ಎವಿಜಿ ಶಾಲೆಯಲ್ಲಿ ಯಶಸ್ವಿ ಬೇಸಿಗೆ ಶಿಬಿರ ಸಂಪನ್ನ

ಅಲುಂಬುಡ: 2026ನೆ ಸಾಲಿನ ಎವಿಜಿ ಸಾಪ್ತಾಹಿಕ ಬೇಸಿಗೆ ಶಿಬಿರವು ಏಪ್ರಿಲ್ 16ರಂದು ಬನ್ನೂರಿನ ಅಲುಂಬುಡದಲ್ಲಿರುವ ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್ನಲ್ಲಿ ವರ್ಣರಂಜಿತವಾಗಿ ಸಮಾಪನಗೊಂಡಿತು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಭಾರತ ಮಾತೆಗೆ ಪುಷ್ಪಾರ್ಚನೆಗೈದು, ದೀಪ ಪ್ರಜ್ವಲಿಸಿ ಮಾತನಾಡಿದ ಪುತ್ತೂರಿನ ಗಾನಕೋಗಿಲೆ, ಸಾವಿರಾರು ಗಾಯನ ಕಂಠಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದ ಗಾನಸಿರಿ ಖ್ಯಾತಿಯ ಡಾ. ಕಿರಣ್ ಕುಮಾರ್ ಅವರು ಮಾತನಾಡಿ ಮಾತಾಪಿತರನ್ನು ಗೌರವಿಸುವವರು ಜೀವನದಲ್ಲಿ ಸೋತಿಲ್ಲ ಎಂದರು. ಅಂತಹ ಸಂಸ್ಕಾರ ಈ ಎವಿಜಿ ಶಾಲೆಯಲ್ಲಿ ಸಿಗುತ್ತಿದೆ. ಎವಿಜಿ ಕಲಾ […]

ಎವಿಜಿ ಶಾಲೆಯಲ್ಲಿ ಯಶಸ್ವಿ ಬೇಸಿಗೆ ಶಿಬಿರ ಸಂಪನ್ನ Read More »

ಶ್ರೇಷ್ಠ ಶೆಟ್ಟಿ ಅವರಿಗೆ CBSC ಹತ್ತನೇ ತರಗತಿ ಪರೀಕ್ಷೆಯಲ್ಲಿ 96.20% ಅಂಕ

ಬೆಳ್ಳಾರೆ: ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್ ಬೆಳ್ಳಾರೆ ಇಲ್ಲಿನ ವಿದ್ಯಾರ್ಥಿನಿ ಶ್ರೇಷ್ಠ ಶೆಟ್ಟಿ ಎಣ್ಮೂರುಗುತ್ತು ಅವರು ಸಿಬಿಎಸ್‌ಸಿ‌ ಹತ್ತನೇ ತರಗತಿ ಪರೀಕ್ಷೆಯಲ್ಲಿ 96.20% ಅಂಕಗಳನ್ನು ಗಳಿಸಿ ಶಾಲೆಗೆ ಪ್ರಥಮ ಸ್ಥಾನದಲ್ಲಿ ಉತ್ತೀರ್ಣರಾಗಿ, ಕೀರ್ತಿ ತಂದಿರುತ್ತಾರೆ. ಇವರು ಎಣ್ಮೂರುಗುತ್ತು ರಘುಪ್ರಸಾದ್ ‌ಶೆಟ್ಟಿ ಮತ್ತು ಭಾರತಿ ಶೆಟ್ಟಿ ದಂಪತಿ ಪುತ್ರಿ.

ಶ್ರೇಷ್ಠ ಶೆಟ್ಟಿ ಅವರಿಗೆ CBSC ಹತ್ತನೇ ತರಗತಿ ಪರೀಕ್ಷೆಯಲ್ಲಿ 96.20% ಅಂಕ Read More »

