ಕಾಣೆಯಾಗಿದ್ದ ಉಪನ್ಯಾಸಕನ ಶವ ಬಾವಿಯಲ್ಲಿ ಪತ್ತೆ
ಉಡುಪಿ: ನಾಪತ್ತೆಯಾಗಿದ್ದ ಉಪನ್ಯಾಸಕರೊಬ್ಬರ ಮೃತದೇಹ ಮನೆಯ ಬಾವಿಯಲ್ಲಿ ಪತ್ತೆಯಾಗಿದೆ. ಅವರು ಬಾವಿಗೆ ಹಾರಿ ಮೃತಪಟ್ಟಿರುವುದಾಗಿ ಹೇಳಲಾಗುತ್ತಿದೆ. ಉಡುಪಿಯ ಸಂಸ್ಕೃತ ಕಾಲೇಜಿನ ಉಪನ್ಯಾಸಕ ಶಿರಸಿಯ ಗಣೇಶ್ ಭಟ್ (55) ಎಂಬವರೇ ಮೃತರು. ಇವರು ಅವಿವಾಹಿತರಾಗಿದ್ದು, ಎಂ.ಜಿ.ಎಂ. ಕಾಲೇಜಿನ ಸಮೀಪದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಅವರು ನಾಪತ್ತೆಯಾದ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಶವವನ್ನು ಅಗ್ನಿಶಾಮಕ ದಳ ಬಾವಿಯಿಂದ ಮೇಲೆತ್ತಿದೆ. ಉಡುಪಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಕಾಣೆಯಾಗಿದ್ದ ಉಪನ್ಯಾಸಕನ ಶವ ಬಾವಿಯಲ್ಲಿ ಪತ್ತೆ Read More »










