ಸುದ್ದಿ

ಸ್ನಾಪ್ಚಾಟ್ ಪರಿಚಯದಲ್ಲಿ ಮದುವೆ: ಎರಡೇ ತಿಂಗಳಿಗೆ ಗಂಡನಿಗೆ ಬೇಡವಾದಳು ಹೆಂಡತಿ

ಬೆಂಗಳೂರು: ಸ್ನಾಪ್ಚಾಟ್‌ನಲ್ಲಿ ಆದ ಪರಿಚಯ ಪ್ರೀತಿಗೆ ತಿರುಗಿ ಒಂದು ವರ್ಷದ ಬಳಿಕ ಮದುವೆಯಾಗಿದ್ದ ಜೋಡಿಯ ಸಂಸಾರ ಸೂತ್ರ ಕಳೆದುಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮದುವೆಯಾದ ಎರಡೇ ತಿಂಗಳಿಗೆ ಪತಿ ಚೇತನ್ ಪತ್ನಿ ಬೇಡ ಎಂದು ತಿರಸ್ಕರಿಸಿದ್ದಾನೆ. ಸಂತ್ರಸ್ತ ಪತ್ನಿ ತನಗೆ ಗಂಡ ಬೇಕು ಎಂದು ಪೊಲೀಸ್ ಠಾಣೆಯ ಮೆಟ್ಟಿಲೇರುವಂತಾಗಿದೆ. ಚೇತನ್ ಮತ್ತು ನರ್ಸಿಂಗ್ ಕೆಲಸ ಮಾಡುತ್ತಿದ್ದ ಮಹಿಳೆ ನಡುವೆ ಸ್ನಾಪ್ಚಾಟ್‌ನಲ್ಲಿ ಪರಿಚಯವಾಗಿ, ಪ್ರೇಮವಾಗಿ ಬಳಿಕ ಮದುವೆಯೂ ಆಗಿದ್ದರು. ಮಹಿಳೆಗೆ ತಂದೆ -ತಾಯಿ ಇಬ್ಬರೂ ಇಲ್ಲ. ಆಕೆ ತನ್ನ […]

ಸ್ನಾಪ್ಚಾಟ್ ಪರಿಚಯದಲ್ಲಿ ಮದುವೆ: ಎರಡೇ ತಿಂಗಳಿಗೆ ಗಂಡನಿಗೆ ಬೇಡವಾದಳು ಹೆಂಡತಿ Read More »

ಅಕ್ರಮ ಸಕ್ರಮ ಫಲಾನುಭವಿಗಳಿಂದ ಲಂಚ ಆರೋಪ: ಅಶೋಕ್ ರೈ ಆರೋಪಕ್ಕೆ ‌ಮಠಂದೂರು ತಿರುಗೇಟು

ಪುತ್ತೂರು: ಅಕ್ರಮ ಸಕ್ರಮ ಫಲಾನುಭವಿಗಳಿಂದ ಮಾಜಿ ಶಾಸಕರೊಬ್ಬರು ಲಂಚ ಪಡೆದಿದ್ದಾರೆ ಎನ್ನುವ ಶಾಸಕ ಅಶೋಕ್ ರೈ ಅವರ ಆರೋಪಕ್ಕೆ ಮಾಜಿ ಶಾಸಕ ಸಂಜೀವ ಮಠಂದೂರು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಮಾಜಿ ಶಾಸಕರೊಬ್ಬರು 45 ಜನರಿಂದ ತಲಾ 2 ಲಕ್ಷ ರೂಪಾಯಿ ಲಂಚ ಪಡೆದಿದ್ದಾರೆ ಎಂದು ಶಾಸಕರು ಹಾಗೂ ಅಧ್ಯಾಪಕರೊಬ್ಬರ ಪುತ್ರ ಹೇಳಿಕೆ ನೀಡಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಶಾಸಕರು ಆ ಮಾಜಿ ಶಾಸಕ ಯಾರು ಮತ್ತು ಲಂಚ ನೀಡಿದ ಆ 45 ಜನರು ಯಾರು ಎಂಬುದನ್ನು ಬಹಿರಂಗಪಡಿಸಲಿ ಎಂದು

