ಸೀನಿಯರ್ ವಿದ್ಯಾರ್ಥಿಗಳಿಂದ ಜ್ಯೂನಿಯರ್ ವಿದ್ಯಾರ್ಥಿಯ ಅಪಹರಣ

ಬೆಂಗಳೂರು: ಜ್ಯೂನಿಯರ್ ವಿದ್ಯಾರ್ಥಿಯನ್ನು ಸೀನಿಯರ್ಸ್ ಕಿಡ್ನಾಪ್ ಮಾಡಿದ ಘಟನೆ ಬೆಂಗಳೂರಿನ ಮಡಿವಾಳದಲ್ಲಿ ‌ನಡೆದಿದೆ. ಕಿಡ್ನಾಪ್ ಆದ ವಿದ್ಯಾರ್ಥಿಯನ್ನು ರಿಷಬ್ ಮೊಹಂತಿ(19) ಎಂದು ಗುರುತಿಸಲಾಗಿದ್ದು, ಈತ ಒಡಿಶಾದವನಾಗಿದ್ದಾನೆ. ನಗರದ ಪ್ರತಿಷ್ಟಿತ ಮ್ಯಾನೇಜ್ಮೆಂಟ್ ಕಾಲೇಜ್ ಒಂದರಲ್ಲಿ ಹಣಕ್ಕಾಗಿ ಈ ಘಟನೆ ನಡೆದಿದ್ದು, ಈ ಸಂಬಂಧ ಐವರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ಬಂಧಿತರನ್ನು ‌ಕೇರಳದ ಶೌರ್ಯ, ಜಯನಗರದ ‌ಸಯ್ಯದ್ ಬಿಲಾಲ್, ಬಿಹಾರದ ನಿಕುಂಜ್, ಮಹಾರಾಷ್ಟ್ರದ ಅದಿತಾ ರಾಕ್ಸಿ ಎಂದು ಗುರುತಿಸಲಾಗಿದೆ. ಬಂದಿತು ಪೈಕಿ ಮೂವರು ಕಿಡ್ನಾಪ್ ಆದ ವಿದ್ಯಾರ್ಥಿಯ ಹಾಸ್ಚೆಲ್‌ಮೇಟ್ಸ್ ಆಗಿದ್ದರು ಎಂದು […]

ಸೀನಿಯರ್ ವಿದ್ಯಾರ್ಥಿಗಳಿಂದ ಜ್ಯೂನಿಯರ್ ವಿದ್ಯಾರ್ಥಿಯ ಅಪಹರಣ Read More »

ಕಲಾವಿದರಿಗೆ ನುಡಿ ನಮನ, ತಾಳಮದ್ದಳೆ

ಉಪ್ಪಿನಂಗಡಿ: ಶ್ರೀ ಕಾಳಿಕಾಂಬ ಯಕ್ಷ ಕಲಾ ಟ್ರಸ್ಟ್ ರಿ. ಉಪ್ಪಿನಂಗಡಿ ಸುವರ್ಣ ಮಾಹೋತ್ಸವದ ಶ್ರೀ ಮಹಾಭಾರತ ಸರಣಿಯಲ್ಲಿ 111ನೇ ತಾಳಮದ್ದಳೆಯಾಗಿ ಘಟೋತ್ಕಚ ವಿವಾಹಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಜರಗಿತು. ಕವಿ ಗುಂಡು ಸೀತಾರಾಮ್ ರಾವ್ ತಲವಾಟ ರಚಿತ ಚಕ್ರ ಚಂಡಿಕೆ ಪ್ರಸಂಗದಿಂದ ಆಯ್ದ ಆಖ್ಯಾನದಲ್ಲಿ ಭಾಗವತರಾಗಿ ಮಲ್ಲಿಕಾ ಶೆಟ್ಟಿ ಸಿದ್ದಕಟ್ಟೆ, ಪದ್ಮನಾಭ ಕುಲಾಲ್ ಇಳoತಿಲ ಹಿಮ್ಮೇಳದಲ್ಲಿ ಶ್ರೀಪತಿ ಭಟ್ ಉಪ್ಪಿನಂಗಡಿ, ಪ್ರಚೇತ್ ಆಳ್ವ ಬಾರ್ಯ. ಚಂದ್ರಶೇಖರ ಆಚಾರ್ಯ ಗೇರುಕಟ್ಟೆ ಅರ್ಥಧಾರಿಗಳಾಗಿ ದಿವಾಕರ ಆಚಾರ್ಯ ನೇರೆಂಕಿ(ಮೌರ್ವಿ) ಶ್ರೀಧರ ಎಸ್.

