ಕ್ಯಾನ್ಸರ್ ರೋಗಿಗಳಿಗೆ ಕೇರಳದ ಸರ್ಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ

ತಿರುವನಂತಪುರಂ: ಕೇರಳದ ಸರ್ಕಾರಿ ಬಸ್ಸುಗಳಲ್ಲಿ ಕ್ಯಾನ್ಸರ್ ರೋಗಿಗಳಿಗೆ ಉಚಿತವಾಗಿ ಪ್ರಯಾಣ ಮಾಡುವ ಅವಕಾಶವನ್ನು ಕೇರಳ ಸರ್ಕಾರ ನೀಡಿದೆ. ಈ ಬಗ್ಗೆ ಕೇರಳದ ಸಾರಿಗೆ ಸಚಿವ ಕೆ. ಬಿ. ಗಣೇಶ್ ಕುಮಾರ್ ಮಾತನಾಡಿದ್ದು, ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿರುವ ಎಲ್ಲಾ ರೋಗಿಗಳೂ ಕೇರಳದ ಸರ್ಕಾರಿ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದು ಎಂದು ತಿಳಿಸಿದ್ದಾರೆ. ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ ಪಡೆಯಲು ಆಗಾಗ್ಗೆ ತೆರಳಬೇಕಾಗಿದ್ದು, ಬಡ ರೋಗಿಗಳಿಗೆ ನೆರವಾಗುವ, ಆರ್ಥಿಕವಾಗಿ ಹೊರೆ ಕಡಿಮೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಇಂತಹ ಮಹತ್ವದ […]

ಕ್ಯಾನ್ಸರ್ ರೋಗಿಗಳಿಗೆ ಕೇರಳದ ಸರ್ಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ Read More »

ಧರ್ಮಗಳ ನಡುವೆ ದ್ವೇಷ ಹರಡುವ ಹೇಳಿಕೆ: SDPI ನಾಯಕ ರಿಯಾಜ್ ಕಡಂಬು ಬಂಧನ

ಉಡುಪಿ: ಪ್ರಚೋದನಾಕಾರಿ ಹೇಳಿಕೆ ನೀಡುವ ಮೂಲಕ ಧರ್ಮ ಧರ್ಮಗಳ ನಡುವೆ ದ್ವೇಷ ಹರಡುವ ಕೆಲಸ ಮಾಡಿರುವ ಆರೋಪದಲ್ಲಿ SDPI ರಾಜ್ಯ ಕಾರ್ಯದರ್ಶಿ ರಿಯಾಜ್ ಕಡಂಬು‌ನನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಉಡುಪಿಯಲ್ಲಿ ದೂರು ದಾಖಲಾಗಿತ್ತು‌. ಆರೋಪಿ ರಿಯಾಜ್ ಜಾಮೀನು ನಿಯಮಗಳನ್ನು ಪಾಲನೆ ಮಾಡದ ಹಿನ್ನೆಲೆಯಲ್ಲಿ ಆತನನ್ನು ಉಡುಪಿ ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿ ಆಜ್ಞೆ ನೀಡಿದೆ. ಆರೋಪಿ ರಿಯಾಜ್ ಸಾಮಾಜಿಕ ಸಾಮರಸ್ಯ ಕದಡುವ ಆಧಾರ ರಹಿತ ಹೇಳಿಕೆಗಳನ್ನು ನೀಡುತ್ತಿರುವುದು ಸಾಮಾಜಿಕ

ಧರ್ಮಗಳ ನಡುವೆ ದ್ವೇಷ ಹರಡುವ ಹೇಳಿಕೆ: SDPI ನಾಯಕ ರಿಯಾಜ್ ಕಡಂಬು ಬಂಧನ Read More »

