ಪುತ್ತೂರು: ವಿದ್ಯಾಭಾರತಿ ವತಿಯಿಂದ ತೆಲಂಗಾಣ ಹೈದರಾಬಾದ್ ಶ್ರೀ ಸರಸ್ವತಿ ವಿದ್ಯಾ ಪೀಠಂ ಶಾರದಾ ಧಾಮದಲ್ಲಿ ನಡೆದ ದಕ್ಷಿಣ ಮಧ್ಯ ಕ್ಷೇತ್ರೀಯ ಕ್ರೀಡಾಕೂಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಶಾಲಾ ವಿದ್ಯಾರ್ಥಿಗಳಾದ ಕೀರ್ತಿ ಎತ್ತರ ಜಿಗಿತ (ಪ್ರಥಮ) ಗುಣಶ್ರೀ 80ಮೀ ಹರ್ಡಲ್ಸ್ (ಪ್ರಥಮ), ವಿಕೃತಿ ಕುಮಾರಿ ನಡಿಗೆಯಲ್ಲಿ ದ್ವಿತೀಯ ಹಾಗೂ 14 ರ ವಯೋಮಾನದ ಬಾಲಕಿಯರ 4*100 ಮೀ ರಿಲೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾದ ದಾಮೋದರ್, ಹರಿಣಾಕ್ಷಿ, ಶ್ರದ್ಧಾ ಶೆಟ್ಟಿ ತರಬೇತಿ ನೀಡಿದ್ದರು.