ಅಕ್ರಮ ಸಕ್ರಮ ಫಲಾನುಭವಿಗಳಿಂದ ಲಂಚ ಆರೋಪ: ಅಶೋಕ್ ರೈ ಆರೋಪಕ್ಕೆ ‌ಮಠಂದೂರು ತಿರುಗೇಟು Read More »

ನಿಂದನೆ ಪ್ರಕರಣ : ಮಹೇಶ್‌ ಶೆಟ್ಟಿ ತಿಮರೋಡಿಗೆ ಷರತ್ತುಬದ್ಧ ಜಾಮೀನು

ವಾರಕ್ಕೊಮ್ಮೆ ಪುತ್ತೂರು ಪೋಲೀಸ್ ಠಾಣೆಯಲ್ಲಿ ಸಹಿ ಹಾಕುವ ಷರತ್ತು ಬೆಳ್ತಂಗಡಿ: ಯಕ್ಷಗಾನ ಕಲಾವಿದ ದಿನೇಶ್ ಕೋಡಪದವು ಅವರ ತಾಯಿಯನ್ನು ನಿಂದಿಸಿದ ಪ್ರಕರಣದಲ್ಲಿ ಮಹೇಶ್‌ ಶೆಟ್ಟಿ ತಿಮರೋಡಿಗೆ ಹೈಕೋರ್ಟ್‌ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ದಿನೇಶ್ ಕೋಡಪದವು ಅವರ ತಾಯಿ ಲೀಲಾವತಿಯವರು ಸಲ್ಲಿಸಿದ್ದ ದೂರಿನ ಮೇಲಿನ ಬಂಧನದ ಭೀತಿಯಲ್ಲಿದ್ದ ಮಹೇಶ್ ಶೆಟ್ಟಿ ತಿಮರೋಡಿಯ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌ ತಿಮರೋಡಿಯವರ ಮಾತಿನ ಬಗ್ಗೆ ಕಟುವಾದ ಟೀಕೆ ಮಾಡಿದೆ. ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯ ಡಾ.ವೀರೇಂದ್ರ ಹೆಗ್ಗಡೆಯವರ

ನಿಂದನೆ ಪ್ರಕರಣ : ಮಹೇಶ್‌ ಶೆಟ್ಟಿ ತಿಮರೋಡಿಗೆ ಷರತ್ತುಬದ್ಧ ಜಾಮೀನು Read More »

ಎಸ್‌ಐಆರ್‌ ಸಿಂಧುತ್ವವನ್ನು ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌

ಚುನಾವಣಾ ಪಟ್ಟಿಯಿಂದ ಹೆಸರು ಕೈಬಿಟ್ಟರೆ ಪೌರತ್ವ ರದ್ದಾಗುವುದಿಲ್ಲ ಎಂಬ ಮಹತ್ವದ ತೀರ್ಪು ನವದೆಹಲಿ: ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಸಿಂಧುತ್ವವನ್ನು ಎತ್ತಿಹಿಡಿದಿರುವ ಸುಪ್ರೀಂ ಕೋರ್ಟ್, ಈ ಪ್ರಕ್ರಿಯೆಯ ಅಡಿಯಲ್ಲಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಡುವುದರಿಂದ ಒಬ್ಬ ವ್ಯಕ್ತಿಯ ಪೌರತ್ವ ನಿರ್ಧಾರವಾಗುವುದಿಲ್ಲ ಎಂದು ಬುಧವಾರ ಸ್ಪಷ್ಟಪಡಿಸಿದೆ. ಎಸ್‌ಐಆರ್ (SIR) ಪ್ರಕ್ರಿಯೆಯಡಿ ನಡೆಸಲಾಗುವ ತನಿಖೆಯು ಪೌರತ್ವವನ್ನು ನಿರ್ಣಯಿಸುವುದಕ್ಕಾಗಿ ಅಲ್ಲ, ಬದಲಿಗೆ ಅದು ಕೇವಲ ಚುನಾವಣೆಯಲ್ಲಿ ಭಾಗವಹಿಸುವುದಕ್ಕೆ (ಮತದಾನದ ಹಕ್ಕಿಗೆ) ಮಾತ್ರ ಸೀಮಿತವಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು

ಎಸ್‌ಐಆರ್‌ ಸಿಂಧುತ್ವವನ್ನು ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌ Read More »