ಮುಂಬೈ : ಕಟ್ಟಡದಿಂದ ಸಿಮೆಂಟ್‌ ಬ್ಲಾಕ್‌ ಬಿದ್ದು ಕಿನ್ನಿಗೋಳಿಯ ಯುವತಿ ಸಾವು

ನಡೆದುಕೊಂಡು ಹೋಗುತ್ತಿರುವಾಗ ತಲೆ ಮೇಲೆ ಬಿದ್ದ ಸಿಮೆಂಟ್‌ ಬ್ಲಾಕ್‌ ಮುಂಬೈ : ನಿರ್ಮಾಣ ಹಂತದ ಕಟ್ಟಡದಿಂದ ಸಿಮೆಂಟ್‌ ಬ್ಲಾಕ್‌ ತಲೆಮೇಲೆ ಬಿದ್ದು ಕಿನ್ನಿಗೋಳಿ ಮೂಲದ ಯುವತಿಯೊಬ್ಬರು ಮುಂಬೈಯಲ್ಲಿ ಮೃತಪಟ್ಟಿರುವ ದಾರುಣ ಘಟನೆ ಗುರುವಾರ ಸಂಭವಿಸಿದೆ. ಮುಂಬೈಯ ಜೋಗೇಶ್ವರಿ ಪೂರ್ವದ ಠಾಕೂರ್ ರಸ್ತೆಯಲ್ಲಿರುವ ಮಹಾರಾಜ ಭವನ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದ್ದು, ಕಿನ್ನಿಗೋಳಿ ಸಮೀಪದ ಪಕ್ಷಿಕೆರೆಯ 22 ವರ್ಷದ ಸಂಸ್ಕೃತಿ ಅಮೀನ್ ಎಂಬ ಯುವತಿ ಸಾವನ್ನಪ್ಪಿದ್ದಾರೆ. ಕಿನ್ನಿಗೋಳಿಯ ಪದ್ಮಾವತಿ ಲಾನ್ ಮತ್ತು ಮಲ್ಟಿಪರ್ಪಸ್ ಹಾಲ್ ಮತ್ತು ಮುಂಬೈಯ ಕೋಟ್ಯಾನ್

ಮುಂಬೈ : ಕಟ್ಟಡದಿಂದ ಸಿಮೆಂಟ್‌ ಬ್ಲಾಕ್‌ ಬಿದ್ದು ಕಿನ್ನಿಗೋಳಿಯ ಯುವತಿ ಸಾವು Read More »

ಸ್ನೇಹಿತರಿಂದ ವಿಡಿಯೋ ಬಹಿರಂಗ ಮಾಡುವ ಬೆದರಿಕೆ : ಲಾಡ್ಜ್‌ನಲ್ಲಿ ಯುವಕ ಆತ್ಮಹತ್ಯೆ

ಗೆಳತಿ ಜೊತೆಗಿದ್ದ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ ಸ್ನೇಹಿತರು ಕಾರ್ಕಳ : ತನ್ನ ಗೆಳತಿಯೊಂದಿಗೆ ಇರುವ ಖಾಸಗಿ ವಿಡಿಯೋವನ್ನು ಸೋರಿಕೆ ಮಾಡುವುದಾಗಿ ಸ್ನೇಹಿತರು ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಮನನೊಂದ ಯುವಕನೊಬ್ಬ ಲಾಡ್ಜ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದುರಂತ ಘಟನೆ ಗುರುವಾರ ಸಂಜೆ ಬೆಳ್ಮಣ್‌ನಲ್ಲಿ ನಡೆದಿದೆ. ನಿಟ್ಟೆ ಗ್ರಾಮದ ಪರಪ್ಪಾಡಿ ನಿವಾಸಿ ಅಭಿಷೇಕ್ ಆಚಾರ್ಯ (23) ಆತ್ಮಹತ್ಯೆ ಮಾಡಿಕೊಂಡ ಯುವಕ. ಅಭಿಷೇಕ್ ಮಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದರು ಮತ್ತು ಸ್ಥಳೀಯ ಯುವತಿಯನ್ನು ಪ್ರೀತಿಸುತ್ತಿದ್ದರು. ಇಬ್ಬರ ಸಂಬಂಧ ಬಹಳ

ಸ್ನೇಹಿತರಿಂದ ವಿಡಿಯೋ ಬಹಿರಂಗ ಮಾಡುವ ಬೆದರಿಕೆ : ಲಾಡ್ಜ್‌ನಲ್ಲಿ ಯುವಕ ಆತ್ಮಹತ್ಯೆ Read More »

ಯಕ್ಷ ಮಿತ್ರರು ಬೆಂಗಳೂರು ಟ್ರಸ್ಟ್ (ರಿ.) ಇದರ ನೂತನ ಗೌರವಾಧ್ಯಕ್ಷರಾಗಿ ಆರ್.ಕೆ.ಭಟ್ ಬೆಳ್ಳಾರೆ ಆಯ್ಕೆ

