ಈ ವರ್ಷ ಅವಧಿಗಿಂತ ಮುಂಚೆ ಸಿಬಿಎಸ್‌ಇ 10ನೇ ತರಗತಿ ಫಲಿತಾಂಶ ಪ್ರಕಟ

ಇಂದು ಅಥವಾ ನಾಳೆ ಪ್ರಕಟವಾಗುವ ಸಾಧ್ಯತೆ ನವದೆಹಲಿ: ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) 10ನೇ ತರಗತಿಯ ಪರೀಕ್ಷಾ ಫಲಿತಾಂಶವನ್ನು ಪ್ರಕಟಿಸಲು ಸಕಲ ಸಿದ್ಧತೆ ನಡೆಸಿದೆ. ಬಹುತೇಕ ಏಪ್ರಿಲ್ 14 ಅಥವಾ 15ರ ಒಳಗಾಗಿ ಅಧಿಕೃತ ವೆಬ್‌ಸೈಟ್‌ನಲ್ಲಿ ಫಲಿತಾಂಶ ಲಭ್ಯವಾಗುವ ನಿರೀಕ್ಷೆಯಿದೆ. ಈ ವರ್ಷದ ಪರೀಕ್ಷೆ ಬರೆದ ಲಕ್ಷಾಂತರ ವಿದ್ಯಾರ್ಥಿಗಳು ಅಂಕಪಟ್ಟಿಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಸಿಬಿಎಸ್ಇ ಈ ಬಾರಿ ಶೈಕ್ಷಣಿಕ ವೇಳಾಪಟ್ಟಿಯಲ್ಲಿ ಮಹತ್ವದ ಬದಲಾವಣೆ ಮಾಡಿಕೊಂಡಿದೆ. ಸಾಮಾನ್ಯವಾಗಿ ಮೇ ತಿಂಗಳಲ್ಲಿ ಪ್ರಕಟವಾಗುತ್ತಿದ್ದ ಫಲಿತಾಂಶವನ್ನು ಈ ಬಾರಿ ಏಪ್ರಿಲ್ […]

ಈ ವರ್ಷ ಅವಧಿಗಿಂತ ಮುಂಚೆ ಸಿಬಿಎಸ್‌ಇ 10ನೇ ತರಗತಿ ಫಲಿತಾಂಶ ಪ್ರಕಟ Read More »

7 ವರ್ಷದ ಬಳಿಕ ಇರಾನ್‌ ತೈಲ ಹೊತ್ತ ಹಡಗುಗಳು ಭಾರತಕ್ಕೆ ಆಗಮನ

ಯುದ್ಧದ ನಡುವೆಯೇ ಭಾರತಕ್ಕೆ ತೈಲ ನೀಡಿದ ಇರಾನ್‌ ಮುಂಬೈ: ತೈಲ ಸಂಸ್ಕರಣಾಗಾರರಿಗೆ ಕಳೆದ ತಿಂಗಳು ಅಮೆರಿಕ (America) ನೀಡಿದ್ದ ತಾತ್ಕಾಲಿಕ ವಿನಾಯಿತಿ ಬಳಸಿಕೊಂಡು ಭಾರತ 7 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಇರಾನ್‌ನಿಂದ ಕಚ್ಚಾತೈಲ ಖರೀದಿ ಮಾಡಿದೆ. ಇರಾನಿನ ಕಚ್ಚಾತೈಲ ತುಂಬಿದ 2 ಬೃಹತ್‌ ಟ್ಯಾಂಕರ್‌ಗಳು ಭಾರತದ ಬಂದರುಗಳನ್ನು ತಲುಪಿವೆ ಎಂದು ಎಲ್‌ಎಸ್‌ಇಜಿ ಹಡಗು ಟ್ರ್ಯಾಕಿಂಗ್‌ ದತ್ತಾಂಶ ತೋರಿಸಿದೆ ಎಂದು ವರದಿಯಾಗಿದೆ. ಹಡಗು ಟ್ರ್ಯಾಕಿಂಗ್‌ ದತ್ತಾಂಶದ ಪ್ರಕಾರ ಇರಾನ್‌ನ ಧ್ವಜ ಹೊತ್ತ ʻFelicityʼ ಹಡಗು ಪಶ್ಚಿಮ ಭಾರತದ

7 ವರ್ಷದ ಬಳಿಕ ಇರಾನ್‌ ತೈಲ ಹೊತ್ತ ಹಡಗುಗಳು ಭಾರತಕ್ಕೆ ಆಗಮನ Read More »