ಕಲಾವಿದರಿಗೆ ನುಡಿ ನಮನ, ತಾಳಮದ್ದಳೆ Read More »

ಗರ್ಭಿಣಿ ಸಾವು: ಬಿಮ್ಸ್ ಆಸ್ಪತ್ರೆ ವಿರುದ್ಧ ಕುಟುಂಬಸ್ಥರ ಆಕ್ರೋಶ

ಬೆಳಗಾವಿ: ಗರ್ಭಿಣಿ ಮಹಿಳೆಯೊಬ್ಬರು ಬಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಆಸ್ಪತ್ರೆಯ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಈ ಸಾವು ಸಂಭವಿಸಿದೆ ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ. ಮೃತ ಮಹಿಳೆಯನ್ನು ತುರಮುರಿ ಗ್ರಾಮದ ಈರಮ್ಮ ‌ಶಿಗೀಹಳ್ಳಿ(21) ಎಂದು ಗುರುತಿಸಲಾಗಿದೆ. ಈರಮ್ಮ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದಾಗಿಂದಲೂ ಅಲ್ಲಿ ಅವರಿಗೆ ಸರಿಯಾದ ಚಿಕಿತ್ಸೆ ದೊರೆತಿಲ್ಲ. ಯಾರೂ ಅವರನ್ನು ಸರಿಯಾಗಿ ಪರೀಕ್ಷಿಸಿಲ್ಲ ಎಂದು ಕುಟುಂಬಸ್ಥರು ಆಕ್ರೊಶ ವ್ಯಕ್ತಪಡಿಸಿದ್ದಾರೆ. ಇದರಿಂದ ಈರಮ್ಮ ಅವರು ಮೃತಪಟ್ಟಿದ್ದಾರೆ. ಹೊಟ್ಟೆಯಲ್ಲಿದ್ದ ಮಗು ಸಹ ಮೃತಪಟ್ಟಿದೆ. ಸಹಿ ಹಾಕಿ ಶವವನ್ನು ತೆಗೆದುಕೊಂಡು ಹೋಗುವಂತೆ

ಗರ್ಭಿಣಿ ಸಾವು: ಬಿಮ್ಸ್ ಆಸ್ಪತ್ರೆ ವಿರುದ್ಧ ಕುಟುಂಬಸ್ಥರ ಆಕ್ರೋಶ Read More »

ಮೂಡುಬಿದಿರೆ : ಎಂಟು ಜಾನುವಾರುಗಳ ರಕ್ಷಣೆ; ಆರೋಪಿಗಳು ಪರಾರಿ

ಪಿಕಪ್‌ನಲ್ಲಿ ಎಸ್ಕಾರ್ಟ್‌ ಕಾರಿನೊಂದಿಗೆ ಹಿಂಸಾತ್ಮಕವಾಗಿ ಜಾನುವಾರು ಸಾಗಾಟ ಮೂಡುಬಿದಿರೆ: ಅತ್ಯಂತ ಹಿಂಸಾತ್ಮಕವಾಗಿ ಹಾಗೂ ಅಕ್ರಮವಾಗಿ ಸಾಗಿಸುತ್ತಿದ್ದ ಎಂಟು ಜಾನುವಾರುಗಳನ್ನು ಹಾಗೂ ಸಾಗಾಟಕ್ಕೆ ಬಳಸಿದ ಎರಡು ವಾಹನಗಳನ್ನು ಮೂಡುಬಿದಿರೆ ಪೊಲೀಸರು ಭಾನುವಾರ ತೋಡಾರು ಎಂಬಲ್ಲಿ ವಶಕ್ಕೆ ಪಡೆದಿದ್ದಾರೆ. ಮೂಡುಬಿದಿರೆ ಪಿಎಸ್‌ಐ ಪ್ರತಿಭಾ ಕೆ.ಸಿ. ಹಾಗೂ ಸಿಬ್ಬಂದಿ ಗಸ್ತು ಕರ್ತವ್ಯದಲ್ಲಿದ್ದಾಗ, ತೋಡಾರು ಕಡೆಗೆ ಪಿಕಪ್ ವಾಹನದಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಲಭಿಸಿದಾಗ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ತೋಡಾರು ಗ್ರಾಮದ ಪ್ರವೇಶ ದ್ವಾರದ ಬಳಿ ಗರಡಿ ಕಡೆಯಿಂದ

ಮೂಡುಬಿದಿರೆ : ಎಂಟು ಜಾನುವಾರುಗಳ ರಕ್ಷಣೆ; ಆರೋಪಿಗಳು ಪರಾರಿ Read More »

ಸಮರ ಸಂಧಾನ ಕೆಡಿಸಿದ್ದು ನೆತನ್ಯಾಹು ಫೋನ್‌ ಕರೆ!