ಯಕ್ಷ ಮಿತ್ರರು ಬೆಂಗಳೂರು ಟ್ರಸ್ಟ್ (ರಿ.) ಬೆಂಗಳೂರು ಇದರ ನೂತನ ಗೌರವಾಧ್ಯಕ್ಷರಾಗಿ ಬೆಂಗಳೂರು ಮಹಾನಗರದಲ್ಲಿ ಪ್ರಸ್ತುತ ನೆಲೆಸಿರುವ ಯಕ್ಷಗಾನ ಕಲಾ ಪೋಷಕ ಆರ್.ಕೆ.ಭಟ್ ಬೆಳ್ಳಾರೆ  ಇವರನ್ನು ಆಯ್ಕೆಮಾಡಲಾಗಿದೆ ಎಂದು ಟ್ರಸ್ಟ್ ನ ಸರ್ವ ಸದಸ್ಯರ ಸಭೆಯ ಬಳಿಕ ಅಧ್ಯಕ್ಷ ವೆಂಕಟೇಶ್ ರಾವ್ ಕೆ ಪ್ರಕಟಿಸಿದ್ದಾರೆ. 2019ರಲ್ಲಿ ‘ಯಕ್ಷಮಿತ್ರರು ಬೆಂಗಳೂರು’ ಯಕ್ಷಗಾನಾಸಕ್ತರ ವಾಟ್ಸಾಪ್ ಗ್ರೂಪ್ ರಚನೆಯಾಗಿತ್ತು. ಬಳಿಕ ಅದರ ಮೂಲಕ ಕಲೆ, ಯಕ್ಷಗಾನ, ತಾಳಮದ್ದಳೆ ಪೋಷಿಸುವ ಸದುದ್ದೇಶದಿಂದ ಬೆಂಗಳೂರಿನಲ್ಲಿ ಯಕ್ಷ ಮಿತ್ರರು ಬೆಂಗಳೂರು ಟ್ರಸ್ಟ್ ಎಂದು 2024 ರಲ್ಲಿ

ಯಕ್ಷ ಮಿತ್ರರು ಬೆಂಗಳೂರು ಟ್ರಸ್ಟ್ (ರಿ.) ಇದರ ನೂತನ ಗೌರವಾಧ್ಯಕ್ಷರಾಗಿ ಆರ್.ಕೆ.ಭಟ್ ಬೆಳ್ಳಾರೆ ಆಯ್ಕೆ Read More »

ಅಫಘಾನಿಸ್ತಾನ ಮೇಲೆ ದಿಢೀರ್‌ ವಾಯುದಾಳಿ ನಡೆಸಿದ ಪಾಕಿಸ್ತಾನ

ರಾಜಧಾನಿ ಕಾಬೂಲ್‌ ಗುರಿಮಾಡಿಕೊಂಡು ಅಟ್ಯಾಕ್‌ ಕಾಬೂಲ್ : ಅತ್ತ ಇಸ್ರೇಲ್‌-ಹಮಾಸ್‌ ನಡುವಿನ ಸುದೀರ್ಘ ಯುದ್ಧ ಶಮನವಾಗುತ್ತಿದ್ದಂತೆ ಇತ್ತ ಗುರುವಾರ ರಾತ್ರಿ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ ನಗರದ ಮೇಲೆ ಪಾಕಿಸ್ತಾನ ಯುದ್ಧ ವಿಮಾನಗಳನ್ನು ಬಳಸಿ ದಿಢೀರ್‌ ವಾಯುದಾಳಿ ನಡೆಸಿದೆ. ಕಾಬೂಲ್ ನಗರದಲ್ಲಿ ಸ್ಫೋಟದ ಶಬ್ದ ಕೇಳಿ ಬಂದಿದೆ. ಯಾರೂ ಭಯಪಡುವ ಅಗತ್ಯವಿಲ್ಲ. ಘಟನೆಯ ತನಿಖೆ ನಡೆಯುತ್ತಿದೆ, ಇಲ್ಲಿಯವರೆಗೆ ಯಾವುದೇ ಹಾನಿಯ ವರದಿ ಬಂದಿಲ್ಲ ಎಂದು ಅಫ್ಘಾನ್-ತಾಲಿಬಾನ್ ವಕ್ತಾರರು ತಿಳಿಸಿದ್ದಾರೆ. ವರದಿಗಳ ಪ್ರಕಾರ ಕಾಬೂಲ್‌ನ ಪೂರ್ವ ಭಾಗದಲ್ಲಿರುವ ತಾಲಿಬಾನ್‌ ಸರ್ಕಾರದ