ಕಾರ್ಪೊರೇಟ್‌ ಲವ್‌ ಜಿಹಾದ್‌ ” ನಾಸಿಕ್‌ನ ಟಿಸಿಎಸ್‌ ಸಂಸ್ಥೆಗೆ ಬೀಗ

ಹಿಂದೂ ಉದ್ಯೋಗಿಗಳನ್ನು ಆಮಿಷವೊಡ್ಡಿ, ಬೆದರಿಕೆ ಹಾಕಿ ಮತಾಂತರಕ್ಕೆ ಯತ್ನಿಸಿದ ಪ್ರಕರಣ ನಾಸಿಕ್: ಲವ್‌ ಜಿಹಾದ್‌, ಮತಾಂತರ ಮತ್ತು ಲೈಂಗಿಕ ಕಿರುಕುಳ ಆರೋಪಕ್ಕೆ ಗುರಿಯಾಗಿರುವ ಭಾರತದ ಪ್ರತಿಷ್ಠಿತ ಟಾಟಾ ಸಮೂಹದ ದೈತ್ಯ ಐಟಿ ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (TCS) ತನ್ನ ನಾಸಿಕ್ ಕಚೇರಿಯ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಕೇವಲ ಕೆಲಸದ ಕಿರುಕುಳ ಎಂದು ಆರಂಭವಾದ ದೂರುಗಳು ಈಗ ಅತ್ಯಾಚಾರ, ಮತಾಂತರದ ಸಂಚು ಮತ್ತು ಅಂತಾರಾಷ್ಟ್ರೀಯ ಸಂಪರ್ಕಗಳಂತಹ ಭಯಾನಕ ಸ್ವರೂಪ ಪಡೆದುಕೊಂಡಿವೆ. ನಾಸಿಕ್ ಪೊಲೀಸ್ ಆಯುಕ್ತ ಸಂದೀಪ್ ಕಾರ್ಣಿಕ್

ಕಾರ್ಪೊರೇಟ್‌ ಲವ್‌ ಜಿಹಾದ್‌ ” ನಾಸಿಕ್‌ನ ಟಿಸಿಎಸ್‌ ಸಂಸ್ಥೆಗೆ ಬೀಗ Read More »

ಪುತ್ತೂರು ಜಾತ್ರೆ : ಮದ್ಯ ಮಾರಾಟ ನಿಷೇಧ, ಸಂಚಾರ ಮಾರ್ಗ ಬದಲಾವಣೆ

ಮೂರು ದಿನ ಹಲವು ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಆದೇಶ ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆಯ ಪ್ರಯುಕ್ತ ಏಪ್ರಿಲ್ 16ರಂದು ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಗಳ ಭೇಟಿ, ಕೆರೆ ಉತ್ಸವ, ತೆಪ್ಪೋತ್ಸವ ಹಾಗೂ ಏಪ್ರಿಲ್ 17ರಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮರಥೋತ್ಸವ, ಏಪ್ರಿಲ್ 18 ರಂದು ದೇವರು ಅವಭೃತ ಸ್ನಾನಕ್ಕೆ ವೀರಮಂಗಲಕ್ಕೆ ಹೋಗಲಿದ್ದು, ಈ ವೇಳೆ ಸಾವಿರಾರು ಜನ ಭಕ್ತಾದಿಗಳು ಸೇರುವ ನಿರೀಕ್ಷೆಯಿರುತ್ತದೆ. ಪುತ್ತೂರು ಪರಿಸರವು ಸೂಕ್ಷ್ಮ ಪ್ರದೇಶವಾಗಿರುವುದರಿಂದ ಈ ಸಮಯದಲ್ಲಿ ಕಿಡಿಗೇಡಿಗಳು ಅಮಲು

ಪುತ್ತೂರು ಜಾತ್ರೆ : ಮದ್ಯ ಮಾರಾಟ ನಿಷೇಧ, ಸಂಚಾರ ಮಾರ್ಗ ಬದಲಾವಣೆ Read More »

