ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ | ಬಂಡಾಯ ಅಭ್ಯರ್ಥಿಗಳಿಗೇ ಗೆಲುವು | ಸಹಕಾರ ಭಾರತಿ ತಂಡಕ್ಕೆ ಮುಖಭಂಗ

ಕಡಬ: ಆಲಂಕಾರು ಕೃಷಿಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಕೊನೆಗೂ ಸಹಕಾರ ಭಾರತಿ ವಿರುದ್ಧದ ಬಂಡಾಯ ಎದ್ದ ತಂಡ ಜಯಗಳಿಸುವ ಮೂಲಕ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿಗಳಿಗೆ ಮುಖಭಂಗ ಉಂಟಾಗಿದೆ.

ಇದೀಗ ನ್ಯಾಯಾಲಯದ ಆದೇಶದ ಅರ್ಹ ಮತದಾರರ ಮತದಾನದ ಹೊರತಾಗಿ ರಮೇಶ್ ಭಟ್ ಉಪ್ಪಂಗಳ ನೇತೃತ್ವದ ಸಹಕಾರಿ ಬಳಗ ಜಯಭೇರಿ ಭಾರಿಸಿದ್ದು ಹನ್ನೆರಡು ಸ್ನಾನಗಳ ಪೈಕಿ ಹತ್ತರಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದೆ. ಆದರೆ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಕೇವಲ ಎರಡು ಸ್ನಾನಗಳಲ್ಲಿ ಜಯ ಸಾಧಿಸಿ ತೀವ್ರ ಮುಖಭಂಗ ಅನುಭವಿಸಿತು.

ಭಾರೀ ಜಿದ್ದಾಜಿದ್ದಿನ ಹೋರಾಟದಲ್ಲಿ ಬಿಜೆಪಿಯಿಂದ ಸಿಡಿದೆದ್ದಿರುವ ರಮೇಶ್ ಭಟ್ ಉಪ್ಪಂಗಳ ಬಳಗ ಮೇಲುಗೈ ಸಾಧಿಸಿದರೂ ಸಂಘದ ಸದಸ್ಯರೊಬ್ಬರು ನ್ಯಾಯಾಲಯದಿಂದ ಸುಮಾರು 440 ಅನರ್ಹ ಮತದಾರರಿಗೆ ಮತದಾನಕ್ಕೆ ಅರ್ಹತೆ ಪಡೆದು ಬಂದು ಮತದಾನಕ್ಕೆ ಅವಕಾಶ ದೊರೆತಿರುವುದುರಿಂದ ಸಹಕಾರ ಭಾರತಿ ಅಲ್ಲಿ ಮುನ್ನಡೆಯನ್ನು ಕಾಯ್ದುಕೊಂಡು ನ್ಯಾಯಾಲಯದಲ್ಲಿ ಗೆಲುವು ಸಾಧಿಸುವ ಇಂಗಿತ ವ್ಯಕ್ತಪಡಿಸಿದೆ. ಸಂಘದಿಂದ ಅರ್ಹ ಮತದಾರರಿಗೆ ನಡೆದ ಮತದಾನ ಹಾಗೂ ನ್ಯಾಯಲಯದಿಂದ ಅರ್ಹತೆ ಪಡೆದು ನಡೆದ ಮತದಾನದ ಒಟ್ಟು ಮತಗಳ ಕ್ರೂಢೀಕರಣವಾದರೆ ಸಹಕಾರ ಭಾರತಿ ಮೇಲುಗೈ ಸಾಧಿಸಲಿದೆ ಎನ್ನುವ ಲೆಕ್ಕಚಾರ ನಡೆಯುತ್ತಿದೆ.

































 
 

ರಮೇಶ್ ಭಟ್ ಉಪ್ಪಂಗಳ ಸಹಕಾರಿ ಬಳಗದಿಂದ ಸಾಮಾನ್ಯ ಕ್ಷೇತ್ರದಿಂದ ರಮೇಶ್ ಭಟ್ ಉಪ್ಪಂಗಳ, ಪದ್ಮಪ್ಪ ಗೌಡ ಕೆ., ದಯಾನಂದ ರೈ ಮನವಳಿಕೆ, ಕೇಶವ ಗೌಡ ಆಲಡ್ಕ, ಉದಯ ಎಸ್ ಸಾಲ್ಯಾನ್, ಸಾಲಗಾರ ಮಹಿಳಾ ಮೀಸಲು ಕ್ಷೇತ್ರದಿಂದ ರತ್ನಾ ಬಿ.ಕೆ., ಹಿಂದುಳಿದ ವರ್ಗ ಎ ಮೀಸಲು ಕ್ಷೇತ್ರದಿಂದ ವಿಜಯ ಎಸ್., ಹಿಂದುಳಿದ ವರ್ಗ ಬಿ ಮೀಸಲು ಕ್ಷೇತ್ರದಿಂದ ಪದ್ಮಪ್ಪ ಗೌಡ ಕೆ, ಪರಿಶಿಷ್ಟ, ಜಾತಿ ಕ್ಷೇತ್ರದಿಂದ ಕುಂಞ ಮುಗೇರ, ಪರಿಶಿಷ್ಟ ಪಂಗಡ ಕ್ಷೇತ್ರದಿಂದ ಅಶೋಕ, ಸಾಲಗಾರರಲ್ಲದ ಕ್ಷೇತ್ರದಿಂದ ಲೋಕೇಶ ಆಯ್ಕೆಯಾಗಿದ್ದಾರೆ. ಸಹಕಾರ ಭಾರತಿಯಿಂದ ಸಾಲಗಾರ ಸಾಮಾನ್ಯ ಕ್ಷೇತ್ರದಿಂದ ಅಶೋಕ ಗೋಕುಲನಗರ, ಸಾಲಗಾರ ಮಹಿಳಾ ಮಹಿಳಾ ಮೀಸಲು ಕ್ಷೇತ್ರದಿಂದ ಗಾಯತ್ರಿ ಆಯ್ಕೆಯಾಗಿದ್ದಾರೆ. ಆದರೆ ಫಲಿತಾಂಶಕ್ಕೆ ತಡೆ ನೀಡಲಾಗಿದೆ.