ಒಂದು ಫೋನ್‌ ಕರೆಯಿಂದಾಗಿ ಇಡೀ ಮಾತುಕತೆ ವಿಫಲವಾಯಿತು ಎಂದು ದೂರಿದ ಇರಾನ್‌ ಟೆಹ್ರಾನ್‌: ಅಮೆರಿಕ ಮತ್ತು ಇರಾನ್ ನಡುವೆ ಸಂಧಾನವಾಗಿ ಯುದ್ಧ ನಿಂತು ಜಗತ್ತು ಶಾಂತಿಯತ್ತ ಮರಳುತ್ತದೆ ಎಂಬ ನಿರೀಕ್ಷೆ ನಿನ್ನೆ ಹುಸಿಯಾಗಿದೆ. ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ನಡೆದ 21 ಗಂಟೆಗಳ ಮಾತುಕತೆ ವಿಫಲವಾಯಿತು.‌ ಈ ಬೆಳವಣಿಯ ಕೆಲ ಗಂಟೆಗಳ ನಂತರ ಇರಾನ್‌ ಮೊದಲ ಪ್ರತಿಕ್ರಿಯೆ ನೀಡಿದ್ದು, ಮಾತುಕತೆ ವಿಫಲವಾಗಲು ಇಸ್ರೇಲ್‌ ಪ್ರಧಾನಿ ಕಾರಣ ಎಂದು ಹೇಳಿದೆ. ಅಮೆರಿಕ – ಇರಾನ್‌ ಮಾತುಕತೆ ಮಧ್ಯೆ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌

ಸಮರ ಸಂಧಾನ ಕೆಡಿಸಿದ್ದು ನೆತನ್ಯಾಹು ಫೋನ್‌ ಕರೆ! Read More »

ವಿವಾಹಿತ ಮಹಿಳೆಯಿಂದ ಬ್ಲ್ಯಾಕ್‌ಮೇಲ್‌ : ಜಿಮ್‌ ಟ್ರೈನರ್‌ ಆತ್ಮಹತ್ಯೆ

ನೆಲಮಂಗಲ: ವಿವಾಹಿತೆಯ ಮೋಹಕ್ಕೆ ಬಿದ್ದು, ಬ್ಲ್ಯಾಕ್‌ಮೇಲ್‌ಗೆ ಸಿಲುಕಿದ್ದ 28 ವರ್ಷದ ಜಿಮ್‌ ಟ್ರೈನರ್‌ ನೇಣು ಬಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲದ ವಾಜರಹಳ್ಳಿಯಲ್ಲಿ ನಡೆದಿದೆ. ದಿಲೀಪ್ (28) ಮೃತ ಯುವಕನಾಗಿದ್ದು, ನೆಲಮಂಗಲದ ವಾಜರಹಳ್ಳಿಯಲ್ಲಿ ಜಿಮ್ ಟ್ರೈನರ್ ಆಗಿ ಕೆಲಸ ಮಾಡಿಕೊಂಡಿದ್ದರು. ಜಿಮ್‌ನಲ್ಲಿ ದಿಲೀಪ್‌ಗೆ 42 ವರ್ಷದ ವಿವಾಹಿತ ಮಹಿಳೆಯ ಪರಿಚಯವಾಗಿತ್ತು. ಆಕೆಗೆ ಮದುವೆಯಾಗಿದ್ದರೂ ದಿಲೀಪ್ ಜೊತೆ ರಿಲೇಶನ್‌ಶಿಪ್‌ನಲ್ಲಿದ್ದಳು. ನಂತರ ಆಕೆ ಬ್ಲ್ಯಾಕ್‌ಮೇಲ್‌ ಮಾಡಲಾರಂಭಿಸಿದಳು ಎಂದು ದಿಲೀಪ್ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಮಹಿಳೆಯ ಬ್ಲ್ಯಾಕ್‌ಮೇಲ್‌ನಿಂದ

ವಿವಾಹಿತ ಮಹಿಳೆಯಿಂದ ಬ್ಲ್ಯಾಕ್‌ಮೇಲ್‌ : ಜಿಮ್‌ ಟ್ರೈನರ್‌ ಆತ್ಮಹತ್ಯೆ Read More »