ಸಕ್ಕರೆ ಸಚಿವ ಶಿವಾನಂದ ಪಾಟೀಲ್ ವಿರುದ್ಧ ಲೋಕಾಯುಕ್ತಕ್ಕೆ ದೂರು

ಎಪಿಎಂಸಿ ಮಾರುಕಟ್ಟೆಯಲ್ಲಿ ಅನಧಿಕೃತ ಮಳಿಗೆಗಳಿಗೆ ಲೈಸೆನ್ಸ್‌ ನೀಡಿದ ಅರೋಪ ಬೆಂಗಳೂರು: ಸಿದ್ದರಾಮಯ್ಯ ಸರ್ಕಾರದ ಮತ್ತೊಬ್ಬರು ಪ್ರಭಾವಿ ಸಚಿವರ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿಬಂದಿದೆ. ಎಪಿಎಂಸಿ ಮಳಿಗೆ ಹಸ್ತಾಂತರ ವಿಚಾರದಲ್ಲಿ ಭಾರಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಕೃಷಿ ಉತ್ಪನ್ನ ಮಾರುಕಟ್ಟೆ ಮತ್ತು ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಹಾಗೂ ಎಪಿಎಂಸಿ ಕಾರ್ಯದರ್ಶಿ ದೊರೆಸ್ವಾಮಿ ಅವರ ವಿರುದ್ಧ ಎಪಿಎಂಸಿ ವರ್ತಕರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಸಿದ್ದರಾಮಯ್ಯ ಸರ್ಕಾರದ ಸಚಿವರ ವಿರುದ್ಧ ಒಂದಿಲ್ಲೊಂದು ಭ್ರಷ್ಟಾಚಾರ ಆರೋಪ ಆಗಾಗ ಕೇಳಿಬರುತ್ತಲೇ ಇದೆ.

ಸಕ್ಕರೆ ಸಚಿವ ಶಿವಾನಂದ ಪಾಟೀಲ್ ವಿರುದ್ಧ ಲೋಕಾಯುಕ್ತಕ್ಕೆ ದೂರು Read More »

ನಾಳೆ ಮಂಡ್ಯ ಆದಿಚುಂಚನಗಿರಿ ಕ್ಷೇತ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮನ

ಶ್ರೀ ಗುರು ಭೈರವೈಕ್ಯ ಮಂದಿರ ಲೋಕಾರ್ಪಣೆ ಕಾರ್ಯಕ್ರಮ ಬೆಂಗಳೂರು: ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಕ್ಷೇತ್ರಕ್ಕೆ ನಾಳೆ (ಏಪ್ರಿಲ್ 15) ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ. ಶ್ರೀಕ್ಷೇತ್ರದ ಮಾಜಿ ಪೀಠಾಧಿಪತಿ ಪರಮಪೂಜ್ಯ ಡಾ.ಬಾಲಗಂಗಾಧರನಾಥ ಸ್ವಾಮೀಜಿ ಅವರ ಸ್ಮರಣಾರ್ಥ ನಿರ್ಮಾಣಗೊಂಡಿರುವ ಭವ್ಯ ‘ಶ್ರೀ ಗುರು ಭೈರವೈಕ್ಯ ಮಂದಿರ’ವನ್ನು ಪ್ರಧಾನಿ ಲೋಕಾರ್ಪಣೆಗೊಳಿಸಲಿದ್ದಾರೆ. ಬಳಿಕ ಭಕ್ತರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ ಇಡೀ ಆದಿಚುಂಚನಗಿರಿ ಕ್ಷೇತ್ರ ಅಲಂಕಾರಗೊಂಡು ಕಂಗೊಳಿಸುತ್ತಿದೆ. ದ್ರಾವಿಡ ಶೈಲಿಯಲ್ಲಿ ನಿರ್ಮಾಣಗೊಂಡಿರುವ ಈ ಭೈರವೈಕ್ಯ ಮಂದಿರ

ನಾಳೆ ಮಂಡ್ಯ ಆದಿಚುಂಚನಗಿರಿ ಕ್ಷೇತ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮನ Read More »

