮಾನವಾಗಿ ಎಲೆಕ್ಟ್ರಿಕ್ ಸ್ಕೂಟರ್ ಗೆಲ್ಲುವ

ಮಾ. 27 ರಿಂದ ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ಸ್ ನಲ್ಲಿ ಡೈಮಂಡ್ ಫೆಸ್ಟ್ Read More »

ಅಕ್ಷಯ ಪದವಿ ಕಾಲೇಜಿನಲ್ಲಿ ಅದ್ವಯ ಕನ್ನಡ ಸಾಹಿತ್ಯ ಸಂಘದಿಂದ ಅಂಕುರ ಭಿತ್ತಿಪತ್ರ ಅನಾವರಣ

ಪುತ್ತೂರು: ಅಕ್ಷಯ ಪದವಿ ಕಾಲೇಜಿನಲ್ಲಿ ಅದ್ವಯ ಕನ್ನಡ ಸಾಹಿತ್ಯ ಸಂಘದಿಂದ ಅಂಕುರ ಭಿತ್ತಿಪತ್ರ ಅನಾವರಣ ಕಾರ್ಯಕ್ರಮವು ನಡೆಯಿತು. ಕರ್ನಾಟಕ ಸಂಘ, ಪುತ್ತೂರು ಇದರ ಅಧ್ಯಕ್ಷಪುರಂಧರ ಭಟ್ ಬಿ. ಇವರು ಅಂಕುರ ಭಿತ್ತಿಪತ್ರಿಕೆಯ ಅನಾವರಣ ಮಾಡಿ, ದೀಪ ಪ್ರಜ್ವಲನೆಗೈದರು. ಬಳಿಕ ಮಾತನಾಡಿದ ಅವರು, ತಮ್ಮ ಬಾಲ್ಯದ ದಿನಗಳಲ್ಲಿನ ನೆನಪನ್ನು ಬಿತ್ತರಿಸಿ ಮುಂದಿನ ದಿನಗಳಲ್ಲಿ ಅಂಕುರ ಹೆಮ್ಮರವಾಗುವಂತೆ ನಿಮ್ಮ ಭವಿಷ್ಯವು ಉಜ್ವಲವಾಗಲಿ ಎಂದು ಹಾರೈಸಿದರು. ಮುಖ್ಯ ಅತಿಥಿ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಇದರ ಅಧ್ಯಕ್ಷ ಉಮೇಶ್ ನಾಯಕ್

ಅಕ್ಷಯ ಪದವಿ ಕಾಲೇಜಿನಲ್ಲಿ ಅದ್ವಯ ಕನ್ನಡ ಸಾಹಿತ್ಯ ಸಂಘದಿಂದ ಅಂಕುರ ಭಿತ್ತಿಪತ್ರ ಅನಾವರಣ Read More »

error: Content is protected !!
Scroll to Top