ಇಂದು ಸಂಜೆ ಶಿವಾಜಿ ಪಾರ್ಕ್‌ನಲ್ಲಿ ಆಶಾ ಭೋಸ್ಲೆ ಅಂತ್ಯಕ್ರಿಯೆ

ಎಂಟು ದಶಕಗಳ ಹಾಡು ನಿಲ್ಲಿಸಿದ ಗಾಯಕಿಗೆ ಭಾವಪೂರ್ಣ ವಿದಾಯ ಕೋರಲು ಸರ್ವ ಸಿದ್ಧತೆ ಮುಂಬೈ: ಭಾನುವಾರ ಹೃದಯಾಘಾತದಿಂದ ತೀರಿಕೊಂಡಿರುವ ಖ್ಯಾತ ಗಾಯಕಿ ಆಶಾ ಭೋಸ್ಲೆ ಅವರ ಅಂತ್ಯಕ್ರಿಯೆ ಇಂದು ಸಂಜೆ ದಾದರ್‌ನ ಶಿವಾಜಿ ಪಾರ್ಕ್‌ನಲ್ಲಿ ನೆರವೇರಲಿದೆ. ಚಿತ್ರರಂಗವೂ ಸೇರಿದಂತೆ ವಿವಿಧ ರಂಗಗಳ ನೂರಾರು ಗಣ್ಯರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ. ಬರೋಬ್ಬರಿ 80 ವರ್ಷಗಳ ತಮ್ಮ ಗಾಯನದ ಬದುಕನ್ನು ತೊರೆದು ಹಾಡು ನಿಲ್ಲಿಸಿರುವ ಆಶಾ ಭೋಸ್ಲೆ ಅವರಿಗೆ ದೇಶ ವಿದೇಶಗಳಲ್ಲಿ ಕೋಟಿಗಟ್ಟಲೆ ಅಭಿಮಾನಿಗಳಿದ್ದಾರೆ. ಎಂಟು ದಶಕಗಳಿಗೂ ಹೆಚ್ಚು ಕಾಲ ಭಾರತೀಯ

ಇಂದು ಸಂಜೆ ಶಿವಾಜಿ ಪಾರ್ಕ್‌ನಲ್ಲಿ ಆಶಾ ಭೋಸ್ಲೆ ಅಂತ್ಯಕ್ರಿಯೆ Read More »

ಪಾಕಿಸ್ತಾನ ಕರಾವಳಿ ರಕ್ಷಣಾ ಪಡೆಯ ಮೇಲೆ ಬಲೂಚಿಸ್ತಾನ ಬಂಡುಕೋರರ ದಾಳಿ : ಮೂವರು ಸಾವು

ದಾಳಿಯನ್ನು ಭೂಮಿಯಿಂದ ಸಮುದ್ರಕ್ಕೆ ವಿಸ್ತರಿಸಿದ ಬಂಡುಕೋರರು ಇಸ್ಲಾಮಾಬಾದ್ : ಬಲೂಚಿಸ್ತಾನದ ಬಂಡುಕೋರರು ಭಾನುವಾರ ಅರಬ್ಬಿ ಸಮುದ್ರದಲ್ಲಿ ಪಾಕಿಸ್ತಾನ ಕರಾವಳಿ ರಕ್ಷಣಾ ಪಡೆಯ ಮೇಲೆ ನಡೆಸಿದ ಭೀಕರ ದಾಳಿಯಲ್ಲಿ ಮೂವರು ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಕಡಲ ಪ್ರಾಧಿಕಾರದ ಹಡಗಿನ ಮೇಲೆ ನಡೆದ ಇತಿಹಾಸದ ಮೊದಲ ದಾಳಿ ಇದಾಗಿದೆ. ಪಾಕಿಸ್ತಾನ-ಇರಾನ್ ಗಡಿಯ ಸಮೀಪವಿರುವ ಕರಾವಳಿ ಪ್ರದೇಶದಲ್ಲಿ ಕೋಸ್ಟ್ ಗಾರ್ಡ್ ದೋಣಿಯು ಎಂದಿನಂತೆ ಗಸ್ತು ತಿರುಗುತ್ತಿತ್ತು. ಈ ವೇಳೆ ದೋಣಿಯನ್ನು ಸುತ್ತುವರಿದ ಬಂಡುಕೋರರು ಮನಬಂದಂತೆ ಗುಂಡಿನ ಮಳೆ ಕರೆದಿದ್ದಾರೆ. ಅನಿರೀಕ್ಷಿತ ದಾಳಿಯಿಂದ ಕಂಗೆಟ್ಟ