ಕೊಲೆ ಪ್ರಕರಣದಲ್ಲಿ ಅಪರಾಧಿ : ವಿನಯ್‌ ಕುಲಕರ್ಣಿ ಶಾಸಕ ಸ್ಥಾನ ಭವಿಷ್ಯ ಇಂದು ನಿರ್ಧಾರ

2 ವರ್ಷಕ್ಕಿಂತ ಮೇಲ್ಪಟ್ಟು ಶಿಕ್ಷೆಯಾದರೆ ಶಾಸಕ ಸ್ಥಾನದಿಂದ ಅನರ್ಹಗೊಳ್ಳಲಿರುವ ವಿನಯ್‌ ಕುಲಕರ್ಣಿ ಬೆಂಗಳೂರು : ಸುಮಾರು 10 ವರ್ಷಗಳ ಹಿಂದೆ ನಡೆದ ಧಾರವಾಡದ ಬಿಜೆಪಿ ಮುಖಂಡ ಯೋಗೇಶ್‌ ಗೌಡ ಕೊಲೆ ಪ್ರಕರಣದಲ್ಲಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಬುಧವಾರ ಕಾಂಗ್ರೆಸ್‌ ಶಾಸಕ ವಿನಯ್‌ ಕುಲಕರ್ಣಿ ಅಪರಾಧಿ ಎಂದು ತೀರ್ಪು ನೀಡಿರುವುದಿರಂದ ಅವರ ಶಾಸಕ ಸ್ಥಾನಕ್ಕೆ ಕುತ್ತು ಬರುವ ಸಾಧ್ಯತೆ ಇದೆ. ಕಾಂಗ್ರೆಸ್‌ ಶಾಸಕ ವಿನಯ್‌ ಕುಲಕರ್ಣಿ ಸೇರಿ 16 ಮಂದಿಯನ್ನು ಅಪರಾಧಿಗಳು ಎಂದು ತೀರ್ಮಾನಿಸಿ ಆದೇಶ ಹೊರಡಿಸಿದೆ.

ಕೊಲೆ ಪ್ರಕರಣದಲ್ಲಿ ಅಪರಾಧಿ : ವಿನಯ್‌ ಕುಲಕರ್ಣಿ ಶಾಸಕ ಸ್ಥಾನ ಭವಿಷ್ಯ ಇಂದು ನಿರ್ಧಾರ Read More »

ಮಹಿಳಾ ನೌಕರರಿಗೆ ಋತುಚಕ್ರ ರಜೆ ನೀಡುವುದು ಕಡ್ಡಾಯ : ಹೈಕೋರ್ಟ್‌ ತೀರ್ಪು

ಅಸಂಘಟಿತ ವಲಯಕ್ಕೂ ವಿಸ್ತರಿಸಲು ಸಮಗ್ರ ನೀತಿ ರೂಪಿಸುವಂತೆ ಸರ್ಕಾರಕ್ಕೆ ನಿರ್ದೇಶನ ಬೆಂಗಳೂರು : ಮಹಿಳೆಯರ ಆರೋಗ್ಯ ಮತ್ತು ಘನತೆಯನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಕರ್ನಾಟಕ ಹೈಕೋರ್ಟ್ 18 ರಿಂದ 52 ವರ್ಷದೊಳಗಿನ ಮಹಿಳಾ ಉದ್ಯೋಗಿಗಳಿಗೆ ಪ್ರತಿ ತಿಂಗಳು ಒಂದು ದಿನದ ವೇತನ ಸಹಿತ ಋತುಸ್ರಾವ ರಜೆ ನೀತಿಯನ್ನು ರಾಜ್ಯ ಸರ್ಕಾರ ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂದು ಕೋರ್ಟ್ ಎಂದು ನಿರ್ದೇಶಿಸಿದೆ. ಈ ಹಿಂದೆ ರಾಜ್ಯ ಸರ್ಕಾರ ಮಹಿಳೆಯರ ಮುಟ್ಟಿನ ರಜೆಗೆ ಅನುಮೋದನೆಯನ್ನು ನೀಡಿತ್ತು. ಆದರೆ ಕೆಲವೊಂದು ಕಂಪನಿಗಳು ಹಾಗೂ

ಮಹಿಳಾ ನೌಕರರಿಗೆ ಋತುಚಕ್ರ ರಜೆ ನೀಡುವುದು ಕಡ್ಡಾಯ : ಹೈಕೋರ್ಟ್‌ ತೀರ್ಪು Read More »

