ನಿಧನ

ತಾಯಿಯೊಂದಿಗೆ ಬಟ್ಟೆ ಖರೀದಿಗೆ ಹೋಗಿದ್ದ ಹುಡುಗ ವಿದ್ಯುತ್ ತಂತಿ ಸ್ಪರ್ಶದಿಂದ ಸಾವು

ಬೆಂಗಳೂರು: ತಾಯಿಯೊಂದಿಗೆ ಬಟ್ಟೆ ಖರೀದಿಸಲು ಬಂದು ಬೈಕ್ ಪಾರ್ಕ್ ಮಾಡುವ ಸಂದರ್ಭದಲ್ಲಿ ವಿದ್ಯುತ್ ತಂತಿ ಬಿದ್ದು ಶಾಕ್ ಹೊಡೆದು ಮಗ ಮೃತಪಟ್ಟಿದ್ದು, ಇದನ್ನು ಕಂಡ ತಾಯಿ ಕುಸಿದು ಬಿದ್ದು ಆಸ್ಪತ್ರೆ ಸೇರಿದ ಹೃದಯ ವಿದ್ರಾವಕ ಘಟನೆ ಶಿವಾಜಿನಗರದಲ್ಲಿ ನಡೆದಿದೆ. ಮೃತನನ್ನು ‌ಸಯ್ಯದ್ ಸುಫಿಯಾನ್ (17) ಎಂದು ಗುರುತಿಸಲಾಗಿದೆ. ಮಗನ ಸಾವನ್ನು ಕಣ್ಣಾರೆ ಕಂಡು ಅನಾರೋಗ್ಯಕ್ಕೆ ತುತ್ತಾದ ತಾಯಿ ಉಮೇ ‌ಸಲ್ಮಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದ್ವಿತೀಯ ಪಿಯುಸಿ‌ಗೆ ಕಾಲೇಜಿಗೆ ಹೋಗಲು ಬಟ್ಟೆ ಖರೀದಿಗೆಂದು ಆತ ತಾಯಿಯ ಜೊತೆಗೆ […]

ತಾಯಿಯೊಂದಿಗೆ ಬಟ್ಟೆ ಖರೀದಿಗೆ ಹೋಗಿದ್ದ ಹುಡುಗ ವಿದ್ಯುತ್ ತಂತಿ ಸ್ಪರ್ಶದಿಂದ ಸಾವು Read More »

ಕೊಳೆತು ನಾರುತ್ತಿದ್ದ ‌ಸ್ಥಿತಿಯಲ್ಲಿ ಒಂಟಿ ಮಹಿಳೆಯ ಶವ ಪತ್ತೆ

ಉಪ್ಪಿನಂಗಡಿ: ಒಂಟಿಯಾಗಿ ವಾಸ ಮಾಡುತ್ತಿದ್ದ ಮಹಿಳೆಯೊಬ್ಬರು ಕೆಲ ದಿನಗಳ ಹಿಂದೆಯೇ ಮೃತಪಟ್ಟಿದ್ದು, ಜನಗಣತಿ ಲೆಕ್ಕ ತೆಗೆಯಲು ಮನೆಯತ್ತ ಜನರು ಬಂದಾಗಲೇ ‌ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾದ ಘಟನೆ ನಡೆದಿದೆ. ಮೃತರನ್ನು ಇಳಂತಿಲದ ನೇಜಿಕಾರ್ ನಿವಾಸಿ ಸುಂದರಿ(65) ಎಂದು ಗುರುತಿಸಲಾಗಿದೆ. ಎ. 14 ರಂದು ಸುಂದರಿ ಅವರನ್ನು ಸಾರ್ವಜನಿಕರು ನೋಡಿದ್ದರು. ಆ ಬಳಿಕ ಅವರನ್ನು ಯಾರೂ ನೋಡಿರಲಿಲ್ಲ. ಎ. 18 ರಂದು ಜನಗಣತಿಯ ಹಿನ್ನೆಲೆ ಒಬ್ಬರು ಅವರ ಮನೆಯತ್ತ ಹೋಗಿದ್ದಾರೆ. ಈ ವೇಳೆ ಮನೆಯ ಬಾಗಿಲು ತೆರೆದೇ

ಕೊಳೆತು ನಾರುತ್ತಿದ್ದ ‌ಸ್ಥಿತಿಯಲ್ಲಿ ಒಂಟಿ ಮಹಿಳೆಯ ಶವ ಪತ್ತೆ Read More »

ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಶಿಕ್ಷಕಿ

ಮಡಿಕೇರಿ: ಕೋವಿಯಿಂದ ಗುಂಡು ಹೊಡೆದುಕೊಂಡು ಶಿಕ್ಷಕಿಯೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ಚೇರಂಬಾಣೆ ಗ್ರಾಮದಲ್ಲಿ ನಡೆದಿದೆ. ಚೇರಂಬಾಣೆ ಗ್ರಾಮದಲ್ಲಿ ಸರ್ಕಾರಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ರೋಹಿಣಿ(51) ಎಂಬವರೇ ಕೋವಿಯಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಮಹಿಳೆ. ಜೀವನದಲ್ಲಿ ಜಿಗುಪ್ಸೆ ಹೊಂದಿ ಅವರು ಈ ಕೃತ್ಯ ಎಂದಿದ್ದಾರೆ ಎಂದು ತಿಳಿದು ಬಂದಿದೆ. ಪ್ರಕರಣಕ್ಕೆ ‌ಸಂಬಂಧಿಸಿದ ಹಾಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಶಿಕ್ಷಕಿ Read More »

ಕಾಣೆಯಾಗಿದ್ದ ಉಪನ್ಯಾಸಕನ ‌ಶವ ಬಾವಿಯಲ್ಲಿ ಪತ್ತೆ

ಉಡುಪಿ: ನಾಪತ್ತೆಯಾಗಿದ್ದ ಉಪನ್ಯಾಸಕರೊಬ್ಬರ ಮೃತದೇಹ ಮನೆಯ ಬಾವಿಯಲ್ಲಿ ಪತ್ತೆಯಾಗಿದೆ. ಅವರು ಬಾವಿಗೆ ಹಾರಿ ಮೃತಪಟ್ಟಿರುವುದಾಗಿ ಹೇಳಲಾಗುತ್ತಿದೆ. ಉಡುಪಿಯ ಸಂಸ್ಕೃತ ಕಾಲೇಜಿನ ಉಪನ್ಯಾಸಕ ಶಿರಸಿಯ ಗಣೇಶ್ ಭಟ್ (55) ಎಂಬವರೇ ಮೃತರು. ಇವರು ಅವಿವಾಹಿತರಾಗಿದ್ದು, ಎಂ.ಜಿ.ಎಂ. ಕಾಲೇಜಿನ ಸಮೀಪದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಅವರು ನಾಪತ್ತೆಯಾದ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಶವವನ್ನು ಅಗ್ನಿಶಾಮಕ ದಳ ಬಾವಿಯಿಂದ ಮೇಲೆತ್ತಿದೆ. ಉಡುಪಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಕಾಣೆಯಾಗಿದ್ದ ಉಪನ್ಯಾಸಕನ ‌ಶವ ಬಾವಿಯಲ್ಲಿ ಪತ್ತೆ Read More »

ವಿದ್ಯುತ್ ತಂತಿ ತಗುಲಿದ ಪರಿಣಾಮ ಬಾಲಕನ ಸಾವು

ಪುತ್ತೂರು: ಬಾಲಕನೊಬ್ಬ ವಿದ್ಯುತ್ ತಂತಿ ತಗುಲಿ ಮೃತಪಟ್ಚ ಘಟನೆ ಗಡಿಯಾರ ಎಂಬಲ್ಲಿ ನಡೆದಿದೆ. ಮೃತನನ್ನು ನೇರಳಕಟ್ಟೆ ‌ಕೊಡಾಜೆಯ ಶಹೀರ್(15) ಎಂದು ಗುರುತಿಸಲಾಗಿದೆ. ನೇರಳಕಟ್ಟೆಯ ಗಣೇಶ್ ನಗರದ ಫ್ಲಾಟ್ ಒಂದರಲ್ಲಿ ಬಾಲಕ ಹೆತ್ತವರ ಜೊತೆಗೆ ವಾಸವಾಗಿದ್ದು, ಶಾಲೆಗೆ ರಜೆಯಾದ ಕಾರಣ ಗಡಿಯಾರದಲ್ಲಿರುವ ‌ತನ್ನ ಅಜ್ಜನ ಮನೆಗೆ ತೆರಳಿದ್ದ. ಇಂದು ಬೆಳಗ್ಗೆ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿದ ಪರಿಣಾಮ ಆತ‌ ಸಾವನ್ನಪ್ಪಿದ್ದಾನೆ.