ಬೈಜುಸ್ ಕಂಪನಿಯ ಸ್ಥಾಪಕ ಬೈಜು ರವೀಂದ್ರನ್‌ಗೆ ಜೈಲು ಶಿಕ್ಷೆ

ಹೂಡಿಕೆದಾರರ ಹಣ ದುರುಪಯೋಗಪಡಿಸಿಕೊಂಡ ಪ್ರಕರಣ ಸಿಂಗಾಪುರ: ಬೈಜುಸ್ ಕಂಪನಿಯ ಸಂಸ್ಥಾಪಕ ಬೈಜು ರವೀಂದ್ರನ್ ಅವರಿಗೆ ಸಿಂಗಾಪುರ ನ್ಯಾಯಾಲಯ 6 ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ಕತಾರ್ ಇನ್ವೆಸ್ಟ್‌ಮೆಂಟ್ ಅಥಾರಿಟಿಯ (QIA) ಅಂಗಸಂಸ್ಥೆಯಾದ ಕತಾರ್ ಹೋಲ್ಡಿಂಗ್‌ (Qatar Holding LLC) ಒಪ್ಪಂದ ಉಲ್ಲಂಘನೆ ಮತ್ತು ವಂಚನೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಆದೇಶ ಪ್ರಕಟವಾಗಿದೆ. ಆಸ್ತಿ ವಿವರಗಳಿಗೆ ಸಂಬಂಧಿಸಿದಂತೆ ಏಪ್ರಿಲ್ 2024 ರಿಂದ ನ್ಯಾಯಾಲಯ ನೀಡಿದ್ದ ಹಲವು ಆದೇಶಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಇವರಿಗೆ ಶಿಕ್ಷೆ ವಿಧಿಸಲಾಗಿದೆ. ರವೀಂದ್ರನ್ ಅವರು ಯಾವುದೇ

ಬೈಜುಸ್ ಕಂಪನಿಯ ಸ್ಥಾಪಕ ಬೈಜು ರವೀಂದ್ರನ್‌ಗೆ ಜೈಲು ಶಿಕ್ಷೆ Read More »

ಹೌಸ್‌ಪಾರ್ಟಿ ಮದ್ಯದ ಪರ್ಮಿಟ್‌ ಶುಲ್ಕ ಏರಿಕೆ

ಮೆಹಂದಿ, ಬರ್ತ್‌ಡೇಯಂಥ ಹೌಸ್‌ ಪಾರ್ಟಿಗಳ ಮದ್ಯದ ಪರ್ಮಿಟ್‌ ಶುಲ್ಕ ದುಪ್ಪಟ್ಟು ಬೆಂಗಳೂರು : ಬರ್ತ್​ ಡೇ, ಮೆಹಂದಿ, ಮದುವೆ, ಗೆಟ್-ಟು-ಗೆದರ್ ಎಂದು ಮನೆಯಲ್ಲಿ ಪಾರ್ಟಿಗಳಲ್ಲಿ ಮದ್ಯ ಸರಬರಾಜು ಮಾಡಲು ನೀಡಲಾಗುವ ತಾತ್ಕಾಲಿಕ ಮದ್ಯದ ಪರ್ಮಿಟ್ (CL-5 ಲೈಸೆನ್ಸ್) ಶುಲ್ಕವನ್ನು ಸರ್ಕಾರ ಬಹುತೇಕ ದುಪ್ಪಟ್ಟು ಮಾಡಿದೆ. ಆರ್ಥಿಕ ಇಲಾಖೆ ಹೊರಡಿಸಿರುವ ಹೊಸ ನಿಯಮಗಳ ಪ್ರಕಾರ ವಾಣಿಜ್ಯೇತರ ಮತ್ತು ವಾಣಿಜ್ಯ ಉದ್ದೇಶದ ಪಾರ್ಟಿಗಳ ಮದ್ಯದ ಪರ್ಮಿಟ್ ದರಗಳನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ. ಹೌಸ್ ಪಾರ್ಟಿಗಳಲ್ಲಿ ಇದುವರೆಗೆ ಪ್ರತಿದಿನಕ್ಕೆ 11,500 ರೂ.