ಹಿಂದಿಗೆ ಗ್ರೇಡ್‌ ಬದಲು ಅಂಕ ನೀಡಲು ಹೈಕೋರ್ಟ್‌ ಆದೇಶ : ಸರ್ಕಾರಕ್ಕೆ ಮುಖಭಂಗ

ಈ ವರ್ಷದಿಂದಲೇ ಎಸ್‌ಎಸ್‌ಎಲ್‌ಸಿಯಲ್ಲಿ ತೃತೀಯ ಭಾಷೆಗೆ ಗ್ರೇಡ್‌ ವ್ಯವಸ್ಥೆ ತರಲು ಮುಂದಾಗಿದ್ದ ಸರ್ಕಾರಕ್ಕೆ ಹಿನ್ನಡೆ ಬೆಂಗಳೂರು : ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿ ಸೇರಿ ತೃತೀಯ ಭಾಷೆಗಳಿಗೆ ಕೇವಲ ಗ್ರೇಡ್ ನೀಡಲು ಮುಂದಾಗಿದ್ದ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ನಲ್ಲಿ ತೀವ್ರ ಮುಖಭಂಗವಾಗಿದೆ. ಹಿಂದಿ ವಿಷಯದಲ್ಲಿ ವಿದ್ಯಾರ್ಥಿಗಳು ಗಳಿಸಿದ ಅಂಕಗಳನ್ನು ಕಡ್ಡಾಯವಾಗಿ ದಾಖಲಿಸಬೇಕು ಮತ್ತು ಅವುಗಳನ್ನು ಒಟ್ಟು ಫಲಿತಾಂಶದ ಅಂಕಗಳ ಪಟ್ಟಿಯಲ್ಲಿ ಸೇರಿಸಬೇಕು ಎಂದು ಹೈಕೋರ್ಟ್ ಬುಧವಾರ ಮಹತ್ವದ ನಿರ್ದೇಶನ ನೀಡಿದೆ. ಇದು ಸರ್ಕಾರದ ನಿರ್ಧಾರದಿಂದ ಆತಂಕಕ್ಕೊಳಗಾಗಿದ್ದ ಸಾವಿರಾರು ವಿದ್ಯಾರ್ಥಿಗಳು ಮತ್ತು

ಹಿಂದಿಗೆ ಗ್ರೇಡ್‌ ಬದಲು ಅಂಕ ನೀಡಲು ಹೈಕೋರ್ಟ್‌ ಆದೇಶ : ಸರ್ಕಾರಕ್ಕೆ ಮುಖಭಂಗ Read More »

ತಾಯಿಯನ್ನು ಮಹಡಿ ಮೇಲಿಂದ ತಳ್ಳಿ ಕೊಂದ ಪುತ್ರ

ಬೆಂಗಳೂರು : ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿಯನ್ನು ಮಗನೇ ಬಹುಮಹಡಿ ಕಟ್ಟಡದಿಂದ ತಳ್ಳಿ ಕೊಲೆ ಮಾಡಿರುವ ಅಮಾನವೀಯ ಘಟನೆ ಬೆಂಗಳೂರಿನ ಆರ್‌ಆರ್ ನಗರ ಬೆಮಲ್ ಲೇಔಟ್‌ನಲ್ಲಿ ನಡೆದಿದೆ. ಪುತ್ರ ವೆಂಕಟೇಶ್ ಎನ್ನುವಾತ ತನ್ನ ಹೆತ್ತ ತಾಯಿ ಸಾವಿತ್ರಮ್ಮ(72) ಎಂಬವರನ್ನು ಮಹಡಿ ಮೇಲಿಂದ ತಳ್ಳಿ ಕೊಂದಿದ್ದಾನೆ. ಪಾರ್ಶ್ವವಾಯು ಪೀಡಿತರಾಗಿದ್ದ ಸಾವಿತ್ರಮ್ಮ ಕಳೆದ ಐದಾರು ವರ್ಷದಿಂದ ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಇದರಿಂದ ಬೇಸತ್ತು ತಾಯಿ ಸಾವಿತ್ರಮ್ಮಳನ್ನ 3ನೇ ಮಹಡಿಯಿಂದ ತಳ್ಳಿದ್ದಾನೆ. ಸುಮಾರು ವರ್ಷಗಳಿಂದ ಸಾವಿತ್ರಮ್ಮ ಅರೆ ಪ್ರಜ್ಞಾವಸ್ಥೆಯಲ್ಲಿದ್ದರು. ತಾಯಿ ಅವಸ್ಥೆಯಿಂದ ನೊಂದು