ಭಾರತದ ತೈಲ ಟ್ಯಾಂಕರ್‌ಗಳಿಗೆ ಶುಲ್ಕವಿಲ್ಲ : ಇರಾನ್‌ ಭರವಸೆ

ಹಾರ್ಮುಜ್‌ ಜಲಸಂಧಿ ಹಾದು ಹೋಗುವ ಹಡಗುಗಳಿಂದ ಶುಲ್ಕ ವಸೂಲಿ ಟೆಹರಾನ್: ಇರಾನ್ ಬಂದರುಗಳನ್ನು ಅಮೆರಿಕ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಮುಂದಾಗಿದ್ದು, ಮಧ್ಯಪ್ರಾಚ್ಯದಲ್ಲಿ ಮತ್ತೆ ಉದ್ವಿಗ್ನತೆ ಹೆಚ್ಚಾಗಿದೆ. ಈ ನಡುವೆ ಹಾರ್ಮುಜ್ ಜಲಸಂಧಿಯ ಮೂಲಕ ಸಾಗುವ ಭಾರತೀಯ ಟ್ಯಾಂಕರ್‌ಗಳಿಗೆ ಯಾವುದೇ ಸುಂಕವನ್ನು ವಿಧಿಸುವುದಿಲ್ಲ ಎಂದು ಇರಾನ್ ಭಾರತಕ್ಕೆ ಮತ್ತೆ ಭರವಸೆ ನೀಡಿದೆ. ಉಭಯ ರಾಷ್ಟ್ರಗಳು ಬಲವಾದ ಸಂಬಂಧ ಹೊಂದಿದ್ದು, ಸಾಮಾನ್ಯ ಹಿತಾಸಕ್ತಿ ಹೊಂದಿವೆ ಎಂದು ಭಾರತದಲ್ಲಿರುವ ಇರಾನ್ ರಾಯಭಾರಿ ಹೇಳಿದ್ದು, ಹಾರ್ಮುಜ್ ಜಲಸಂಧಿಯಲ್ಲಿ ಭಾರತೀಯ ಹಡಗುಗಳ ಸಂಚಾರಕ್ಕೆ ನಿರಂತರ ಸಹಕಾರವನ್ನು

ಭಾರತದ ತೈಲ ಟ್ಯಾಂಕರ್‌ಗಳಿಗೆ ಶುಲ್ಕವಿಲ್ಲ : ಇರಾನ್‌ ಭರವಸೆ Read More »

ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ನಜೀರ್ ಅಹ್ಮದ್‌ ರಾಜೀನಾಮೆ

ಉಪಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ಸಿನ ಮುಸ್ಲಿಂ ನಾಯಕರ ಬಂಡಾಯ ಬೆಂಗಳೂರು: ದಾವಣಗೆರೆ ಉಪಚುನಾವಣೆ ಹಿನ್ನೆಲೆಯಲ್ಲಿ ಶುರುವಾಗಿರುವ ಕಾಂಗ್ರೆಸ್ಸಿನ ಮುಸ್ಲಿಂ ನಾಯಕರ ಬಂಡಾಯ ಸದ್ಯಕ್ಕೆ ಶಮನವಾಗುವಂತೆ ಕಾಣಿಸುತ್ತಿಲ್ಲ. ಇದೀಗ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ಎಂಎಲ್‌ಸಿ ನಜೀರ್ ಅಹ್ಮದ್‌ ರಾಜೀನಾಮೆ ನೀಡಿದ್ದಾರೆ.ನಜೀರ್‌ ಅಹ್ಮದ್‌ ಅವರು ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡುವುದಾಗಿ ತಿಳಿಸಿ ಪತ್ರವನ್ನು ಸಿಎಂ ಸಿದ್ದರಾಮಯ್ಯನವರಿಗೆ ರವಾನಿಸಿದ್ದಾರೆ. ಸೋಮವಾರ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಸಿಎಂ ರಾಜಕೀಯ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ಕೊಡುವಂತೆ ನಜೀರ್ ಅಹ್ಮದ್‌ಗೆ

ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ನಜೀರ್ ಅಹ್ಮದ್‌ ರಾಜೀನಾಮೆ Read More »

