ಮಣಿಪುರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಸಿಐಟಿಯು ಆಗ್ರಹ | ತಾಲೂಕು ಆಡಳಿತ ಸೌಧದ ಎದುರು ಪ್ರತಿಭಟನೆ
ಪುತ್ತೂರು: ಮಣಿಪುರ ರಾಜ್ಯದಲ್ಲಿ ಮೀಸಲಾತಿ ಹೆಸರಿನಲ್ಲಿ ಗಲಭೆ ಸೃಷ್ಟಿಸಿ ಚರ್ಚ್ ಹಾಗೂ ಕ್ರಿಶ್ಚಿಯನ್ನರ ಮೇಲಾಗುತ್ತಿರುವ ವ್ಯಾಪಕ ದಾಳಿಯನ್ನು ಖಂಡಿಸಿ, ಮಣಿಪುರದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲು ಒತ್ತಾಯಿಸಿ ತಾಲೂಕು ಸಿಐಟಿಯು ವತಿಯಿಂದ ಪ್ರತಿಭಟನೆ ಮಂಗಳವಾರ ತಾಲೂಕು ಆಡಳಿತ ಸೌಧದ ಎದುರು ನಡೆಯಿತು. ಪ್ರತಿಭಟನೆಯನ್ನುದ್ದೇಶಿಸಿ ಸಿಐಟಿಯು ಮುಖಂಡ, ನ್ಯಾಯವಾದಿ ಬಿ.ಎಂ.ಭಟ್ ಮಾತನಾಡಿ, ಮೀಸಲಾತಿ ಹೆಸರಲ್ಲಿ ಧರ್ಮಗಳ ಮಧ್ಯೆ ಮೈಮನಸ್ಸು ಹುಟ್ಟಿಸಿ ಸಮಾಜದಲ್ಲಿ ಶಾಂತಿ ಕದಡುವುದತ್ತಿರುವುದು ಖಂಡನೀಯವಾಗಿದ್ದು, ಅಲ್ಲಿಯ ಕರ್ಪ್ಯೂ ಹೇರುವ ಮೂಲಕ ಜನತೆಯನ್ನು ಗೃಹಬಂಧನದಲ್ಲಿರಿಸುವಂತೆ ಮಾಡಿದೆ. ಕಳೆದ ಕೊರೋನಾ ಸಂದರ್ಭದಲ್ಲೂ […]