ತಾಯಿಯನ್ನು ಮಹಡಿ ಮೇಲಿಂದ ತಳ್ಳಿ ಕೊಂದ ಪುತ್ರ Read More »

ಭೀಕರ ಅಪಘಾತ : ಮಂತ್ರಾಲಯಕ್ಕೆ ಹೋಗುತ್ತಿದ್ದ 8 ಭಕ್ತರು ಸ್ಥಳದಲ್ಲೇ ಸಾವು

13 ಮಂದಿಗೆ ಗಂಭೀರ ಗಾಯ-ಬೊಲೆರೊ ವಾಹನಕ್ಕೆ ಗುದ್ದಿದ ಟ್ಯಾಂಕರ್‌ ಬೆಂಗಳೂರು: ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಮಂತ್ರಾಲಯ ತಾಲೂಕಿನ ಕಲ್ಲುದೇವಕುಂಟ ಗ್ರಾಮದ ಬಳಿ ಗುರುವಾರ ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕರ್ನಾಟಕದ ಎಂಟು ಮಂದಿ ಭಕ್ತರು ಸಾವನ್ನಪ್ಪಿದ್ದಾರೆ. ಚಿಕ್ಕಬಳ್ಳಾಪುರ ಮೂಲದ ಭಕ್ತರು ರಾಯರ ದರ್ಶನಕ್ಕಾಗಿ ಬೊಲೆರೊ ವಾಹನದಲ್ಲಿ ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದೆ. ಘಟನಾ ಸ್ಥಳಕ್ಕೆ ಮಂತ್ರಾಲಯ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಒಟ್ಟು 21 ಮಂದಿ ಭಕ್ತರು ಬೊಲೆರೊ ವಾಹನದಲ್ಲಿ

ಭೀಕರ ಅಪಘಾತ : ಮಂತ್ರಾಲಯಕ್ಕೆ ಹೋಗುತ್ತಿದ್ದ 8 ಭಕ್ತರು ಸ್ಥಳದಲ್ಲೇ ಸಾವು Read More »

ಭಜನಾ ತರಬೇತಿ, ಮಕ್ಕಳ ವ್ಯಕ್ತಿತ್ವ ವಿಕಸನ ಶಿಬಿರದ ಪೂರ್ವಭಾವಿ ಸಭೆ

ವಿಟ್ಲ: ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರ ದುರ್ಗಾನಗರ ಅಜ್ಜಿನಡ್ಕ ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ವಿಟ್ಲ ತಾಲೂಕು ಇವರ ಸಹಯೋಗದೊಂದಿಗೆ ಎ. 19 ಮತ್ತು ಎ. 2೦ ರಂದು ನಡೆಯುವ ಭಜನಾ ತರಬೇತಿ ಮತ್ತು ಮಕ್ಕಳ ವ್ಯಕ್ತಿತ್ವ ವಿಕಸನ ಶಿಬಿರ ಕಾರ್ಯಕ್ರಮದ ಪೂರ್ವಭಾವಿ ಸಭೆ ನಡೆಯಿತು. ಈ ಶಿಬಿರದಲ್ಲಿ ಮಕ್ಕಳಲ್ಲಿ ಧಾರ್ಮಿಕ ಜಾಗೃತಿ, ಅಂಗೈಯಲ್ಲಿ ಆರೋಗ್ಯ, ಕ್ರೀಡೆ, ಕಾನೂನು ಮಾಹಿತಿ, ಕಲೆ, ಸಾಹಿತ್ಯ ಸದಭಿರುಚಿ, ಭಜನಾ ತರಬೇತಿ ಮುಂತಾದ ವಿಷಯಾಧಾರಿತವಾಗಿ ಸಂಪನ್ಮೂಲ ವ್ಯಕ್ತಿಗಳಿಂದ ತರಗತಿಗಳು

ಭಜನಾ ತರಬೇತಿ, ಮಕ್ಕಳ ವ್ಯಕ್ತಿತ್ವ ವಿಕಸನ ಶಿಬಿರದ ಪೂರ್ವಭಾವಿ ಸಭೆ Read More »

error: Content is protected !!
Scroll to Top