ಪುತ್ತೂರು ಬಾಲವನದಲ್ಲಿ ವಿಶ್ವ ಪರಿಸರ ದಿನಾಚರಣೆ | ಪರಿಸರ ಉಳಿದಲ್ಲಿ ಮಾತ್ರ ಮಾನವ ಬದುಕಿನ ಉಳಿವು ಸಾಧ್ಯ-ಶಾಸಕ ಅಶೋಕ್ ಕುಮಾರ್ ರೈ
ಪುತ್ತೂರು: ಪರಿಸರ ಸಮತೋಲನದಲ್ಲಿ ಮರಗಿಡಗಳ ಪಾತ್ರ ಮಹತ್ತರವಾಗಿದೆ. ನಗರ ಬೆಳವಣಿಗೆಯ ಹಿನ್ನಲೆಯಲ್ಲಿ ಕಾಡುಗಳ ನಾಶವಾಗುತ್ತಿದ್ದು, ಪರಿಸರಕ್ಕೆ ಹಾನಿಯಾಗುತ್ತಿದೆ. ಪರಿಸರ ಉಳಿದಲ್ಲಿ ಮಾತ್ರ ಮಾನವ ಬದುಕು ಉಳಿಯಲು ಸಾಧ್ಯವಿದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು. ಅವರು ಸೋಮವಾರ ಪುತ್ತೂರು ನಗರಸಭೆ ಸಹಯೋಗದಲ್ಲಿ ಪರ್ಲಡ್ಕದ ಡಾ.ಶಿವರಾಮ ಕಾರಂತರ ಬಾಲವನದಲ್ಲಿ ನಡೆದ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಗಿಡ ನೆಡುವ ಮೂಲಕ ಉದ್ಘಾಟಿಸಿ ಮಾತನಾಡಿದರು. ನಗರೀಕರಣದ ಬಿರುಸಿನಲ್ಲಿ ಕಾಡುಗಳು ಕಡಿಮೆಯಾಗುತ್ತಿದೆ. ಆದರೆ ಸರ್ಕಾರದ ಕಾನೂನು ಭದ್ರತೆಯ ಕಾರಣದಿಂದಾಗಿ ವೃಕ್ಷಗಳು […]