ಹೌಸ್‌ಪಾರ್ಟಿ ಮದ್ಯದ ಪರ್ಮಿಟ್‌ ಶುಲ್ಕ ಏರಿಕೆ Read More »

ಕೇರಳದ ಮಾಜಿ ಸಿಎಂ ಪಿಣರಾಯಿ ವಿಜಯನ್ ಮನೆ ಮೇಲೆ ಇ.ಡಿ.ದಾಳಿ

ಮಾಜಿ ಸಿಎಂ ಮಗಳು, ಅಳಿಯನಿಗೂ ಇ.ಡಿ. ದಾಳಿಯ ಶಾಕ್‌ ತಿರುವನಂತಪುರಂ: ಕೇರಳದ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರಿಗೆ ಅಧಿಕಾರದಿಂದ ನಿರ್ಗಮಿಸಿದ ಬೆನ್ನಿಗೆ ಇ.ಡಿ. ದಾಳಿಯ ಬಿಸಿ ತಟ್ಟಿದೆ. ಕೊಚ್ಚಿನ್ ಮಿನರಲ್ಸ್ ಆಂಡ್ ರುಟೈಲ್ ಲಿಮಿಟೆಡ್ (CMRL) ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದ ಮನಿ ಲಾಂಡರಿಂಗ್ (ಅಕ್ರಮ ಹಣ ವರ್ಗಾವಣೆ) ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ಬುಧವಾರ ಕೇರಳದಾದ್ಯಂತ 10 ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ನಿವಾಸ ಹಾಗೂ

ಕೇರಳದ ಮಾಜಿ ಸಿಎಂ ಪಿಣರಾಯಿ ವಿಜಯನ್ ಮನೆ ಮೇಲೆ ಇ.ಡಿ.ದಾಳಿ Read More »

ಪ್ರೀತಿಸುವ ನಾಟಕವಾಡಿ ಅತ್ಯಾಚಾರ ಎಸಗಿ ಆಭರಣ ದೋಚಿದ ಯುವಕರು

ಸೋಷಿಯಲ್‌ ಮೀಡಿಯಾ ಮೂಲಕ ಪರಿಚಯವಾದ ಯುವಕರಿಂದ ಯುವತಿಗೆ ಮೋಸ ಉಡುಪಿ: ಪ್ರೀತಿಸುವ ನಾಟಕವಾಡಿ ಅಪ್ರಾಪ್ತ ವಯಸ್ಸಿನ ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದಲ್ಲದೆ ಆಕೆಯನ್ನು ಬ್ಲ್ಯಾಕ್‌ಮೇಲ್‌ ಮಾಡಿ ಮನೆಯಿಂದ ಲಕ್ಷಗಟ್ಟಲೆ ಬೆಲೆಬಾಳುವ ಆಭರಣಗಳನ್ನು ತರಿಸಿಕೊಂಡು ವಂಚಿಸಿದ ಇಬ್ಬರು ಪಾತಕಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕುಂದಾಪುರ ಸಮೀಪದ ತೆಕ್ಕಟ್ಟೆ ಕುಂಭಾಶಿಯ ಜಿತೇಂದ್ರ ಶೆಟ್ಟಿ (25) ಹಾಗೂ ಕುರ್ವಾಡಿಯ ಸುಶಾನ್‌ ಪೂಜಾರಿ ಬಂಧಿತ ಪಾತಕಿಗಳು. ಅವರ ವಿರುದ್ಧ ಪೋಕ್ಸೋ, ಜೇವ ಬೆದರಿಕೆ ಮತ್ತು ವಂಚನೆ ಪ್ರಕರಣಗಳನ್ನು ದಾಖಲಿಸಲಾಗಿದೆ. ಮಲ್ಪೆಯ ಕೊಡವೂರಿನ 17ರ ಹರೆಯದ

ಪ್ರೀತಿಸುವ ನಾಟಕವಾಡಿ ಅತ್ಯಾಚಾರ ಎಸಗಿ ಆಭರಣ ದೋಚಿದ ಯುವಕರು Read More »