ಪಾಕಿಸ್ತಾನ ಕರಾವಳಿ ರಕ್ಷಣಾ ಪಡೆಯ ಮೇಲೆ ಬಲೂಚಿಸ್ತಾನ ಬಂಡುಕೋರರ ದಾಳಿ : ಮೂವರು ಸಾವು Read More »

ಆಂಧ್ರಪ್ರದೇಶದ ಕರ್ನೂಲ್‌ನಲ್ಲಿ ಸುಳ್ಯದ ಯುವತಿ ಅಪಘಾತಕ್ಕೆ ಬಲಿ

ಪ್ರವಾಸ ತೆರಳಿದ್ದ ವೇಳೆ ಸಂಭವಿಸಿದ ದುರಂತ ಸುಳ್ಯ: ಆಂಧ್ರ ಪ್ರದೇಶದ ಕರ್ನೂಲ್‍ನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ಸುಳ್ಯದ ಯುವತಿ ಮೃತಪಟ್ಟ ಘಟನೆ ನಡೆದಿದೆ. ಸುಳ್ಯ ಕಂದಡ್ಕದ ಶಶಿಕಲಾ ಭಟ್ ಎಂಬವರ ಪುತ್ರಿ ಕ್ಷಿಪ್ರ (27) ಎಂಬ ಯುವತಿ ಶನಿವಾರ ರಾತ್ರಿ ಆಂಧ್ರಪ್ರದೇಶದ ಕರ್ನೂಲ್‍ನಲ್ಲಿ ನಡೆದ ಕಾರು ಅಪಘಾತದಲ್ಲಿ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ. ಬೆಂಗಳೂರಿನ ಕಂಪೆನಿಯೊಂದರಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ಕ್ಷಿಪ್ರ ಸಹದ್ಯೋಗಿಗಳೊಂದಿಗೆ ಆಂಧ್ರಪ್ರದೇಶಕ್ಕೆ ಪ್ರವಾಸಕ್ಕೆ ತೆರಳಿದ ವೇಳೆ ಈ ಘಟನೆ ನಡೆದಿದೆ.

ಆಂಧ್ರಪ್ರದೇಶದ ಕರ್ನೂಲ್‌ನಲ್ಲಿ ಸುಳ್ಯದ ಯುವತಿ ಅಪಘಾತಕ್ಕೆ ಬಲಿ Read More »

ವಿಟ್ಲ : ಮಗುವಿನ ಕುತ್ತಿಗೆಯಲ್ಲಿದ್ದ ಚಿನ್ನದ ಕಸಿದು ಪರಾರಿ

ವಿಟ್ಲ: ಮನೆಯ ಪರಿಸರದಲ್ಲಿ ಆಟವಾಡುತ್ತಿದ್ದ ಮಗುವಿನ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಬೈಕಿನಲ್ಲಿ ಬಂದ ಅಪರಿಚಿತನೋರ್ವ ಕಸಿದು ಪರಾರಿಯಾದ ಘಟನೆ ವಿಟ್ಲ ಪಡ್ನೂರು ಗ್ರಾಮದ ಕೋಡಪದವು ಮದಕ ಎಂಬಲ್ಲಿ ನಡೆದಿದೆ. ಕೋಡಪದವು ಮದಕದ ನಿವಾಸಿಯೊಬ್ಬರ ಮಗು ಮನೆಯ ಮುಂಭಾಗ ಆಟವಾಡುತ್ತಿದ್ದಾಗ ಕೆಟಿಎಂ ಬೈಕಿನಲ್ಲಿ ಬಂದ ವ್ಯಕ್ತಿ ಮಗುವಿನ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ. ಈ ಕೃತ್ಯದ ದೃಶ್ಯವು ಸಮೀಪದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬೈಕಿನಲ್ಲಿ ಸವಾರನು ಹೆಲ್ಮೆಟ್ ಧರಿಸಿ ವೇಗವಾಗಿ ಚಲಿಸುತ್ತಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ಕಂಡುಬಂದಿದೆ. ವಿಟ್ಲ ಪೊಲೀಸರು ತಕ್ಷಣವೇ

ವಿಟ್ಲ : ಮಗುವಿನ ಕುತ್ತಿಗೆಯಲ್ಲಿದ್ದ ಚಿನ್ನದ ಕಸಿದು ಪರಾರಿ Read More »

error: Content is protected !!
Scroll to Top