‘ಬಿಜೆಪಿ ಸೇರಲು ಲಕ್ಷ್ಮಣ್ ಸವದಿ ಪ್ರಯತ್ನ’ ಎಂಬ ರಮೇಶ್ ಜಾರಕಿಹೊಳಿ ಹೇಳಿಕೆಗೆ ಸವದಿ ತಿರುಗೇಟು

ಬೆಳಗಾವಿ: ರಮೇಶ್ ಜಾರಕಿಹೊಳಿ ಅವರು ‘ಲಕ್ಷ್ಮಣ ಸವದಿ ‌ಅವರು ಬಿಜೆಪಿಗೆ ಸೇರಲು ಪ್ರಯತ್ನ ನಡೆಸುತ್ತಿದ್ದಾರೆ’ ಎಂದು ನೀಡಿರುವ ಹೇಳಿಕೆಗೆ ಸ್ವತಃ ಲಕ್ಷ್ಮಣ ಸವದಿ ಅವರೇ ತಿರುಗೇಟು ನೀಡಿದ್ದಾರೆ. ಸೌದಿ ಅವರು ‘ನಾನು ಬಿಜೆಪಿ ಸೇರುತ್ತೇನೆ ಎಂದು ಹೇಳಿದವರೇ‌ ಜೆಡಿಎಸ್ ಸೇರುವ ಆಲೋಚನೆ ಮಾಡುತ್ತಿದ್ದಾರೆ. ನನ್ನ ಬಗ್ಗೆ ಕೆಲಸ‌ ಇಲ್ಲದವರು ಅಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಕ್ಷ ಬಿಡುವುದಾಗಿ ಯಾವುದೇ ರೀತಿಯ ಹೇಳಿಕೆಗಳನ್ನು ನಾನು ಎಲ್ಲಿಯೂ ನೀಡಿಲ್ಲ. ಅಂತಹ ತಲೆ ಬಡ ಇಲ್ಲದ ಹೇಳಿಕೆಗಳನ್ನು

‘ಬಿಜೆಪಿ ಸೇರಲು ಲಕ್ಷ್ಮಣ್ ಸವದಿ ಪ್ರಯತ್ನ’ ಎಂಬ ರಮೇಶ್ ಜಾರಕಿಹೊಳಿ ಹೇಳಿಕೆಗೆ ಸವದಿ ತಿರುಗೇಟು Read More »

ಅಕ್ರಮ ಕೋಳಿ ಅಂಕ: ನಾಲ್ವರ ಬಂಧನ

ವಿಟ್ಲ: ಮಾಡ ಎಂಬಲ್ಲಿ ಪಣಕ್ಕೆ ಹಣವನ್ನಿಟ್ಟು ಅಕ್ರಮವಾಗಿ ಕೋಳಿ ಅಂಕ ನಡೆಸಲಾಗಿದ್ದು, ವಿಟ್ಲ ಪೊಲೀಸರು ಕಾರ್ಯಾಚರಣೆ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಇಬ್ಬರು ಆರೋಪಿಗಳು ಪೊಲೀಸರಿಗೆ ಕರ್ತವ್ಯಕ್ಕೆ ಅಡ್ಡಿ ಮಾಡಿ ಪರಾರಿಯಾಗಿದ್ದಾರೆ. ಅಕ್ರಮ ಕೋಳಿ ಅಂಕದ ಬಗ್ಗೆ ಖಚಿತ ಮಾಹಿತಿ ಪಡೆದು ನಡೆಸಿದ ಕಾರ್ಯಾಚರಣೆ ಇದಾಗಿದೆ. ಸ್ಥಳದಲ್ಲಿ ಸುಮಾರು ಇಪ್ಪತ್ತರಿಂದ ಇಪ್ಪತೈದು ಮಂದಿ ಜೂಜುಕೋರರು ಕಂಡು ಬಂದಿದ್ದು, ಪೊಲೀಸರನ್ನು ಕಂಡಾಕ್ಷಣವೇ ಓಡಲಾರಂಭಿಸಿದ್ದಾರೆ. ಬಂಧಿತರನ್ನು ವಿಟ್ಲಕಸಬ ನಿವಾಸಿಗಳಾದ ಚಂದ್ರಶೇಖರ (43), ಇಬ್ರಾಹಿಂ (65), ಹೊನ್ನಪ್ಪ (46) ಮತ್ತು ವಿಟ್ಲಪಡ್ಡರು

ಅಕ್ರಮ ಕೋಳಿ ಅಂಕ: ನಾಲ್ವರ ಬಂಧನ Read More »

ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್‌‍ನಲ್ಲಿ ಜಿ.ಎಲ್. ಶಾಪಿಂಗ್ ಹಬ್ಬ ‘ವರುಷದ ಹರುಷ’