ವಿದ್ಯುತ್ ತಂತಿ ತಗುಲಿದ ಪರಿಣಾಮ ಬಾಲಕನ ಸಾವು Read More »

ಪ್ರವಾಸಕ್ಕೆ ಗೆಳೆಯರ ಜೊತೆಗೆ ಮಲ್ಪೆಗೆ ಬಂದ ವ್ಯಕ್ತಿ ಸಾವು

ಉಡುಪಿ: ಪ್ರವಾಸಕ್ಕೆಂದು ಮಲ್ಪೆಗೆ ಬಂದಿದ್ದ ವ್ಯಕ್ತಿಯೊಬ್ಬರು ಹೊಟೇಲ್ ರೂಮಿನಲ್ಲೇ ‌ಮೃತಪಟ್ಟ ಘಟನೆ ನಡೆದಿದೆ. ಬೆಂಗಳೂರಿನ ಅನೇಕಲ್ ‌ನಿವಾಸಿ ಧನಂಜಯ್ ಕೆ. ಎನ್. (37) ಎನ್ನುವವರೇ ಮೃತ ದುರ್ದೈವಿ. ಇವರು ಸುಮಾರು 4 ವರ್ಷಗಳಿಂದಲೂ ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ. ಇವರು ಎ. 19 ರಂದು ತಮ್ಮ ಗೆಳೆಯರ ಜೊತೆಗೆ ಮಲ್ಪೆಗೆ ‌ಪ್ರವಾಸಕ್ಕೆ ಬಂದಿದ್ದಾರೆ. ಎ. 20 ರಂದು ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ಕೊಠಡಿಯಲ್ಲೇ ಮೃತ ಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಮಲ್ಪೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರವಾಸಕ್ಕೆ ಗೆಳೆಯರ ಜೊತೆಗೆ ಮಲ್ಪೆಗೆ ಬಂದ ವ್ಯಕ್ತಿ ಸಾವು Read More »

ಮಾವ – ಅಳಿಯ ಕೆರೆಯಲ್ಲಿ ಮುಳುಗಿ ಸಾವು

ಹಾಸನ: ಜಿಲ್ಲೆಯ ಅರಸೀಕೆರೆಯ ಎನ್ ಹೊಸಳ್ಳಿ ಗ್ರಾಮದಲ್ಲಿ ಮಾವ ಮತ್ತು ಅಳಿಯ ಕೆರೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ‌ಮಾವ ಪ್ರಭಾಕರ್ (45) ಮತ್ತು ಪ್ರತೀಕ್ (12) ಎಂದು ಗುರುತಿಸಲಾಗಿದೆ. ಸೋಮನಹಳ್ಳಿಯ ಪ್ರತೀಕ್ ಬೇಸಿಗೆ ರಜೆಯ ಪ್ರಯುಕ್ತ ಮಾವ ಪ್ರಭಾಕರ್ ಅವರ ಮನೆಗೆ ಬಂದಿದ್ದ. ಮಾವ ಮತ್ತು ಅಳಿಯ ಕೆರೆಯ ಏರಿ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ ಅಳಿಯ ಪ್ರತೀಕ್ ಕಾಲು ಜಾರಿ ಕೆರೆಗೆ ಬಿದ್ದಿದ್ದಾನೆ. ಆತನ ರಕ್ಷಣೆಗೆ ಪ್ರಭಾಕರ್ ಸಹ ನೀರಿಗೆ ಇಳಿದಿದ್ದು, ಈಜು ಬಾರದ

ಮಾವ – ಅಳಿಯ ಕೆರೆಯಲ್ಲಿ ಮುಳುಗಿ ಸಾವು Read More »

ಕಾಡುಕೋಣ ದಾಳಿಗೆ ಯುವಕ ಸಾವು

ಕಳಸ: ಕಾಡುಕೋಣ ದಾಳಿ ನಡೆಸಿದ ಪರಿಣಾಮ ಯುವಕನೊಬ್ಬ ಮೃತಪಟ್ಟ ಘಟನೆ ಕಳಸದ ‌ಮೈದಾಡಿ ಎಸ್ಟೇಟ್‌ನಲ್ಲಿ ನಡೆದಿದೆ. ಚೇತನ್ (30) ಎಂಬ ಯುವಕನೇ ಮೃತ ದುರ್ದೈವಿ. ದಾಳಿಯಲ್ಲಿ ಕಾಡುಕೋಣದ ಕೊಂಬು ಚೇತನ್ ಅವರ ಎದೆಗೆ ಗಂಭೀರ ಪ್ರಮಾಣದಲ್ಲಿ ತಾಗಿದೆ. ಅವರನ್ನು ಕಳಸದ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಯಿತಾದರೂ, ಚಿಕಿತ್ಸೆ ಫಲಿಸದೆ ಮೃತಪಟ್ಟಿರುವುದಾಗಿದೆ. ಮೃತ ಯುವಕನ ಕುಟುಂಬಸ್ಥರ ಆಕ್ರಂದನ ಮನಕಲಕುವಂತಿತ್ತು. ಕಳಸ ಭಾಗದಲ್ಲಿ ಕಾಡುಕೋಣಗಳ ಹಾವಳಿ ಜಾಸ್ತಿಯಾಗಿದ್ದು, ಇದು ಸಾರ್ವಜನಿಕರ ಆತಂಕ ಹೆಚ್ಚಿಸಿದೆ.