ಮಧ್ಯರಾತ್ರಿ ಸಿಎಂ ನಿವಾಸದಲ್ಲಿ ಸಿದ್ದರಾಮಯ್ಯ ಆಪ್ತರ ಸಭೆ

ಕ್ಷಣಕ್ಷಣಕ್ಕೆ ಕುತೂಹಲ ಕೆರಳಿಸುತ್ತಿರುವ ರಾಜಕೀಯ ವಿದ್ಯಮಾನ ಬೆಂಗಳೂರು: ದೆಹಲಿಯಿಂದ ವಿಶೇಷ ವಿಮಾನದಲ್ಲಿ ನಿನ್ನೆ ರಾತ್ರಿ ವಾಪಸ್ ಆದ ಬೆನ್ನಲ್ಲೇ ಮುಖ್ಯಮಂತ್ರಿಗಳ ಸರ್ಕಾರಿ ನಿವಾಸ ‘ಕಾವೇರಿ’ಯಲ್ಲಿ ತಡರಾತ್ರಿ ಸಣ್ಣ ಸಭೆ ನಡೆದಿದೆ. ಮಧ್ಯರಾತ್ರಿ 12 ಗಂಟೆಗೆ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಿದ್ದರಾಮಯ್ಯನವರನ್ನು ಸಚಿವರಾದ ಕೃಷ್ಣಬೈರೇಗೌಡ ಹಾಗೂ ದಿನೇಶ್ ಗುಂಡೂರಾವ್ ಬರಮಾಡಿಕೊಂಡರು. ನಂತರ ಮುಖ್ಯಮಂತ್ರಿಗಳ ಕಾರಿನಲ್ಲೇ ಸಚಿವ ಜಮೀರ್ ಅಹಮದ್ ಖಾನ್ ಮತ್ತು ಶಾಸಕ ಪೊನ್ನಣ್ಣ ಅವರು ಸಿಎಂ ನಿವಾಸಕ್ಕೆ ಆಗಮಿಸಿದರು. ಸಿಎಂ ಮನೆಗೆ ಬಂದ ನಂತರ ಗೃಹ

ಮಧ್ಯರಾತ್ರಿ ಸಿಎಂ ನಿವಾಸದಲ್ಲಿ ಸಿದ್ದರಾಮಯ್ಯ ಆಪ್ತರ ಸಭೆ Read More »

ಚಿಪ್ಸ್‌, ಪಫ್ಸ್‌ಗಳಲ್ಲೂ ಇದೆ ಕ್ಯಾನ್ಸರ್‌ಕಾರಕ ಅಂಶ!

ಬೇಕರಿ ತಿನಿಸುಗಳಲ್ಲಿ ವ್ಯಾಪಕವಾಗಿ ರಾಸಾಯನಿಕ ಬಳಸುತ್ತಿರುವುದು ಪತ್ತೆ ಬೆಂಗಳೂರು : ರಾಜ್ಯಾದ್ಯಂತ ಮಾರಾಟವಾಗುತ್ತಿರುವ ವಿವಿಧ ಬೇಕರಿ ಉತ್ಪನ್ನಗಳು ಹಾಗೂ ಚಿಪ್ಸ್‌ಗಳು ಮನುಷ್ಯನ ಬಳಕೆಗೆ ಯೋಗ್ಯವಾಗಿಲ್ಲ ಎಂದು ಕರ್ನಾಟಕ ರಾಜ್ಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಅಧಿಕೃತವಾಗಿ ಘೋಷಿಸಿದೆ. ಆಕರ್ಷಣೆಗಾಗಿ ಸಿಹಿತಿಂಡಿಗಳು, ಪಫ್ಸ್‌, ಚಿಪ್ಸ್‌ಮುಂತಾದ ತಿನಿಸುಗಳಲ್ಲಿ ಮಿತಿಮೀರಿ ವಿಷಕಾರಿ ಹಾಗೂ ಕ್ಯಾನ್ಸರ್‌ಕಾರಕ ರಾಸಾಯನಿಕ ಬಣ್ಣಗಳನ್ನು ಬಳಸುತ್ತಿರುವುದು ಇಲಾಖೆಯ ಪ್ರಯೋಗಾಲಯದ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಆಹಾರ ಸುರಕ್ಷತಾ ಅಧಿಕಾರಿಗಳು ರಾಜ್ಯದ ಮೂಲೆ ಮೂಲೆಗಳ ಬೇಕರಿಗಳಿಂದ ಬರೋಬ್ಬರಿ 35,639 ಆಹಾರದ ಮಾದರಿಗಳನ್ನು

ಚಿಪ್ಸ್‌, ಪಫ್ಸ್‌ಗಳಲ್ಲೂ ಇದೆ ಕ್ಯಾನ್ಸರ್‌ಕಾರಕ ಅಂಶ! Read More »

error: Content is protected !!
Scroll to Top