ಪುತ್ತೂರು: ಮುಖ್ಯರಸ್ತೆಯಲ್ಲಿರುವ ಪ್ರತಿಷ್ಟಿತ ಚಿನ್ನಾಭರಣಗಳ ಮಳಿಗೆ ಜಿ.ಎಲ್. ಆಚಾರ್ಯ ಜ್ಯುವೆಲ್ಲ‌ರ್ಸ್ ಸಂಸ್ಥೆಯು ಪುತ್ತೂರು, ಹಾಸನ, ಸುಳ್ಯ ಮತ್ತು ಕುಶಾಲನಗರದಲ್ಲಿರುವ ತಮ್ಮ ಶಾಖೆಗಳಲ್ಲಿ ಮಾತ್ರ ವಾರ್ಷಿಕೋತ್ಸವದ ಸಂಭ್ರಮದ ಪ್ರಯುಕ್ತ ನೆಚ್ಚಿನ ಗ್ರಾಹಕರಿಗೆ ಜಿ.ಎಲ್. ಶಾಪಿಂಗ್ ಹಬ್ಬ “ವರುಷದ ಹರುಷ” ಎಂಬ ವಿಶಿಷ್ಟ ಶಾಪಿಂಗ್ ಹಬ್ಬವನ್ನು ತಾ.11.04.2026ರಿಂದ 20.04.2026ರವರೆಗೆ ಆಯೋಜಿಸಲಾಗಿದೆ. ಗ್ರಾಹಕರಿಗೆ ಚಿನ್ನಾಭರಣಗಳ VA ಶುಲ್ಕದ ಮೇಲೆ ಪ್ರತಿ ಗ್ರಾಂಗೆ ರೂ. 500/-ರವರೆಗೆ ರಿಯಾಯಿತಿ ನೀಡಲಾಗುವುದು ಅದೇ ರೀತಿ ವಜ್ರಾಭರಣಗಳ ಮೇಲೆ ಪ್ರತೀ ಕ್ಯಾರೇಟ್‌ ಗೆ ರೂ.7000/-ರವರೆಗೆ ರಿಯಾಯಿತಿ ಹಾಗೂ

ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್‌‍ನಲ್ಲಿ ಜಿ.ಎಲ್. ಶಾಪಿಂಗ್ ಹಬ್ಬ ‘ವರುಷದ ಹರುಷ’ Read More »

ಮೂಡಬಿದಿರೆಯಲ್ಲಿ ಶುಭಾರಂಭಗೊಂಡ ಜಿ. ಎಲ್. ಆಚಾರ್ಯ ಜುವೆಲ್ಲರ್ಸ್

ಮೂಡುಬಿದಿರೆ: ಇಲ್ಲಿನ ಬಸ್‌ಸ್ಟ್ಯಾಂಡ್ ಹತ್ತಿರದ ನವಮಿ ಪ್ಲಾಜಾದಲ್ಲಿ ಜಿ.ಎಲ್. ಆಚಾರ್ಯ ಜುವೆಲ್ಲರ್ಸ್‌ನ ನೂತನ ಮಳಿಗೆಯು ಶುಭಾರಂಭಗೊಂಡಿದೆ. ಆಳ್ವಾಸ್ ಎಜುಕೇಷನ್ ಫೌಂಡೇಶನ್ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ನೂತನ ಮಳಿಗೆ ಉದ್ಘಾಟಿಸಿ ಮಾತನಾಡಿ, ಸಂಸ್ಥೆಯ ಸ್ಥಾಪಕ ಜಿ.ಎಲ್. ಆಚಾರ್ಯರು ವೃತ್ತಿಯ ಜತೆ ಸಮಾಜದ ಪರಿಕಲ್ಪನೆಯನ್ನು ಬೆಳೆಸಿಕೊಂಡವರು. ಯಾವ ರೀತಿ ನಾವು ವೃತ್ತಿ ಮತ್ತು ನಮ್ಮ ಧರ್ಮ, ಬೇರೆ ಬೇರೆ ಚಟುವಟಿಕೆಗಳನ್ನು ಹೇಗೆ ಮಾಡಬೇಕು ಎಂದು ನಮಗೆಲ್ಲ ಕಿವಿಮಾತುಗಳನ್ನು ಹೇಳಿ ಕೊಟ್ಟವರು. ಅದೇ ದಿಕ್ಕಿನಲ್ಲಿ ಅವರ ಪುತ್ರ ಬಲರಾಮ ಆಚಾರ್ಯ ಮುನ್ನಡೆಯುತ್ತಿದ್ದಾರೆ.

ಮೂಡಬಿದಿರೆಯಲ್ಲಿ ಶುಭಾರಂಭಗೊಂಡ ಜಿ. ಎಲ್. ಆಚಾರ್ಯ ಜುವೆಲ್ಲರ್ಸ್ Read More »

error: Content is protected !!
Scroll to Top