ಈ ಸಂದರ್ಭದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ರಮೇಶ್ ಭಟ್ ಉಪ್ಪಂಗಳ ಅವರು, ಇದು ಸಹಕಾರಿಗಳ ಗೆಲುವು ಇದರಲ್ಲಿ ಯಾವುದೇ ರಾಜಕೀಯವನ್ನು ಯಾರು ತರಬಾರದು, ಈ ಗೆಲವು ಸಹಕಾರಿ ಚಳವಳಿಯ ಒಂದು ಭಾಗ, ಎಲ್ಲರೂ ಪಕ್ಷ ಭೇದ ಮರೆತು ಸಹಕಾರ ಕೊಟ್ಟಿದ್ದಾರೆ ಎಂದರು.

ಚುನಾವಣೆಯ ಲೆಕ್ಕಾಚಾರ ನಡೆದು ಉಪ್ಪಂಗಳ ನೇತೃತ್ವದ ಸಹಕಾರಿ ಬಳಗ ಜಯಭೇರಿ ಭಾರಿಸಿರುವ ಸುದ್ದಿ ತಿಳಿಯುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ರಸ್ತೆಯಂಚಿನಲ್ಲಿ ಒಟ್ಟು ಸೇರಿದರು. ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಬಿಜೆಪಿ ಸುಳ್ಯ ಮಂಡಲದ ಅಧ್ಯಕ್ಷ ವೆಂಕಟ್ ವಳಲಂಬೆಯವರು ಕಾರ್ಯಕರ್ತರ ಜೊತೆ ಸೇರಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ ಸೋಲಿನ ನಡುವೆಯೂ ಪಕ್ಷದ ರಾಜ್ಯಾಧ್ಯಕ್ಷರಿಗೆ, ಶಾಸಕರಿಗೆ ಹೆಸರು ಸೂಚಿ ಘೋಷಣೆ ಕೂಗಿದರು. ಸಹಕಾರಿ ಸಂಘಗಳ ಉಪನಿಬಂಧಕರ ಕಛೇರಿಯ ಸಹಕಾರ ಅಭಿವೃದ್ಧಿ ಅಧಿಕಾರಿ ಶಿವಲಿಂಗಯ್ಯ ಚುನಾವಣಾಧಿಕಾರಿಯಾಗಿದ್ದರು

ಚುನಾವಣೆ ಕುರಿತು ಶುಕ್ರವಾರ ಸುಳ್ಯ ಬಿಜೆಪಿ ಮಂಡಲ ಅಧ್ಯಕ್ಷ ವೆಂಕಟ್‍ ವಳಲಂಬೆ ಅವರು ಪತ್ರಿಕಾಗೋಷ್ಠಿ ನಡೆಸಿ, ಬಿಜೆಪಿ ಬೆಂಬಲಿತ ಸಹಕಾರ ಭಾರತಿಯಲ್ಲಿ ಪ್ರಾಮಾಣಿಕ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಜಯ ಗಳಿಸುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ತಿಳಿಸಿದ್ದರು. ಆದರೆ ಅವರ ಹೇಳಿಕೆ ಫಲಿಸಲಿಲ್ಲ. ಕೊನೆಗೂ ಬಂಡಾಯದ ಅಭ್ಯರ್ಥಿಗಳೇ ಗೆಲುವು ಸಾಧಿಸಿದರು. ಅಂತೂ ನ್ಯಾಯಾಲಯದ ಆದೇಶ ಬಂದ ಮೇಲಷ್ಟೇ ಯಾವ ತಂಡಕ್ಕೆ ಗೆಲುವು ಎಂಬುದನ್ನು ಕಾಣಬಹುದಷ್ಟೇ

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top