ಅಫಘಾನಿಸ್ತಾನ ಮೇಲೆ ದಿಢೀರ್‌ ವಾಯುದಾಳಿ ನಡೆಸಿದ ಪಾಕಿಸ್ತಾನ Read More »

ಚಿನ್ನ, ಬೆಳ್ಳಿ ಬೆಲೆ ಏರಿಕೆ ನಾಗಾಲೋಟ : ಮದುವೆ ಸೀಸನ್‌ನಲ್ಲೇ ಚಿಂತೆಗೆ ಕಾರಣವಾದ ದರ

ಚಿನ್ನ 10 ಗ್ರಾಂಗೆ 1.24 ಲ.ರೂ; ಬೆಳ್ಳಿ ಕೆಜಿಗೆ 1.60 ಲಕ್ಷ ರೂ. ಬೆಂಗಳೂರು: ಚಿನ್ನ ಮತ್ತು ಬೆಳ್ಳಿಯ ಬೆಲೆ ಮತ್ತೆ ಗಗನಮುಖಿಯಾಗಿದೆ. ಹಬ್ಬಗಳು, ಮದುವೆ ಸೀಸನ್‌ ಶುರುವಾಗಲೇ ಚಿನ್ನ ಮತ್ತು ಬೆಳ್ಳಿಯ ಬೆಲೆ ಏರಿಕೆಯಾಗುತ್ತಿರುವುದು ಜನರ ಚಿಂತೆಗೆ ಕಾರಣವಾಗುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಬಂಗಾರ ಮತ್ತು ಬೆಳ್ಳಿ ಎರಡೂ ಮಧ್ಯಮ ಮತ್ತು ಬಡ ವರ್ಗದವರಿಗೆ ಕೈಗೆಟುಕದಂತಾಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 1,24,000 ರೂ. ಮತ್ತು ಬೆಳ್ಳಿ ಕೆ.ಜಿಗೆ 1,60,000 ರೂ. ಆಗಿದೆ. ಪ್ರಮುಖವಾಗಿ

ಚಿನ್ನ, ಬೆಳ್ಳಿ ಬೆಲೆ ಏರಿಕೆ ನಾಗಾಲೋಟ : ಮದುವೆ ಸೀಸನ್‌ನಲ್ಲೇ ಚಿಂತೆಗೆ ಕಾರಣವಾದ ದರ Read More »

ಕಾಂಗ್ರೆಸ್‌ ಶಾಸಕ ವೀರೇಂದ್ರ ಪಪ್ಪಿ ಮನೆಯ ಲಾಕರ್‌ನಲ್ಲಿತ್ತು 40 ಕೆಜಿ ಚಿನ್ನ

ಆನ್‌ಲೈನ್‌ ಬೆಟ್ಟಿಂಗ್‌ನಲ್ಲಿ ಸಂಪಾದಿಸಿದ ಅಪಾರ ಅಕ್ರಮ ಸಂಪತ್ತು ಬಯಲು ಬೆಂಗಳೂರು: ಅಕ್ರಮ ಬೆಟ್ಟಿಂಗ್‌ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಕಾಂಗ್ರೆಸ್‌ ಶಾಸಕ ವೀರೇಂದ್ರ ಪಪ್ಪಿ ಮನೆ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಮತ್ತೊಮ್ಮೆ ದಾಳಿ ಮಾಡಿದಾಗ ಲಾಕರ್‌ನಲಿದ್ದ 51 ಕೋಟಿ ರೂ. ಮೌಲ್ಯದ 40 ಕೆಜಿ ಚಿನ್ನದ ಗಟ್ಟಿ ಪತ್ತೆಯಾಗಿದೆ. ಇ.ಡಿ. ಅಧಿಕಾರಿಗಳು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯ ಫೆಡರಲ್ ಬ್ಯಾಂಕ್‌ ಸೇರಿದಂತೆ ಪಟ್ಟಣದ ಹಲವೆಡೆ ಶೋಧ ನಡೆಸಿದ್ದಾರೆ. ವೀರೇಂದ್ರ ಪಪ್ಪಿ ಆನ್‌ಲೈನ್ ಬೆಟ್ಟಿಂಗ್‌ನಲ್ಲಿ ಅಲ್ಪಾವಧಿಯಲ್ಲಿಯೇ 2,000 ಕೋಟಿ ರೂ. ಲಾಭಗಳಿಸಿದ್ದಾರೆ