ಕಾಡುಕೋಣ ದಾಳಿಗೆ ಯುವಕ ಸಾವು Read More »

ಕುರಿ ತೊಳೆಯಲು ಹೋದ ಸಹೋದರರು ಕೆರೆಗೆ ಬಿದ್ದು ಮೃತ್ಯು

ಹಾಸನ: ಇಬ್ಬರು ಸಹೋದರರು ಕುರಿಯನ್ನು ತೊಳೆಯುವುದಕ್ಕಾಗಿ ಕೆರೆಗೆ ಇಳಿದಿದ್ದು, ಮುಳುಗಿ ಸಾವನ್ನಪ್ಪಿದ ಘಟನೆ ಅರಸೀಕೆರೆಯ ಜಾವಗಲ್‌ನಲ್ಲಿ ನಡೆದಿದೆ. ಮೃತ ಬಾಲಕರನ್ನು ಯಾಸಿನ್(13) ಮತ್ತು ಇಮ್ರಾನ್(15) ಎಂದು ಗುರುತಿಸಲಾಗಿದೆ. ಎಂಟು ಮತ್ತು ಹತ್ತನೇ ತರಗತಿಯಲ್ಲಿ ಈ ಇಬ್ಬರು ಬಾಲಕರು ಕಲಿಯುತ್ತಿದ್ದರು. ಬೇಸಿಗೆ ರಜೆಯಾದ್ದರಿಂದ ಇವರಿಬ್ಬರೂ ತಮ್ಮ ಕುರಿಗಳನ್ನು ತೊಳೆಯಲು ಜಾವಗಲ್ ದೊಡ್ಡಕೆರೆಗೆ ತೆರಳಿದ್ದರು. ಆಕಸ್ಮಿಕವಾಗಿ ಕಾಲು ಜಾರಿ ಕೆರೆಯ ಆಳವಾದ ಭಾಗಕ್ಕೆ ಬಿದ್ದು ಮೃತ ಪಟ್ಟಿದ್ದಾರೆ. ಒಬ್ಬರನ್ನೊಬ್ಬರು ರಕ್ಷಿಸುವ ಪ್ರಯತ್ನ ಮಾಡಿದ ಅವರು ಕೊನೆಗೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವುದಾಗಿದೆ.

ಕುರಿ ತೊಳೆಯಲು ಹೋದ ಸಹೋದರರು ಕೆರೆಗೆ ಬಿದ್ದು ಮೃತ್ಯು Read More »

ಮಧುರ ಕಂಠದ ಗಾಯಕಿ ಆಶಾ ಭೋಸ್ಲೆ ‌ನಿಧನ: ಪ್ರಧಾನಿ ಮೋದಿ ಸಂತಾಪ

ಮುಂಬೈ: ನಗರದ ಖಾಸಗಿ ಆಸ್ಪತ್ರೆಯಲ್ಲಿ ಖ್ಯಾತ ಗಾಯಕಿ ಆಶಾ ಭೋಸ್ಲೆ ಅವರು ಕೊನೆಯುಸಿರೆಳೆದಿದ್ದಾರೆ. ಕಳೆದ ಶನಿವಾರದಂದು ಅವರಿಗೆ ಹೃದಯಾಘಾತವಾಗಿತ್ತು. ಅವರನ್ನು ತಕ್ಷಣವೇ ಮುಂಬೈನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿತ್ತು.ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತ ಪಟ್ಟಿದ್ದಾರೆ. ಹೆಸರಾಂತ ಗಾಯಕಿ ಆಶಾ ಭೋಸ್ಲೆ ‌ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ. ಬೋಸ್ಲೆ ಅವರ ದಶಕಗಳ ಕಾಲದ ಸಂಗೀತ ಪ್ರಯಾಣವು ದೇಶದ ಸಾಂಸ್ಕೃತಿಕ ಪರಂಪರೆಯನ್ನು ಶ್ರೀಮಂತಗೊಳಿಸಿದೆ. ಭಾರತ ಕಂಡ ಅತ್ಯಂತ ಪ್ರತಿಮಾರೂಪದ ಮತ್ತು ಬಹುಮುಖ ಪ್ರತಿಭೆಯ

ಮಧುರ ಕಂಠದ ಗಾಯಕಿ ಆಶಾ ಭೋಸ್ಲೆ ‌ನಿಧನ: ಪ್ರಧಾನಿ ಮೋದಿ ಸಂತಾಪ Read More »

error: Content is protected !!
Scroll to Top