ಕಾಂಗ್ರೆಸ್‌ ಶಾಸಕ ವೀರೇಂದ್ರ ಪಪ್ಪಿ ಮನೆಯ ಲಾಕರ್‌ನಲ್ಲಿತ್ತು 40 ಕೆಜಿ ಚಿನ್ನ Read More »

ಈಡೇರದ ಬೇಡಿಕೆ : ಮತ್ತೆ ಮುಷ್ಕರದತ್ತ ಸಾರಿಗೆ ನೌಕರರು

ಅಕ್ಟೋಬರ್‌ 15ರಿಂದ ಉಪವಾಸ ಸತ್ಯಾಗ್ರಹದ ನಿರ್ಧಾರ ಬೆಂಗಳೂರು : ಸರ್ಕಾರ ಯಾವ ಬೇಡಿಕೆಯನ್ನೂ ಈಡೇರಿಸದಿರುವ ಹಿನ್ನೆಲೆಯಲ್ಲಿ ಕೆಎಸ್ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ಸಾರಿಗೆ ನಿಗಮಗಳ ನೌಕರರು ಮತ್ತೆ ಸಾರಿಗೆ ಮುಷ್ಕರಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮುಷ್ಕರಕ್ಕೆ ಮುಂದಾಗಿದ್ದು, ಮೊದಲ ಹಂತದಲ್ಲಿ ಅಕ್ಟೋಬರ್ 15 ರಿಂದ 19ರ ವರೆಗೆ ಉಪವಾಸ ಸತ್ಯಾಗ್ರಹ ಮಾಡಲು ಚಿಂತನೆ ನಡೆಸಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಈ ಐದು ದಿನಗಳ ಕಾಲ ಸರ್ಕಾರಿ ಬಸ್‌ ಸಂಚಾರ ಅಸ್ತವ್ಯಸ್ತವಾಗುವ ಸಾಧ್ಯತೆಯಿದೆ. ಕಳೆದ ಆಗಸ್ಟ್‌

ಈಡೇರದ ಬೇಡಿಕೆ : ಮತ್ತೆ ಮುಷ್ಕರದತ್ತ ಸಾರಿಗೆ ನೌಕರರು Read More »

ನಿರೀಕ್ಷಣಾ ಜಾಮೀನು ಅರ್ಜಿ ವಜಾ : ಬಂಧನ ಭೀತಿಯಲ್ಲಿ ತಿಮರೋಡಿ

ಮನೆಯಲ್ಲಿ ಅಕ್ರಮವಾಗಿ ಶಸ್ತ್ರಾಸ್ತ್ರ ಇಟ್ಟುಕೊಂಡ ಪ್ರಕಣ ಧರ್ಮಸ್ಥಳ : ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಗುರುವಾರ ನಗರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಜಾಗೊಳಿಸಿದೆ. ತನ್ನ ವಿರುದ್ಧ ದಾಖಲಾಗಿರುವ ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಪ್ರಕರಣಕ್ಕೆ ಸಂಬಂಧಿಸಿ ಮಹೇಶ್ ಶೆಟ್ಟಿ ತಿಮರೋಡಿ ನಿರೀಕ್ಷಣಾ ಜಾಮೀನು ಕೋರಿದ್ದರು. ತಿಮರೋಡಿ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶ ಬಸವರಾಜ್

ನಿರೀಕ್ಷಣಾ ಜಾಮೀನು ಅರ್ಜಿ ವಜಾ : ಬಂಧನ ಭೀತಿಯಲ್ಲಿ ತಿಮರೋಡಿ Read More »

error: Content is protected !!
Scroll to Top